
ತುಮಕೂರು ದಸರಾ ಹೆಲಿರೈಡ್ಗೆ ನೀರಸ ಪ್ರತಿಕ್ರಿಯೆ – ದುಬಾರಿ ಟಿಕೆಟ್ ದರವೇ ಕಾರಣನಾ..?
ತುಮಕೂರು ದಸರಾ ಅಂದ್ರೆ ಸಾಕು ಹಬ್ಬದ ಸಂಭ್ರಮದ ಜೊತೆಗೆ ವಿಭಿನ್ನ ಆಕರ್ಷಣೆಗಳು ಜನರ ಗಮನ ಸೆಳೆಯುತ್ತವೆ. ಅದರಲ್ಲೂ ಈ ಬಾರಿ ದಸರಾ ಮಹೋತ್ಸವದ ವಿಶೇಷ ಆಕರ್ಷಣೆಯಾಗಿದ್ದ ಹೆಲಿರೈಡ್ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಹೆಲಿಕಾಪ್ಟರ್ನಲ್ಲಿ ಹಾರಾಡಿ ತುಮಕೂರು ನಗರದ ಸೌಂದರ್ಯ ಕಣ್ತುಂಬಿಕೊಳ್ಳಬೇಕು ಎಂದುಕೊಂಡಿದ್ದ ಸಾರ್ವಜನಿಕರು, ಟಿಕೆಟ್ ದರ ಕಂಡು ಹಿಂದೇಟು ಹಾಕುತ್ತಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ಯಾಕಂದ್ರೆ, ಹೆಲಿರೈಡ್ಗೆ ಒಬ್ಬರಿಗೆ ಬರೋಬ್ಬರಿ 4,100 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಆರಂಭದಿಂದಲೇ ಹೆಲಿರೈಡ್ಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹೆಲಿಕಾಪ್ಟರ್ನಲ್ಲಿ ಹಾರಾಡುವ ಅವಕಾಶ ಸಿಕ್ಕರೂ ಆಸಕ್ತಿ ತೋರ್ತಿಲ್ಲ
ತುಮಕೂರು ದಸರಾ ಮಹೋತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿ ಆಯೋಜಿಸಿರುವ ಹೆಲಿರೈಡ್ಗೆ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಜನರಿಂದ ಸ್ಪಂದನೆ ಸಿಗುತ್ತಿಲ್ಲ. ಕಳೆದ ಬಾರಿ ಹೆಲಿರೈಡ್ಗೆ ಸಾರ್ವಜನಿಕರಿಂದ ಉತ್ತಮ ಬುಕಿಂಗ್ ಆಗಿತ್ತು, ಈ ಬಾರಿ ಮಾತ್ರ ಬೆರಳೆಣಿಕೆಯಷ್ಟು ಬುಕಿಂಗ್ ಆಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ದಸರಾ ಸಂಭ್ರಮದ ನಡುವೆ ಹೆಲಿಕಾಪ್ಟರ್ನಲ್ಲಿ ಹಾರಾಡುವ ಅವಕಾಶ ಸಿಕ್ಕರೂ, ಜನರು ಮಾತ್ರ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ.
READ THIS : ತುಮಕೂರು ದಸರಾಗೆ ಅದ್ಧೂರಿ ಚಾಲನೆ – ಧ್ವಜಾರೋಹಣ ನೆರವೇರಿಸಿದ ಪರಂ
ದುಬಾರಿ ಹಣ ಕೊಟ್ಟು ಕೆಲವೇ ನಿಮಿಷಗಳ ಕಾಲ ಹಾರಾಟ ನಡೆಸಬೇಕಾ?
ಇನ್ನು ಹೆಲಿರೈಡ್ನ ಟಿಕೆಟ್ ದರ ಕೇಳಿದರೆ ಸಾಮಾನ್ಯ ಜನರು ಒಮ್ಮೆ ಯೋಚಿಸುವಂತಾಗಿದೆ. ಹೆಲಿಕಾಪ್ಟರ್ನಲ್ಲಿ ಕೆಲವೇ ನಿಮಿಷಗಳ ಪ್ರಯಾಣಕ್ಕೆ ಒಬ್ಬರಿಗೆ 4,100 ರೂಪಾಯಿ ನಿಗದಿಪಡಿಸಲಾಗಿದೆ.
ಇಷ್ಟು ದುಬಾರಿ ಹಣ ಕೊಟ್ಟು ಕೆಲವೇ ನಿಮಿಷಗಳ ಕಾಲ ಹಾರಾಟ ನಡೆಸಬೇಕಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಇದೇ ಕಾರಣಕ್ಕೆ ಬುಕಿಂಗ್ ಕಡಿಮೆಯಾಗಿದೆಯೇ ಎಂಬ ಚರ್ಚೆಯೂ ನಡೆಯುತ್ತಿದೆ.

ಸ್ಪಂದನೆ ಸಿಗುತ್ತಿಲ್ಲ ಎಂದು ಚರ್ಚೆ
ಒಟ್ಟಿನಲ್ಲಿ, ತುಮಕೂರು ದಸರಾ ಮಹೋತ್ಸವದ ಹೆಲಿರೈಡ್ಗೆ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಜನರಿಂದ ಸ್ಪಂದನೆ ಸಿಗುತ್ತಿಲ್ಲ ಎಂಬ ಚರ್ಚೆ ಜೋರಾಗಿದೆ.
ಕೆಲವೇ ನಿಮಿಷಗಳ ಹಾರಾಟಕ್ಕೆ 4,100 ರೂಪಾಯಿ ದರ ನಿಗದಿಯಾಗಿರುವುದು ಸಾರ್ವಜನಿಕರ ಆಸಕ್ತಿಯ ಮೇಲೆ ಪರಿಣಾಮ ಬೀರಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಕೆಲವೇ ನಿಮಿಷಗಳ ಹಾರಾಟಕ್ಕೆ 4,100 ರೂಪಾಯಿ ದರ ನಿಗದಿಯಾಗಿದ್ದು, ಹೆಲಿರೈಡ್ಗೆ ಮುಂದಿನ ದಿನಗಳಲ್ಲಿ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಅನ್ನೋದನ್ನು ಕಾದುನೋಡಬೇಕಿದೆ.

MUST WATCH : ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡಲು ಕಾಂಗ್ರೆಸ್ನಿಂದಲೇ ಸ್ಕೆಚ್




