
BBK 13 | ‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’ – ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು
‘ಬಿಗ್ ಬಾಸ್ ಕನ್ನಡ’ ಮನೆಯಲ್ಲಿ ನಡೆಯುತ್ತಿರುವ ‘ರಾಕ್ಷಸರು ಹಾಗೂ ಗಂಧರ್ವರು’ ಟಾಸ್ಕ್ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೌದು.. ಟಾಸ್ಕ್ನ ಭಾಗವಾಗಿ ಸ್ಪರ್ಧಿಗಳ ನಡುವೆ ನಡೆಯುತ್ತಿರುವ ಮಾತಿನ ಚಕಮಕಿ ಇದೀಗ ವೈಯಕ್ತಿಕ ಮಟ್ಟಕ್ಕೂ ತಲುಪಿದೆ.
ಮಿತಿಮೀರಿದ ಮಹಾಕವಿ ಮಂಜು ಮಾತು!
ಟಾಸ್ಕ್ ವೇಳೆ ರಾಕ್ಷಸನ ಅವತಾರದಲ್ಲಿದ್ದ ಮಂಜು ಹಾಗೂ ಯಶಸ್ ನಡುವೆ ಭಾರಿ ವಾಗ್ವಾದ ನಡೆದಿದೆ. ಸ್ವಿಮ್ಮಿಂಗ್ ಪೂಲ್ ಬಳಿಕ ಹಾಗೂ ಟಾಸ್ಕ್ ಅಂಗಳದಲ್ಲಿ ಯಶಸ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮಂಜು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
READ THIS : ದೊಡ್ಮನೆಯಿಂದ ಲಿಖಿತ್ ಔಟ್ – ಮಾಡರ್ನ್ ಮಹಾಕವಿ ಮಂಜ ಭಾವುಕ!

‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’
ಈ ವೇಳೆ ಮಂಜು, ಯಶಸ್ ವಿರುದ್ಧ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ, ‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’ ಎಂಬಂತಹ ಕಠಿಣ ಹಾಗೂ ನಿಂದನೀಯ ಪದಗಳನ್ನು ಬಳಸಿ ವಾಗ್ದಾಳಿ ನಡೆಸಿದ್ದಾರೆ. ಮಂಜು ಅವರ ಈ ಮಾತುಗಳಿಂದ ಬಿಗ್ ಬಾಸ್ ಮನೆಯ ವಾತಾವರಣ ಕಾವೇರಿದೆ.
BBK 13- ಕಣ್ಣೀರು ಹಾಕಿದ ಯಶಸ್
ಇನ್ನು ಮಂಜನ ಮಾತಿಗೆ ತಕ್ಷಣ ಪ್ರತಿಕ್ರಿಯಿಸಿದ ಯಶಸ್, “ಮಾತನಾಡುವಾಗ ಮಾತು ಮತ್ತು ಪದಬಳಕೆ ಬಗ್ಗೆ ಎಚ್ಚರಿಕೆಯಿಂದ ಇರು” ಎಂದು ನೇರವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಮಂಜು ಅವರ ಈ ವೈಯಕ್ತಿಕ ಆರೋಪಗಳು ಹಾಗೂ ಆಕ್ರೋಶದ ಮಾತುಗಳಿಂದಾಗಿ ಯಶಸ್ ಕಣ್ಣೀರು ಹಾಕಿದ್ದಾರೆ.
ದೊಡ್ಮನೆಯಲ್ಲಿ ಯಶಸ್ ಅವರು ಹೆಚ್ಚಾಗಿ ಮಹಿಳಾ ಸ್ಪರ್ಧಿಗಳೊಂದಿಗೆ ಇರ್ತಾರೆ. ಮನೆಯಲ್ಲಿ ಆಸಿಯಾ ಫಿರ್ದೋಸ್ ಹಾಗೂ ಸೌಂದರ್ಯ ಶೆಟ್ಟಿ ಅವರೊಂದಿಗೆ ಯಶಸ್ ಸದಾ ಆಪ್ತವಾಗಿ ಕಾಲ ಕಳೆಯುತ್ತಾ ಫ್ಲರ್ಟ್ ಮಾಡುತ್ತಿದ್ದಾರೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಲೇ ಇದೆ.

MUST WATCH : ರಾಜ್ಯದ ಜನರ ಜೇಬಿಗೆ ಡಬಲ್ ಶಾಕ್ ಸಿಎಂ ವಿರುದ್ಧ ಆರ್.ಅಶೋಕ್ ವಾಗ್ದಾಳಿ




