POLITICAL NEWS : ಸ್ಟಿಂಗ್ ತಂತ್ರಕ್ಕೆ ವ್ಯಾಪಕ ವಿರೋಧ: ಇದು ಚಾರಿತ್ರ್ಯಹರಣದ ಕೆಟ್ಟ ಪ್ರಯತ್ನ ಎಂದ ಕೈಪಡೆ, ಯಾರು ಏನಂದ್ರು?

ರಾಜ್ಯ ರಾಜಕೀಯದಲ್ಲಿ ಅತ್ಯಂತ ಕೆಟ್ಟ ಸಂಪ್ರದಾಯ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನು ಸ್ಟಿಂಗ್ ಆಪರೇಷನ್ ರಾಜಕೀಯದ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
READ THIS : ಸ್ಟಿಂಗ್ ವಿಚಾರವಾಗಿ ಜೋರಾಯ್ತು ಚರ್ಚೆ – ಸಿದ್ದು ಟಾರ್ಗೆಟ್ ಮಾಡಲು ಸಂಚು?
ಈ ಕೆಟ್ಟ ಪ್ರಯತ್ನಗಳನ್ನು ನಾನು ಖಂಡಿಸುತ್ತೇನೆ
ಇನ್ನು ಸ್ಟಿಂಗ್ ವಿಚಾರದ ಕುರಿತು ಹೆಚ್.ಸಿ ಮಹದೇವಪ್ಪ ಟ್ವೀಟ್ ಮಾಡಿದ್ದು, 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಸಿದ್ಧರಾಮಯ್ಯನವರ ಮೇಲೆ ಆಗುತ್ತಿರುವ ಈ ರೀತಿಯ ಕೆಟ್ಟ ಅಪಪ್ರಚಾರದ ನಡವಳಿಕೆಗಳನ್ನು ನಾನು ಅವರಲ್ಲಿ ಕಂಡಿಲ್ಲ. ಸುದೀರ್ಘ ಅವಧಿಯ ಸಾರ್ವಜನಿಕ ಬದುಕಿನ ಹಾದಿಯನ್ನು ಸವೆಸಿರುವ ಸಿದ್ಧರಾಮಯ್ಯನವರಂತಹ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದು ಮತ್ತು ಅವರ ಚಾರಿತ್ರ್ಯಹರಣ ಮಾಡುವ ಈ ಕೆಟ್ಟ ಪ್ರಯತ್ನಗಳನ್ನು ನಾನು ಖಂಡಿಸುತ್ತೇನೆ.
POLITICAL NEWS – ಇದು ನಿಜಕ್ಕೂ ಖಂಡನಾರ್ಹ
ಸಾರ್ವಜನಿಕ ಜೀವನದಲ್ಲಿ ನಮ್ಮ ವಿಚಾರ ಸಿದ್ಧಾಂತಗಳಿಂದ ವ್ಯಕ್ತಿಯನ್ನು ಎದುರಿಸಬೇಕೇ ವಿನಃ ಈ ರೀತಿಯ ತಂತ್ರಗಾರಿಕೆ ಬಳಸುವುದು ಸರಿಯಲ್ಲ. ಇದು ನಿಜಕ್ಕೂ ಖಂಡನಾರ್ಹವಾಗಿದ್ದು ಇಂತಹ ಕೃತ್ಯದ ಹಿಂದಿರುವ ಜನರನ್ನು ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
MUST WATCH : ನಾಯಕರ ಮಗನಾದ್ರೆ ಹೋರಾಟಕ್ಕೆ ಬಾ – ಕಿಚ್ಚ ಸುದೀಪ್ಗೆ ಉಗ್ರಪ್ಪ ಸವಾಲ್





