TUMAKURU : ಅಶೋಕ್ ಖೇಣಿ ವಿರುದ್ಧ SPಗೆ ದೂರು – ಅಸಲಿ ಕಥೆ ಬಿಚ್ಚಿಟ್ಟ ಸಿದ್ದಲಿಂಗ ಶ್ರೀಗಳು.!

ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ ಬಗ್ಗೆ, ಅವಹೇಳನಕಾರಿ ಹಾಗೂ ಸುಳ್ಳು ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ‘ನೈಸ್’ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ವಿರುದ್ಧ ತುಮಕೂರಿನಲ್ಲಿ ಪೊಲೀಸ್ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ವಿವಾದದ ಕುರಿತು ಸ್ಪಷ್ಟನೆ ನೀಡಿರುವ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅವರು, ಅಶೋಕ್ ಖೇಣಿ ಚಿನ್ನದ ಕರಡಿಗೆ ಕೊಟ್ಟಿಲ್ಲ. ಈ ಬಗ್ಗೆ ಯಾವುದೇ ಮಾಹಿತಿನೂ ಇಲ್ಲ, ದಾಖಲೆನೂ ಇಲ್ಲ, ನಮಗ್ಯಾರಿಗೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಖೇಣಿ ನನ್ನ ಮಗನಿದ್ದಂತೆ ಎಂದು ಶ್ರೀಗಳು ಹೇಳಿದ್ದರು
ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಅಶೋಕ್ ಖೇಣಿ ಅವರು ಶಿವಕುಮಾರ ಶ್ರೀಗಳ ಕುರಿತು ಮಾತನಾಡಿದ್ದರು. ಶಿವಕುಮಾರ ಶ್ರೀಗಳಿಗೆ ತಾವು ಚಿನ್ನದ ಕಿರೀಟ ನೀಡಿದ್ದಾಗಿ ಹಾಗೂ ತಾವು ನೀಡಿದ ಚಿನ್ನವನ್ನೇ ಧರಿಸಿಕೊಂಡು ಶ್ರೀಗಳು ಲಿಂಗದಲ್ಲಿ ಲೀನವಾಗುತ್ತೇನೆ ಎಂದು ಹೇಳಿದ್ದರು. ಅಲ್ಲದೇ ಖೇಣಿ ನನ್ನ ಮಗನಿದ್ದಂತೆ ಎಂದು ಶ್ರೀಗಳು ಹೇಳಿದ್ದರು ಎಂಬುದಾಗಿಯೂ ಅಶೋಕ್ ಖೇಣಿ ಹೇಳಿದ್ದಾರೆ.
READ THIS : ಸಿದ್ದಗಂಗಾ ಮಠಕ್ಕೆ ಎದುರಾಗುತ್ತಾ ನೀರಿನ ಹಾಹಾಕಾರ..?

