
BENGALURU : ಡ್ರಗ್ಸ್ ಚಟಕ್ಕೆ ಬಿದ್ದು ಖಿನ್ನತೆಗೆ ಜಾರಿದ್ದ ಯುವಕ ಸಾವು
ಬೆಂಗಳೂರಿನಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಜೆ.ಜೆ. ನಗರದ ಪಾದರಾಯನಪುರ ನಿವಾಸಿ ಶಹಬಾಜ್ ಮೃತ ದುರ್ದೈವಿ.
READ THIS : ಚಿತ್ರದುರ್ಗದಲ್ಲಿ ಲವ್ ಜಿಹಾದ್ ಆರೋಪ – ಮಹಿಳೆ ಅನುಮಾನಾಸ್ಪದ ಸಾವು!
ಡ್ರಗ್ನಿಂ ಖಿನ್ನತೆಗೆ ಜಾರಿದ್ದ ಯುವಕ
ಹೌದು.. ಬೆಂಗಳೂರಿನ ಜೆ.ಜೆ. ನಗರದ ಪಾದರಾಯನಪುರ ನಿವಾಸಿಯಾಗಿದ್ದ 28 ವರ್ಷದ ಶಹಬಾಜ್ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಕಟ್ಟಡದ ಮೇಲಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಇನ್ನು ಶಹಬಾಜ್ ಈ ಹಿಂದೆ ಗಾಂಜಾ ಹಾಗೂ ಮಾದಕವಸ್ತು ವ್ಯಸನದಿಂದ ಹೊರಬರಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಳೆದ ಆರು ತಿಂಗಳಿಂದ ಔಷಧಿ ಸೇವನೆಯನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ಬಳಿಕ ಮತ್ತೆ ಡ್ರಗ್ಸ್ ಹಾಗೂ ಗಾಂಜಾ ಚಟವನ್ನು ಶಹಬಾಜ್ ಶುರು ಮಾಡಿದ್ದ.

BENGALURU – ಜೆ.ಜೆ ನಗರ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ದಾಖಲು
ಇನ್ನು ಘಟನೆ ಸಂಬಂಧ ಜೆ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ, ಅಂದರೆ ಯುಡಿಆರ್ ದಾಖಲಾಗಿದೆ. ಶಹಬಾಜ್ ಕಟ್ಟಡದಿಂದ ಹೇಗೆ ಬಿದ್ದರು..? ಆ ಸಂದರ್ಭದಲ್ಲಿ ಏನಾಯಿತು..? ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಬೇಕಿದೆ.
MUST WATCH : ನಾಯಕರ ಮಗನಾದ್ರೆ ಹೋರಾಟಕ್ಕೆ ಬಾ – ಕಿಚ್ಚ ಸುದೀಪ್ಗೆ ಉಗ್ರಪ್ಪ ಸವಾಲ್




