
MYSURU DASARA 2026 : ಪ್ರಶಾಂತ ಆನೆಗೆ ಅಂಬಾರಿ ಹೊರುವ ಲಕ್
ಮೈಸೂರು ದಸರಾ ಅಂದ್ರೆ ಮೊದಲು ನೆನಪಾಗೋದೇ ಜಂಬೂಸವಾರಿ. ಅದರಲ್ಲೂ ಚಿನ್ನದ ಅಂಬಾರಿ ಹೊತ್ತು ರಾಜಬೀದಿಯಲ್ಲಿ ಸಾಗುವ ಗಜರಾಜನ ಗಾಂಭೀರ್ಯವೇ ಬೇರೆ. ಇದೀಗ ದಸರಾ ಗಜಪಡೆಯ ಬಲಿಷ್ಠ ಆನೆ ಪ್ರಶಾಂತ ಎಲ್ಲರ ಗಮನ ಸೆಳೆದಿದ್ದಾನೆ. ಕಳೆದ 18 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಪ್ರಶಾಂತನಿಗೆ ಇದೇ ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರುವ ಅವಕಾಶ ಒಲಿದುಬಂದಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಪ್ರಶಾಂತ ಆನೆಯ ರೋಚಕ ಸಂಗತಿಗಳು
ಹೌದು.. ಪ್ರಶಾಂತ ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ದುಬಾರೆ ಆನೆ ಶಿಬಿರದ ಗಜರಾಜ. 1993ರಲ್ಲಿ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಪ್ರಶಾಂತನನ್ನು ಸೆರೆಹಿಡಿಯಲಾಗಿತ್ತು.
ಬಳಿಕ ಆನೆ ಶಿಬಿರದಲ್ಲಿ ತರಬೇತಿ ಪಡೆದು ದಸರಾ ಗಜಪಡೆಯ ಪ್ರಮುಖ ಆನೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದಾನೆ. ಬಲಿಷ್ಠ ದೇಹ ಹಾಗೂ ದಸರಾ ಅನುಭವ ಪ್ರಶಾಂತನ ವಿಶೇಷತೆಗಳಾಗಿವೆ.
READ THIS : ದಸರಾ ಆನೆಗಳ ಜೊತೆ ಈ ಶಾಸಕರ ಮಕ್ಕಳ ಸ್ಪೆಷಲ್ ಫೋಟೋಶೂಟ್!

ಇನ್ನು ಪ್ರಶಾಂತನ ದೈಹಿಕ ಸಾಮರ್ಥ್ಯವೂ ಗಮನ ಸೆಳೆಯುವಂತಿದೆ. ಈ ಆನೆಯ ಎತ್ತರ 2.61 ಮೀಟರ್, ಉದ್ದ 3.46 ಮೀಟರ್. ಅಂದಾಜು 5,100 ಕೆಜಿ ತೂಕ ಹೊಂದಿರುವ ಪ್ರಶಾಂತ ದಸರಾ ಗಜಪಡೆಯ ಬಲಿಷ್ಠ ಆನೆಗಳಲ್ಲಿ ಒಂದಾಗಿದ್ದಾನೆ. ಇಷ್ಟು ದೊಡ್ಡ ಗಜರಾಜನನ್ನು ದಸರಾ ಮಹೋತ್ಸವಕ್ಕೆ ಸಜ್ಜುಗೊಳಿಸುವಲ್ಲಿ ಮಾವುತ ಹಾಗೂ ಕಾವಾಡಿಗರ ಪಾತ್ರವೂ ಮಹತ್ವದ್ದಾಗಿದೆ.
ಪ್ರಶಾಂತ ಆನೆಯ ಮಾವುತರಾಗಿ ಜೆ.ಎ. ಚಿನ್ನಪ್ಪ ಕಾರ್ಯನಿರ್ವಹಿಸುತ್ತಿದ್ದು, ಚಂದ್ರ ಅವರು ಕಾವಾಡಿಗರಾಗಿದ್ದಾರೆ. ಆನೆಯ ದಿನನಿತ್ಯದ ಆರೈಕೆ, ಆಹಾರ, ತರಬೇತಿ ಹಾಗೂ ದಸರಾ ತಾಲೀಮುಗಳಲ್ಲಿ ಇವರಿಬ್ಬರ ಪಾತ್ರ ಪ್ರಮುಖವಾಗಿದೆ. ಕಳೆದ 18 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಪ್ರಶಾಂತನಿಗೆ ಜಂಬೂಸವಾರಿಯ ವಾತಾವರಣ ಹೊಸದೇನಲ್ಲ.

ಪ್ರಶಾಂತನಿಗೆ ಮೊದಲ ಬಾರಿಗೆ ಅಂಬಾರಿ ಹೊರುವ ಲಕ್
ಇನ್ನು ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯಿಂದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿಗೆ ನಿವೃತ್ತಿ ನೀಡಲಾಗಿದ್ದು, ಮುಂದಿನ ಕ್ಯಾಪ್ಟನ್ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿತ್ತು.
ಧನಂಜಯ, ಪ್ರಶಾಂತ, ಏಕಲವ್ಯ, ಮಹೇಂದ್ರ ಹಾಗೂ ಸುಗ್ರೀವ ಆನೆಗಳ ಹೆಸರುಗಳು ಚರ್ಚೆಯಲ್ಲಿದ್ದವು. ಈ ನಡುವೆ ಪ್ರಶಾಂತನಿಗೆ ಮೊದಲ ಬಾರಿಗೆ ಅಂಬಾರಿ ಹೊರುವ ಅವಕಾಶ ಒಲಿದಿದೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ ಮರದ ಅಂಬಾರಿ ಹೊತ್ತು ತಾಲೀಮು ನಡೆಸುತ್ತಿದ್ದ ಮಹೇಂದ್ರ ಆನೆ ಮಾರ್ಗಮಧ್ಯೆ ನಿಂತುಬಿಟ್ಟಿತ್ತು. ಹೀಗಾಗಿ ಮಹೇಂದ್ರನನ್ನು ಕ್ಯಾಪ್ಟನ್ ಆಯ್ಕೆಯ ಪರಿಗಣನೆಯಿಂದ ಕೈಬಿಡಲಾಗಿದೆ ಎನ್ನಲಾಗಿದೆ.
MUST WATCH : ಹೋಟೆಲ್ಗಳ ಮೇಲೆ ದಿಢೀರ್ RAID – ಆಹಾರದಲ್ಲಿ ಕೃತಕ ಬಣ್ಣ ಬಳಸಿದ್ರೆ ಹುಷಾರ್.!




