
MYSURU DASARA 2026 : ಚಿನ್ನದ ಅಂಬಾರಿ ಹೊರಲು ಧನಂಜಯನ ಆಯ್ಕೆ ಬಹುತೇಕ ಖಚಿತ
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಈ ಬಾರಿ ಚಿನ್ನದ ಅಂಬಾರಿ ಹೊರುವ ಆನೆ ಯಾವುದು ಅನ್ನೋ ಕುತೂಹಲಕ್ಕೆ ಬಹುತೇಕ ತೆರೆ ಬೀಳುವ ಲಕ್ಷಣ ಕಾಣ್ತಿದೆ. ಹೌದು.. ಅಭಿಮನ್ಯು ನಿವೃತ್ತಿಯ ಬಳಿಕ ಅಂಬಾರಿ ಹೊರುವ ಜವಾಬ್ದಾರಿ ಯಾರಿಗೆ ಸಿಗಲಿದೆ ಅನ್ನೋ ಚರ್ಚೆ ಜೋರಾಗಿದ್ದು, ಇದೀಗ ಧನಂಜಯನ ಹೆಸರು ಮುಂಚೂಣಿಗೆ ಬಂದಿದೆ. ಅಂಬಾರಿ ಹೊರುವ ಆನೆಗಳ ರೇಸ್ನಲ್ಲಿದ್ದ ಮಹೇಂದ್ರನಿಗೆ ತಾಲೀಮಿನಲ್ಲಿ ಹಿನ್ನಡೆಯಾಗಿದೆ ಎನ್ನಲಾಗಿದ್ದು, ಧನಂಜಯನ ಆಯ್ಕೆ ಬಹುತೇಕ ಖಚಿತ ಎಂಬ ಮಾತು ಕೇಳಿಬರುತ್ತಿದೆ.

ಧನಂಜಯ ಹಾಗೂ ಮಹೇಂದ್ರ ನಡುವೆ ಪೈಪೋಟಿ!
ಇನ್ನು ದಸರಾ ಗಜಪಡೆಯಲ್ಲಿರುವ ಧನಂಜಯ ಹಾಗೂ ಮಹೇಂದ್ರ ನಡುವೆ ಅಂಬಾರಿ ಹೊರುವ ಅವಕಾಶಕ್ಕಾಗಿ ಪೈಪೋಟಿ ಇತ್ತು ಎನ್ನಲಾಗಿದೆ. ಆದರೆ ಇತ್ತೀಚಿನ ತಾಲೀಮಿನ ವೇಳೆ ಮಹೇಂದ್ರ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಿಲ್ಲ ಎಂಬ ಮಾಹಿತಿ ಹೊರಬಿದ್ದಿದ್ದು, ಧನಂಜಯನಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.
READ THIS : ನಾಡಹಬ್ಬ ಮೈಸೂರು ದಸರಾ 2026 ಕಾರ್ಯಕ್ರಮಗಳ ಪಟ್ಟಿ ಹೀಗಿದೆ ನೋಡಿ

5.5 ಟನ್ ತೂಕ ಹೊಂದಿರುವ ಧನಂಜಯ
ದಸರಾ ಗಜಪಡೆಯಲ್ಲಿರುವ ಧನಂಜಯ ದೈತ್ಯಗಾತ್ರದ ಆನೆಗಳಲ್ಲಿ ಒಂದಾಗಿದ್ದು, ಇತ್ತೀಚಿನ ತೂಕ ಪರೀಕ್ಷೆಯಲ್ಲಿ ಬರೋಬ್ಬರಿ ಐದು ಸಾವಿರದ ಐನೂರ ಮೂವತ್ತು ಕೆಜಿ ತೂಕ ಹೊಂದಿರುವುದಾಗಿ ವರದಿಯಾಗಿದೆ. ಅಂದರೆ ಸುಮಾರು ಐದೂವರೆ ಟನ್ ತೂಕದ ಧನಂಜಯ, ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನಿಭಾಯಿಸಲು ಸಜ್ಜಾಗುತ್ತಿದ್ದಾನೆ ಎನ್ನಲಾಗಿದೆ.
MYSURU DASARA – ಧನಂಜಯನ ಆಯ್ಕೆ ಬಹುತೇಕ ಖಚಿತ?
ಈ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿಯ ಭಾರ ಹೊತ್ತು ನಾಡದೇವಿ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಭಾಗ್ಯ ಧನಂಜಯನಿಗೆ ಒಲಿಯುತ್ತಾ ಎಂಬ ಕುತೂಹಲ ಮೂಡಿದೆ. ಧನಂಜಯನ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದ್ರೂ ಅರಣ್ಯ ಇಲಾಖೆಯ ಅಧಿಕೃತ ಘೋಷಣೆಯ ಬಳಿಕವಷ್ಟೇ ಸ್ಪಷ್ಟನೆ ಸಿಗಲಿದೆ.

MUST WATCH : THOಗಳ ಕಾರ್ಯವೈಖರಿಗೆ ಖಾದರ್ ಗರಂ ತುಮಕೂರಲ್ಲಿ THOಗಳಿಗೆ ಖಡಕ್ ವಾರ್ನಿಂಗ್




