Ration Card E-KYC : ರೇಷನ್ ಕಾರ್ಡ್ದಾರರಿಗೆ ಗುಡ್ ನ್ಯೂಸ್! ಇನ್ಮುಂದೆ ಇ-ಕೆವೈಸಿಗಾಗಿ ಗಂಟೆಗಟ್ಟಲೇ ಕಾಯುವ ಹಾಗಿಲ್ಲ!

ರೇಷನ್ ಕಾರ್ಡ್ದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗುಡ್ನ್ಯೂಸ್ವೊಂದನ್ನು ಕೊಟ್ಟಿದೆ. ಇ-ಕೆವೈಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾಯುವ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ‘ಅನ್ನಸೇವೆ’ ಹೆಸರಿನ ಹೊಸ ಆಪ್ ಪರಿಚಯಿಸಲಾಗಿದೆ. ಈ ಆಪ್ ಮೂಲಕ ಸಾರ್ವಜನಿಕರು ಮನೆಯಲ್ಲೇ ಕುಳಿತು E-KYC ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ಇ-ಕೆವೈಸಿ ಆ್ಯಪ್ ಬಿಡುಗಡೆ
ಸದ್ಯ ಪ್ರಾಯೋಗಿಕವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್ ಹಾಗೂ ಕೊಪ್ಪಳ ಸೇರಿದಂತೆ 8 ಜಿಲ್ಲೆಗಳಲ್ಲಿ ‘ಅನ್ನಸೇವೆ’ ಆಪ್ ಸೇವೆ ಆರಂಭಿಸಲಾಗಿದೆ. 20 ದಿನಗಳ ಬಳಿಕ ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೆ ಆಪ್ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
READ THIS : ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ – ಇ-ಕೆವೈಸಿ ಗಡುವು ಅ.20ರವರೆಗೆ ವಿಸ್ತರಣೆ!

E-KYC ಗಾಗಿ ಗಂಟೆಗಟ್ಟಲೇ ಕಾಯುವ ಹಾಗಿಲ್ಲ!
ಇ-ಕೆವೈಸಿ ಅಪ್ಡೇಟ್ ವೇಳೆ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಪರದಾಡುತ್ತಿರುವ ದೂರುಗಳು ಕೇಳಿಬಂದಿದ್ದವು. ಸರ್ವರ್ ಸಮಸ್ಯೆ ಬಗೆಹರಿಸಲು ಸೂಚನೆ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಹೀಂ ಖಾನ್ ತಿಳಿಸಿದ್ದಾರೆ. ರಾಜ್ಯದಲ್ಲಿ ಸುಮಾರು ನಾಲ್ಕೂವರೆ ಕೋಟಿ ಫಲಾನುಭವಿಗಳಿದ್ದು, ಅವರಿಗೆ ಸಮರ್ಪಕವಾಗಿ ಸೇವೆ ತಲುಪಿಸಬೇಕಿದೆ ಎಂದು ಸಚಿವರು ಹೇಳಿದ್ದಾರೆ.

8 ಜಿಲ್ಲೆಗಳಲ್ಲಿ ಸೇವೆ ಆರಂಭ
ಒಟ್ಟಾರೆ ರೇಷನ್ ಕಾರ್ಡ್ ಇ-ಕೆವೈಸಿ ಪ್ರಕ್ರಿಯೆಯನ್ನು ಸರಳಗೊಳಿಸಲು ಸರ್ಕಾರ ‘ಅನ್ನಸೇವೆ’ ಆಪ್ ಪರಿಚಯಿಸಿದ್ದು, ಮೊದಲ ಹಂತದಲ್ಲಿ 8 ಜಿಲ್ಲೆಗಳಲ್ಲಿ ಸೇವೆ ಆರಂಭವಾಗಿದೆ. ರಾಜ್ಯಾದ್ಯಂತ ಆಪ್ ವಿಸ್ತರಣೆಯಾದ ಬಳಿಕ ರೇಷನ್ ಕಾರ್ಡ್ದಾರರಿಗೆ ಇ-ಕೆವೈಸಿ ಪ್ರಕ್ರಿಯೆ ಮತ್ತಷ್ಟು ಸುಲಭವಾಗುವ ನಿರೀಕ್ಷೆ ಇದೆ.

MUST WATCH : ತಿಪಟೂರಲ್ಲಿ ಹೆಚ್ಚಾಯ್ತು ಚಿರತೆ ಕಾಟ – ಚಿರತೆ ಓಡಾಟಕ್ಕೆ ಬೆಚ್ಚಿಬಿದ್ದ ಗ್ರಾಮ




