
ರೇಣುಕಾಸ್ವಾಮಿ ಕೊಲೆ ಕೇಸ್ – ಮತ್ತೆ 2 ಅರ್ಜಿ ಸಲ್ಲಿಸಿದ ಆರೋಪಿ, ನಟ DARSHAN
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮಾಫಿ ಸಾಕ್ಷಿಯಾಗಿರುವ ಪ್ರದೋಷ್ಗೆ ನೀಡಲಾಗುತ್ತಿರುವ ಎಸ್ಕಾರ್ಟ್ ಹಾಗೂ ಇತರರ ಭೇಟಿಗೆ ಸಂಬಂಧಿಸಿದಂತೆ ಒಂದು ಅರ್ಜಿ, ಮಾಫಿ ಸಾಕ್ಷಿಯ ವಿಚಾರಣೆಯ ಅನುಕ್ರಮಕ್ಕೆ ಸಂಬಂಧಿಸಿದಂತೆ ಮತ್ತೊಂದು ಅರ್ಜಿಯನ್ನು DARSHAN ಪರ ವಕೀಲರು ಸೆಷನ್ಸ್ ಕೋರ್ಟ್ಗೆ ಸಲ್ಲಿಸಿದ್ದಾರೆ.
ಅರ್ಜಿ ಕುರಿತು ನಾಳೆ ನ್ಯಾಯಾಲಯ ಆದೇಶ ನೀಡುವ ನಿರೀಕ್ಷೆ
ಪ್ರದೋಷ್ ಅವರನ್ನು ನ್ಯಾಯಾಲಯಕ್ಕೆ ಕರೆತರುವಾಗ ನೀಡಲಾಗುವ ಎಸ್ಕಾರ್ಟ್ ವ್ಯವಸ್ಥೆ ಹಾಗೂ ಅವರೊಂದಿಗೆ ಇತರರು ಭೇಟಿಯಾಗುವುದಕ್ಕೆ ಸಂಬಂಧಿಸಿದಂತೆ ಅಗತ್ಯ ನಿರ್ದೇಶನ ನೀಡಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಸೆಷನ್ಸ್ ಕೋರ್ಟ್ ನಡೆಸಿದೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರಾಸಿಕ್ಯೂಷನ್, ನ್ಯಾಯಾಲಯದ ಆದೇಶದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಹಾಗೂ ಜೈಲು ಅಧಿಕಾರಿಗಳು ಪ್ರದೋಷ್ ಅವರನ್ನು ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಕರೆತರುತ್ತಿದ್ದಾರೆ ಎಂದು ತಿಳಿಸಿದೆ.
ಪ್ರದೋಷ್ ಅವರ ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯದ ಗಮನಕ್ಕೆ ತಂದಿದೆ.
READ THIS : ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ – ಕೋರ್ಟ್ನಲ್ಲಿ ಏನೇನಾಯ್ತು?

ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ, ಎಸ್ಕಾರ್ಟ್ ಹಾಗೂ ಭೇಟಿಗೆ ಸಂಬಂಧಿಸಿದ ಅರ್ಜಿಯ ಆದೇಶವನ್ನು ಕಾಯ್ದಿರಿಸಿದೆ.
ಈ ಅರ್ಜಿಯ ಕುರಿತು ನಾಳೆ ನ್ಯಾಯಾಲಯ ಆದೇಶ ನೀಡುವ ನಿರೀಕ್ಷೆ ಇದೆ.
ಮತ್ತೊಂದು ಅರ್ಜಿ DARSHAN ಪರ ವಕೀಲರು
ಇನ್ನು ಮಾಫಿ ಸಾಕ್ಷಿ ವಿಚಾರಣೆಯ ಅನುಕ್ರಮಕ್ಕೆ ಸಂಬಂಧಿಸಿದಂತೆ ದರ್ಶನ್ ಪರ ವಕೀಲರು ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೇಳಿದ್ದಾರೆ.
ಪ್ರಕರಣದಲ್ಲಿ ಪ್ರದೋಷ್ಗೆ ಮಾಫಿ ನೀಡಿ ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಪರಿಗಣಿಸಿರುವ ವಿಚಾರವನ್ನು ಕರ್ನಾಟಕ ಹೈಕೋರ್ಟ್ ಕೂಡ ಎತ್ತಿಹಿಡಿದಿದೆ.
ಇದೇ ವೇಳೆ ವಿಚಾರಣೆಯ ಸಂದರ್ಭದಲ್ಲಿ ಕಾನೂನಿನ ಪ್ರಕಾರ ಪ್ರದೋಷ್ ಅವರನ್ನು ಕ್ರಾಸ್ ಎಕ್ಸಾಮಿನ್ ಮಾಡುವ ಅವಕಾಶ ದರ್ಶನ್ಗೆ ಇದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಕೋರ್ಟ್ ಯಾವ ಆದೇಶ ನೀಡಲಿದೆ?
ಒಟ್ಟಾರೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಂದುವರಿದಿರುವ ನಡುವೆಯೇ ದರ್ಶನ್ ಸಲ್ಲಿಸಿರುವ ಹೊಸ ಅರ್ಜಿಗಳ ಮೇಲೆ ಸೆಷನ್ಸ್ ಕೋರ್ಟ್ ಯಾವ ಆದೇಶ ನೀಡಲಿದೆ ಅನ್ನೋದು ಕುತೂಹಲ ಮೂಡಿಸಿದೆ.
MUST WATCH : ಬರದ ಹೊಡೆತಕ್ಕೆ ಕರ್ನಾಟಕ ತತ್ತರ – ಕೇಂದ್ರಕ್ಕೆ ಪ್ರತ್ಯೇಕ ಪತ್ರ ಬರೆದ DCM PARAM





