
TUMAKURU : ನಾಲ್ಕು ನಿಮಿಷಕ್ಕೆ ಬರೋಬ್ಬರಿ 277 ಪೋಟೋ ಕ್ಲಿಕ್.! ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಬರೆದ ತುಮಕೂರಿನ ಬೃಂದಾ
ಸಾಧನೆಗೆ ವಯಸ್ಸಿನ ಮಿತಿಯಿಲ್ಲ. ಆಸಕ್ತಿ, ಏಕಾಗ್ರತೆ ಮತ್ತು ಸಾಧಿಸಬೇಕೆಂಬ ಛಲವಿದ್ದರೆ ಅಸಾಧ್ಯವಾದುದನ್ನೂ ಸಾಧ್ಯವಾಗಿಸಬಹುದು.
ಇದಕ್ಕೆ ಸಾಕ್ಷಿ ತುಮಕೂರಿನ ಈ ಯುವತಿ. ಮೊಬೈಲ್ನಲ್ಲಿ ಕೇವಲ ನಾಲ್ಕೇ ನಿಮಿಷಗಳಲ್ಲಿ ಬರೋಬ್ಬರಿ 277 ವಿದ್ಯಾರ್ಥಿಗಳ ಫೋಟೋಗಳನ್ನು ಸೆರೆಹಿಡಿಯುವುದು ಅಂದ್ರೆ ಸಾಮಾನ್ಯ ಮಾತಲ್ಲ. ಆದ್ರೆ ತುಮಕೂರಿನ ಈ ಯುವತಿ ಇಂತಹ ಅಪರೂಪದ ಸಾಧನೆಗೈದು ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನ ಮನ್ನಣೆಗಳಿಸಿದ್ದಾಳೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ತುಮಕೂರಿನ ಬೃಂದಾ
ಇಲ್ಲಿ ಕಾಣ್ತಿರೋ ಯುವತಿಯ ಹೆಸರು ಬೃಂದಾ ಎ.ಎನ್. ತುಮಕೂರು ತಾಲೂಕಿನ ಊಡಿಗೆರೆ ಸಮೀಪದ ಅಯ್ಯಪ್ಪ ಪಾಳ್ಯದ ನಿವಾಸಿ. ವಯಸ್ಸು ಕೇವಲ 23 ವರ್ಷ. ಮೊಬೈಲ್ ಫೋಟೋಗ್ರಫಿಯಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಬೃಂದಾ, ತಮ್ಮ ಪ್ರತಿಭೆ ಮತ್ತು ಏಕಾಗ್ರತೆಯಿಂದಲೇ ಇದೀಗ ಗಮನ ಸೆಳೆದಿದ್ದಾರೆ. ಶಾಲೆಯ ಹೊರಭಾಗದಲ್ಲಿದ್ದ 277 ವಿದ್ಯಾರ್ಥಿಗಳ ಫೋಟೋಗಳನ್ನು ಕೇವಲ ನಾಲ್ಕು ನಿಮಿಷಗಳಲ್ಲಿ ಮೊಬೈಲ್ ಮೂಲಕ ಸೆರೆಹಿಡಿದು ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ 10 ನಿಮಿಷಗಳಲ್ಲಿ 150 ಫೋಟೋಗಳನ್ನು ಸೆರೆಹಿಡಿದಿದ್ದ ದಾಖಲೆಯನ್ನು ಮೀರಿ ಸಾಧನೆ ಮಾಡಿರುವ ಈಕೆ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. 2026ರ ಸೆಪ್ಟೆಂಬರ್ 5ರಂದು ಈ ಸಾಧನೆ ದೃಢೀಕರಿಸಲ್ಪಟ್ಟಿದ್ದು, ‘IBR Achiever’ ಗೌರವವೂ ಲಭಿಸಿದೆ.
READ THIS : ತಿಪಟೂರಿನ SVP Vidyanidhi V Techno ಕಾಲೇಜಿನ ವಿದ್ಯಾರ್ಥಿಗಳ ಅದ್ಭುತ ಸಾಧನೆ..!!