ಅಶೋಕ್ ಖೇಣಿ ವಿರುದ್ಧ SPಗೆ ದೂರು
ಇನ್ನು ಈ ಹೇಳಿಕೆಗಳ ವಿರುದ್ಧ ವಿಜಯಸೇನೆಯ ರಾಜ್ಯಾಧ್ಯಕ್ಷ ದೀಪಕ್ ಅವರು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ನೀಡಿದ್ದಾರೆ. ಅಶೋಕ್ ಖೇಣಿ ಅವರು ತಮ್ಮ ವೈಯಕ್ತಿಕ ಪ್ರಚಾರಕ್ಕಾಗಿ ತಪ್ಪು ಮಾಹಿತಿ ನೀಡಿ, ವಿಶ್ವವಿಖ್ಯಾತ ಸಿದ್ದಗಂಗಾ ಮಠ ಹಾಗೂ ಪರಮಪೂಜ್ಯ ಶಿವಕುಮಾರ ಸ್ವಾಮೀಜಿಗಳಿಗೆ ಅವಮಾನ ಮಾಡಿದ್ದಾರೆ, ಅವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ದೇ ಸಾರ್ವಜನಿಕವಾಗಿ ಆಶೋಕ್ ಖೇಣಿ ಅವ್ರು ಹೇಳಿಕೆ ಕುರಿತು ಸ್ಪಷ್ಟನೆ ನೀಡಿ, ಕ್ಷಮೆಯಾಚಿಸಬೇಕು, ಇಲ್ಲದಿದ್ರೆ ಅವರ ಮನೆಗೆ ಮುತ್ತಿಗೆ ಹಾಕೋದಾಗಿ ಎಚ್ಚರಿಕೆ ಕೂಡ ನೀಡಿದ್ದಾರೆ.
ಅಸಲಿ ಕಥೆ ಬಿಚ್ಚಿಟ್ಟ ಸಿದ್ದಲಿಂಗ ಶ್ರೀಗಳು.!
ಇನ್ನು ಸಿದ್ದಲಿಂಗ ಸ್ವಾಮೀಜಿ, ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ಅಶೋಕ್ ಖೇಣಿ ಚಿನ್ನದ ಕರಡಿಗೆ ಕೊಟ್ಟಿಲ್ಲ. ಮಾಹಿತಿನೂ ಇಲ್ಲ, ದಾಖಲೆನೂ ಇಲ್ಲ, ನಮಗ್ಯಾರಿಗೂ ಗೊತ್ತಿಲ್ಲ. ಸ್ಚಾಮೀಜಿಗೆ ಬಹಳ ವರ್ಷಗಳ ಹಿಂದೆ ಹುಲಿಕುಂಟೆ ಸೋಮಣ್ಣ ಎಂಬುವರು ಚಿನ್ನದ ಕರಡಿಗೆ ನೀಡಿದ್ದರು. ಪೂಜ್ಯರು ಅದೆಲ್ಲಾ ಬೇಡ, ಅದರ ಬದಲು ಹುಡುಗರಿಗೆ ಎರಡು ರೂಮ್ ಕಟ್ಟಿಸಿಕೊಡಿ ಅಂದಿದ್ದರಂತೆ. ಆದರೂ ಅವರ ಕುಟುಂಬದವರು ಒತ್ತಾಯ ಮಾಡಿ ಹಾಕಿದ್ದರು. ಕೊನೆ ತನಕ ಸ್ವಾಮೀಜಿ ಅದನ್ನ ಹಾಕಿಕೊಂಡಿದ್ದರು. ಆ ಕರಡಿಗೆ ನಮ್ಮಲ್ಲಿ ಹಾಗೇ ಇದೆ, ಅಷ್ಟು ಬಿಟ್ಟರೆ ಖೇಣಿ ಹೇಳಿದ್ದಂತೆ ಅವರು ಕೊಟ್ಟಿರೊದು ದಾಖಲೆ ಇಲ್ಲ. ಅದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದ್ದಾರೆ.

ಸಿದ್ದಗಂಗಾ ಮಠದಿಂದಲೂ ಹೇಳಿಕೆಗೆ ಸ್ಪಷ್ಟನೆ
ಒಟ್ಟಿನಲ್ಲಿ ಶಿವಕುಮಾರ ಸ್ವಾಮೀಜಿಗಳ ಕುರಿತು ಅಶೋಕ್ ಖೇಣಿ ನೀಡಿರುವ ಹೇಳಿಕೆಗಳು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಒಂದೆಡೆ ಖೇಣಿ ವಿರುದ್ಧ ಪೊಲೀಸ್ ದೂರು ದಾಖಲಾಗಿದ್ದರೆ, ಮತ್ತೊಂದೆಡೆ ಸಿದ್ದಗಂಗಾ ಮಠದಿಂದಲೂ ಈ ಹೇಳಿಕೆ ಕುರಿತು ಸ್ಪಷ್ಟನೆ ನೀಡಲಾಗಿದೆ.
MUST WATCH : ಪ್ರಜಾಶಕ್ತಿ ವರದಿಗೆ ಎಚ್ಚೆತ್ತ ಆಡಳಿತ – ಗ್ರಾಮದಲ್ಲಿ ಬೋರ್ವೆಲ್ ಕೊರೆಸಿದ ಅಧಿಕಾರಿಗಳು





