BBK 13: ಟಾಸ್ಕ್ನಲ್ಲಿ ಕೀಳು ಪದ ಬಳಕೆ – 2ನೇ ಬಾರಿ ಮಂಜ ಜೈಲಿಗೆ

ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಟಾಸ್ಕ್ಗಿಂತ ಜಗಳಗಳೇ ಹೆಚ್ಚು ಸದ್ದು ಮಾಡ್ತಿವೆ. ಈ ವಾರ ಬಿಗ್ಬಾಸ್ ನೀಡಿದ್ದ ಗಂಧರ್ವ ಮತ್ತು ರಾಕ್ಷಸ ಟಾಸ್ಕ್ನಲ್ಲಿ ಮಾಡ್ರನ್ ಕವಿ ಮಂಜ ಹಾಗೂ ಯಶಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಟಾಸ್ಕ್ನಲ್ಲಿ ಮಂಜ ತೋರಿದ ವರ್ತನೆಗೆ ಮನೆಯ ಇತರ ಸ್ಪರ್ಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಈ ವಾರವೂ ಮಂಜನಿಗೆ ಕಳಪೆ ಪಟ್ಟ ಕೊಟ್ಟು ಜೈಲಿಗೆ ಕಳುಹಿಸಿದ್ದಾರೆ.
ಸ್ತ್ರೀ ವ್ಯಾಮೋಹಿ
ಇನ್ನು ಗಂಧರ್ವ ಮತ್ತು ರಾಕ್ಷಸ ಟಾಸ್ಕ್ನಲ್ಲಿ ಮಾಡ್ರನ್ ಕವಿ ಮಂಜ ರಾಕ್ಷಸ ತಂಡದಲ್ಲಿದ್ದರು. ಎದುರಾಳಿ ಗಂಧರ್ವ ತಂಡದ ಸ್ಪರ್ಧಿಗಳಿಗೆ ತೊಂದರೆ ಕೊಡುವುದು ಅವರ ಟಾಸ್ಕ್ನ ಭಾಗವಾಗಿತ್ತು. ಆದರೆ ಆಟದ ವೇಳೆ ಮಂಜ, ಯಶಸ್ ಅವರನ್ನು ಸ್ತ್ರೀ ವ್ಯಾಮೋಹಿ ಎಂದು ಹೇಳಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದೆ.
READ THIS : ಯಶಸ್ ವಿರುದ್ಧ ಮಿತಿಮೀರಿದ ಮಾಡ್ರನ್ ಮಹಾಕವಿ ಮಂಜು ಮಾತು!

ಮಂಜನನ್ನು ನಾಯಿ ಕೆಣಕಿದ ಯಶಸ್
ನಂತರ ಟಾಸ್ಕ್ನಲ್ಲಿ ತಂಡಗಳ ಪಾತ್ರ ಬದಲಾದಾಗ ಯಶಸ್ ಕೂಡ ಮಂಜ ಅವರನ್ನು ನಾಯಿ ಎಂದು ಪದೇಪದೇ ಕರೆದು ಕೆಣಕಿದ್ದಾರೆ ಎನ್ನಲಾಗಿದೆ. ಇದರಿಂದ ಇಬ್ಬರ ನಡುವಿನ ಜಗಳ ಮತ್ತಷ್ಟು ತೀವ್ರಗೊಂಡಿದ್ದು, ಟಾಸ್ಕ್ ಪೂರ್ತಿ ಪರಸ್ಪರ ಆರೋಪ–ಪ್ರತ್ಯಾರೋಪಗಳು ಮುಂದುವರಿದಿವೆ.
2ನೇ ಬಾರಿ ಮಂಜ ಜೈಲಿಗೆ
ಇನ್ನು ಟಾಸ್ಕ್ ವೇಳೆ ಮಾಡ್ರನ್ ಕವಿ ಮಂಜ ಪ್ರಾಪರ್ಟಿಯನ್ನು ಹಾಳು ಮಾಡಿದ್ದು, ಆಟದ ವೇಳೆ ಮಂಜ ತೋರಿದ ಅತಿರೇಕದ ವರ್ತನೆ ಸರಿಯಲ್ಲ ಎಂದು ಮನೆಯ ಹಲವು ಸ್ಪರ್ಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಶಸ್, ಸೌಂದರ್ಯ ಪ್ರಶಾಂತ್ ಸೇರಿದಂತೆ ಮನೆಯ ಹಲವು ಸ್ಪರ್ಧಿಗಳು ಮಂಜನಿಗೆ ಈ ವಾರದ ಕಳಪೆ ಪಟ್ಟ ನೀಡಿದ್ದಾರೆ. ಇದರ ಪರಿಣಾಮ ಮಾಡ್ರನ್ ಕವಿ ಮಂಜ ಎರಡನೇ ಬಾರಿ ಬಿಗ್ಬಾಸ್ ಜೈಲು ಸೇರಿದ್ದಾರೆ. ಜೊತೆಗೆ ಈ ವಾರದ ಎಲಿಮಿನೇಷನ್ಗೆ ನೇರವಾಗಿ ನಾಮಿನೇಟ್ ಆಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
MUST WATCH : FREE FIRE GAMEನಿಂದ ದುರಂತ – 13ರ ಬಾಲಕನ ಬದುಕೇ ಅಂತ್ಯ.!