ತುಮಕೂರು ಜಿಲ್ಲೆಗೆ ಹೆಮ್ಮೆ
ಇನ್ನು ಬೃಂದಾ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಸನ್ಮಾನಿಸಿ ಸಾಧನೆಯನ್ನು ಗುರುತಿಸಿದ್ದಾರೆ.
ನಾಲ್ಕು ನಿಮಿಷಗಳಲ್ಲಿ 277 ಫೋಟೋಗಳನ್ನು ಸೆರೆಹಿಡಿಯುವುದು ಅಂದ್ರೆ ಕೇವಲ ವೇಗವಷ್ಟೇ ಅಲ್ಲ. ಪ್ರತಿಯೊಂದು ಚಿತ್ರವನ್ನೂ ಸರಿಯಾದ ಸಮಯದಲ್ಲಿ ಸೆರೆಹಿಡಿಯಲು ಏಕಾಗ್ರತೆ, ವೀಕ್ಷಣಾ ಸಾಮರ್ಥ್ಯ ಮತ್ತು ನಿರಂತರ ಅಭ್ಯಾಸವೂ ಅಗತ್ಯ. ಈ ಎಲ್ಲಾ ಕೌಶಲಗಳನ್ನು ಬಳಸಿಕೊಂಡು ಬೃಂದಾ ಮಾಡಿರುವ ಸಾಧನೆ ತುಮಕೂರು ಜಿಲ್ಲೆಗೆ ಹೆಮ್ಮೆ ತಂದಿದೆ.
ತಾಯಿಯ ಕನಸಿಗೆ ಮಗಳ ಸಾಧನೆಯ ಅರ್ಪಣೆ..!
ಆದರೆ ಈ ಸಾಧನೆಯ ಸಂಭ್ರಮದ ಹಿಂದೆ ಒಂದು ನೋವಿನ ಕಥೆಯೂ ಇದೆ. ಬೃಂದಾ ತಾಯಿ ಎರಡು ತಿಂಗಳ ಹಿಂದಷ್ಟೇ ನಿಧನರಾಗಿದ್ದು, ನನ್ನ ತಾಯಿ ಬದುಕಿದ್ದರೆ ಈ ಸಾಧನೆಯನ್ನು ಕಂಡು ತುಂಬಾ ಖುಷಿಪಡುತ್ತಿದ್ದರು. ಎಂದು ಭಾವುಕರಾಗುತ್ತಾರೆ.. ತಾಯಿಯ ಪ್ರೋತ್ಸಾಹದ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಬ್ರುಂದಾ, ಮೊಬೈಲ್ ಫೋಟೋಗ್ರಫಿಯಲ್ಲಿ ಹೊಸ ದಾಖಲೆ ನಿರ್ಮಿಸುವ ಮೂಲಕ ಯುವಜನತೆಗೆ ಮಾದರಿಯಾಗಿದ್ದಾರೆ.

ಯುವತಿಯ ಅಪರೂಪದ ಸಾಧನೆ
ಒಟ್ಟಿನಲ್ಲಿ, ಕೇವಲ ನಾಲ್ಕು ನಿಮಿಷಗಳಲ್ಲಿ 277 ಫೋಟೋಗಳನ್ನು ಸೆರೆಹಿಡಿದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿರುವ ಬೃಂದಾ ಪ್ರತಿಭೆ
ಇನ್ನಷ್ಟು ಎತ್ತರಕ್ಕೆ ಬೆಳೆಯಲಿಹೊಸ ಹೊಸ ದಾಖಲೆಗಳು ಅವರ ಹೆಸರಿಗೆ ಸೇರ್ಪಡೆಯಾಗಲಿ ಎಂಬುದೇ ಎಲ್ಲರ ಆಶಯ.
MUST WATCH : ಆಗ್ನೇಯ MLC Electionನಲ್ಲಿ ಕಾಂಗ್ರೆಸ್ಗೆ ಬಂಡಾಯದ ಬಿಸಿ! Shashi Hulikunteಗೆ ಸೋಲಾ..? ಗೆಲುವಾ…?





