BBK 13: ಮನೆಯವರಿಗೆ ಬಿಗ್ ಶಾಕ್ – ಒಳ್ಳೆ ರಾಮನನ್ನ ಹೊರಗೆ ಬಿಟ್ಟು ದೊಡ್ಮನೆಗೆ ತಾಂಡವ್ ರೀ-ಎಂಟ್ರಿ

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಇದೀಗ ಮಹತ್ವದ ತಿರುವೊಂದು ಎದುರಾಗಿದೆ. ಎಮರ್ಜೆನ್ಸಿ ರೂಮ್ ಮೂಲಕ ದೊಡ್ಮನೆಯಿಂದ ಹೊರಗೆ ಹೋಗಿದ್ದ ತಾಂಡವ್ ರಾಮ್ ಇದೀಗ ಹೊಸ ಅವತಾರದಲ್ಲಿ ಬಿಗ್ ಬಾಸ್ ಮನೆಗೆ ಮರಳಿದ್ದಾರೆ. ಅವರ ರೀ-ಎಂಟ್ರಿ ಮನೆಯ ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸಿದ್ದು, ವೀಕ್ಷಕರಲ್ಲೂ ಕುತೂಹಲ ಹೆಚ್ಚಿಸಿದೆ.
ಕ್ಯಾಪ್ಟನ್ಸಿ ರೂಮ್ ಮೂಲಕ ರಾಮ್ ಎಂಟ್ರಿ
ತಾಂಡವ್ ರಾಮ್ ಅವರು ಕ್ಯಾಪ್ಟನ್ಸಿ ರೂಮ್ ಮೂಲಕ ಭರ್ಜರಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ರಾಮ್ ಮನೆಗೆ ಬರುತ್ತಿದ್ದಂತೆ ಮನೆಯಲ್ಲಿದ್ದ ಸ್ಪರ್ಧಿಗಳು ಚೀರ್ ಮಾಡಿ ಅವರನ್ನು ಸ್ವಾಗತಿಸಿದ್ದಾರೆ.
ಮನೆಗೆ ಕಾಲಿಟ್ಟ ಕೂಡಲೇ ತಮ್ಮ ಆತ್ಮೀಯ ಸ್ನೇಹಿತ ಗಗನ್ ಅವರನ್ನು ರಾಮ್ ಮೊದಲು ತಬ್ಬಿಕೊಂಡಿದ್ದಾರೆ. ರಾಮ್ ಅವರ ರೀ-ಎಂಟ್ರಿ ಮನೆಯ ವಾತಾವರಣವನ್ನೇ ಬದಲಿಸಿದಂತಾಗಿದೆ.

ತುಂಬಾ ಒಳ್ಳೆಯವನಾಗಿ ಇದ್ದಿದ್ದು ಸಾಕು
ಬಿಗ್ ಬಾಸ್ ಮನೆಯಲ್ಲಿ ಈ ಹಿಂದೆ ಸೌಮ್ಯ ಸ್ವಭಾವದ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ರಾಮ್, ಇದೀಗ ತಮ್ಮ ಆಟದ ಶೈಲಿಯನ್ನು ಬದಲಿಸಿಕೊಳ್ಳುವ ಸುಳಿವು ನೀಡಿದ್ದಾರೆ.
ಮನೆಗೆ ಮರಳಿದ ಬಳಿಕ ಮಾತನಾಡಿದ ರಾಮ್, “ತುಂಬಾ ಒಳ್ಳೆಯವನಾಗಿ ಇದ್ದಿದ್ದು ಸಾಕು. ಮೊದಲು ಇದ್ದ ಒಳ್ಳೆ ರಾಮ್ನನ್ನು ಇನ್ನು ಮುಂದೆ ನಿರೀಕ್ಷೆ ಮಾಡಬೇಡಿ” ಎಂದು ಹೇಳಿದ್ದಾರೆ. ರಾಮ್ ಅವರ ಈ ಮಾತು ಮನೆಯ ಇತರ ಸ್ಪರ್ಧಿಗಳಿಗೆ ಶಾಕ್ ನೀಡಿದೆ.
READ THIS : ಒಟ್ಟಾಗಿ ಸೇರಿ ಗಾನವಿಯನ್ನ ಜೈಲಿಗೆ ಕಳುಹಿಸಿದ ದೊಡ್ಮನೆ ಮಂದಿ!

ಹೊಸ ಕ್ಯಾಪ್ಟನ್ ಆಗಿ ರಾಮ್
ತಾಂಡವ್ ರಾಮ್ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 13ರ ಹೊಸ ಕ್ಯಾಪ್ಟನ್ ಆಗಿ ದೊಡ್ಮನೆಗೆ ಮರಳಿದ್ದಾರೆ. ಹೀಗಾಗಿ ಅವರ ಮುಂದಿನ ಆಟ ಹೇಗಿರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.
ಇಷ್ಟು ದಿನಗಳ ಕಾಲ ಮನೆಯಲ್ಲಿದ್ದ ರಾಮ್ ಅವರ ಆಟದ ಶೈಲಿಗಿಂತ ಭಿನ್ನವಾಗಿ, ಈ ಬಾರಿ ಹೆಚ್ಚು ಆಕ್ರಮಣಕಾರಿ ರೀತಿಯಲ್ಲಿ ಆಟವಾಡುವ ಸೂಚನೆಯನ್ನು ಅವರ ಮಾತುಗಳು ನೀಡಿವೆ.
ಹೊಸ ಕ್ಯಾಪ್ಟನ್ ಆಗಿ ತಾಂಡವ್ ರಾಮ್ ದೊಡ್ಮನೆಗೆ ಕಾಲಿಟ್ಟಿದ್ದು, ಮುಂದಿನ ದಿನಗಳಲ್ಲಿ ಅವರ ಆಟ ಹೇಗಿರಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.
MUST WATCH : ಆಶ್ರಯ ನಿವೇಶನದ ಜಾಗಕ್ಕೆ ಕಿರಿಕ್ – ಅಧಿಕಾರಿಗಳ ಸರ್ವೇಗೆ ಗ್ರಾಮಸ್ಥರಿಂದ ತಡೆ




