
MYSURU : ದಸರಾ ಆನೆಗಳ ಜೊತೆ ಈ ಶಾಸಕರ ಮಕ್ಕಳ ಸ್ಪೆಷಲ್ ಫೋಟೋಶೂಟ್, ಪರ್ಮಿಷನ್ ಕೊಟ್ಟವರು ಯಾರು?
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದೆ. ಆದ್ರೆ ಇದೇ ವೇಳೆ ಅರಮನೆ ಆವರಣದಲ್ಲಿ ದಸರಾ ಗಜಪಡೆಯ ಜೊತೆ ಫೋಟೋಶೂಟ್ ಮಾಡಿಸಿಕೊಂಡಿರುವ ವಿಚಾರ ಹೊಸ ವಿವಾದಕ್ಕೆ ಕಾರಣವಾಗಿದೆ. ಸಾಮಾನ್ಯ ಜನರಿಗೆ ಆನೆಗಳ ಬಳಿ ತೆರಳಲು ನಿರ್ಬಂಧ ವಿಧಿಸಿರುವಾಗ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಮಕ್ಕಳು ಗಜಪಡೆಯ ಜೊತೆ ಫೋಟೋ ತೆಗೆಸಿಕೊಂಡಿರುವ ಪೊಟೋಗಳು ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿವೆ. ಇದಕ್ಕೆ ಅನುಮತಿ ನೀಡಿದ್ದು ಯಾರು ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಶಾಸಕರ ಮಕ್ಕಳ ಸ್ಪೆಷಲ್ ಫೋಟೋಶೂಟ್!
ಹೌದು.. ಮೈಸೂರು ಅರಮನೆ ಆವರಣದಲ್ಲಿ ದಸರಾ ಗಜಪಡೆಯ ಸುರಕ್ಷತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದೆ. ಸಾಮಾನ್ಯ ಜನರಿಗೆ ಆನೆಗಳ ಸಮೀಪ ತೆರಳಲು, ಅವುಗಳ ಜೊತೆ ಫೋಟೋ ಹಾಗೂ ವಿಡಿಯೋ ತೆಗೆದುಕೊಳ್ಳಲು ಅವಕಾಶ ನೀಡುತ್ತಿಲ್ಲ. ಆದ್ರೆ ಇದೇ ವೇಳೆ ಶಾಸಕ ವಿನಯ್ ಕುಲಕರ್ಣಿ ಅವರ ಮಕ್ಕಳು ಆನೆಗಳ ಸಮೀಪ ತೆರಳಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಆನೆ ದಂತ ಹಿಡಿದು ಪೊಟೋಗೆ ಪೋಸ್
ಇನ್ನು ವೈರಲ್ ಆಗಿರುವ ಫೋಟೋಗಳಲ್ಲಿ ಶಾಸಕರ ಮಕ್ಕಳು ಆನೆಯ ದಂತ ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆನೆಗಳ ಬಳಿ ತೆರಳುವುದಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲದಿದ್ದರೂ, ಜನಪ್ರತಿನಿಧಿಗಳ ಕುಟುಂಬದವರಿಗೆ ಹೇಗೆ ಅವಕಾಶ ನೀಡಲಾಯಿತು ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಎತ್ತಿದ್ದಾರೆ.
ಫೋಟೋ ಹಾಗೂ ವಿಡಿಯೋಗಳು ಹರಿದಾಡುತ್ತಿದ್ದಂತೆ ಈ ವಿಚಾರ ಚರ್ಚೆಗೆ ಕಾರಣವಾಗಿದೆ.
READ THIS : ಸ್ಟಿಂಗ್ ವಿಚಾರವಾಗಿ ಜೋರಾಯ್ತು ಚರ್ಚೆ – ಸಿದ್ದು ಟಾರ್ಗೆಟ್ ಮಾಡಲು ಸಂಚು?

MYSURU – ನಿಯಮ ಉಲ್ಲಂಘನೆಯಾಗಿದ್ಯಾ?
ಮತ್ತೊಂದೆಡೆ ಸಾರ್ವಜನಿಕರಿಗೆ ಒಂದು ನಿಯಮ, ರಾಜಕಾರಣಿಗಳ ಮಕ್ಕಳಿಗೆ ಮತ್ತೊಂದು ನಿಯಮವೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ದಸರಾ ಆನೆಗಳ ಸುರಕ್ಷತೆಗಾಗಿ ನಿರ್ಬಂಧ ವಿಧಿಸಿದ್ದರೆ ಅದು ಎಲ್ಲರಿಗೂ ಸಮಾನವಾಗಿ ಅನ್ವಯವಾಗಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಶಾಸಕರ ಮಕ್ಕಳಿಗೆ ವಿಶೇಷ ಅನುಮತಿ ನೀಡಲಾಗಿತ್ತಾ ಅಥವಾ ನಿಯಮ ಉಲ್ಲಂಘನೆಯಾಗಿದೆಯಾ ಎಂಬುದರ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.
MUST WATCH : ಡ್ರಗ್ಸ್ ನಿಂದ ಖಿನ್ನತೆಗೆ ಜಾರಿದ್ದ ಯುವಕ ನಾಲ್ಕನೇ ಮಹಡಿಯಿಂದ ಬಿದ್ದು ಸಾ*





