
BENGALURU : ರೇಣುಕಾಸ್ವಾಮಿ ಕೇಸ್ನಲ್ಲಿ ಮತ್ತಿಬ್ಬರು ನಟರಿಗೆ ಕೋರ್ಟ್ ನೋಟಿಸ್!
ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಲಯದ ವಿಚಾರಣೆ ಮತ್ತೊಂದು ಮಹತ್ವದ ಹಂತ ತಲುಪಿದೆ. ಪ್ರಕರಣದ ಪ್ರಮುಖ ಸಾಕ್ಷಿದಾರರಾಗಿರುವ ಸ್ಯಾಂಡಲ್ವುಡ್ ನಟ ಚಿಕ್ಕಣ್ಣ ಹಾಗೂ ನಟ ಯಶಸ್ ಸೂರ್ಯ ಅವರಿಗೆ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.
READ THIS : ರೇಣುಕಾಸ್ವಾಮಿ ಕೊಲೆ ಕೇಸ್ – ಮತ್ತೆ 2 ಅರ್ಜಿ ಸಲ್ಲಿಸಿದ ದರ್ಶನ್

ಪಾರ್ಟಿಯಲ್ಲಿ ಇಬ್ಬರೂ ನಟರು ಭಾಗಿ
ಕೊಲೆ ಕೃತ್ಯ ನಡೆಯುವುದಕ್ಕೂ ಮುನ್ನ ಆರೋಪಿ ನಟ ದರ್ಶನ್ ಜತೆ ಬೆಂಗಳೂರಿನ ಆರ್.ಆರ್. ನಗರದ ‘ಸ್ಟೋನಿ ಬ್ರೂಕ್’ ಪಬ್ನಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ಇಬ್ಬರೂ ನಟರು ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಚಿಕ್ಕಣ್ಣ ಅವರನ್ನು ಸಿಡಬ್ಲ್ಯೂ-80 (CW-80) ಹಾಗೂ ಯಶಸ್ ಸೂರ್ಯ ಅವರನ್ನು ಸಿಡಬ್ಲ್ಯೂ-98 (CW-98) ಸಾಕ್ಷಿದಾರರನ್ನಾಗಿ ಹೆಸರಿಸಲಾಗಿತ್ತು.

BENGALURU – ಅಕ್ಟೋಬರ್ 13 ರಂದು ವಿಚಾರಣೆಗೆ ಹಾಜರಾಗಲು ಆದೇಶ
ಇನ್ನು ಇದೇ ಅಕ್ಟೋಬರ್ 13ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ಸಾಕ್ಷ್ಯ ನುಡಿಯುವಂತೆ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಅವರಿಗೆ ಸೂಚಿಸಲಾಗಿದೆ. ನ್ಯಾಯಾಲಯದ ಈ ಸಮನ್ಸ್ನಿಂದಾಗಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣಾ ಪ್ರಕ್ರಿಯೆ ಮತ್ತೊಂದು ಮಹತ್ವದ ಘಟ್ಟ ತಲುಪಿದೆ.
MUST WATCH : ಸಿದ್ದರಾಮಯ್ಯರನ್ನೇ ಚಮ್ಕಾಯಿಸುತ್ತೀರಾ ಅಂದ್ರೆ – ಬೇರೆಯವ್ರನ್ನ ಸುಮ್ನೆ ಬಿಡ್ತಾರಾ ಎಂದ SOMANNA




