
BBK 13 : ಮಂಜ, ಲಿಖಿತ್ ಎಡವಟ್ಟು – ಒಟ್ಟಾಗಿ ಸೇರಿ ಗಾನವಿಯನ್ನ ಜೈಲಿಗೆ ಕಳುಹಿಸಿದ ದೊಡ್ಮನೆ ಮಂದಿ
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ವಿಚಾರ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಉಸ್ತುವಾರಿಗಳಾದ ಮಂಜು ಹಾಗೂ ಲಿಖಿತ್ ಅವರ ನಡೆ ಮತ್ತು ಟಾಸ್ಕ್ ನಿರ್ವಹಣೆಯಲ್ಲಿನ ಗೊಂದಲದಿಂದ ಕ್ಯಾಪ್ಟನ್ಸಿ ಟಾಸ್ಕ್ ರದ್ದಾಗಿದ್ದು, ಉತ್ತಮವಾಗಿ ಟಾಸ್ಕ್ ಆಡಿ ತಂಡವನ್ನು ಗೆಲ್ಲಿಸಿದ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿಗೆ ಮನೆಯವರು ‘ಕಳಪೆ’ ನೀಡಿದ್ದಾರೆ.
ಉಸ್ತುವಾರಿಗಳ ನಡೆಗೆ ಪ್ರಶ್ನೆ
ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಉಸ್ತುವಾರಿಗಳಾಗಿ ಜವಾಬ್ದಾರಿ ವಹಿಸಿದ್ದ ಮಂಜು ಹಾಗೂ ಲಿಖಿತ್, ಟಾಸ್ಕ್ನ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ನಿಯಮಗಳ ವಿಚಾರದಲ್ಲಿ ಸ್ಪಷ್ಟತೆ ಇಲ್ಲದೆ ತಮ್ಮದೇ ರೀತಿಯಲ್ಲಿ ರೂಲ್ಸ್ ಮಾಡಿದ ಪರಿಣಾಮ ಟಾಸ್ಕ್ ಗೊಂದಲಕ್ಕೆ ಸಿಲುಕಿತು ಎನ್ನಲಾಗಿದೆ.
ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ ಬಿಗ್ ಬಾಸ್ ಟಾಸ್ಕ್ ಅನ್ನೇ ರದ್ದು ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಈ ಬೆಳವಣಿಗೆ ಮನೆಯೊಳಗೆ ಮಾತ್ರವಲ್ಲದೆ ವೀಕ್ಷಕರಲ್ಲೂ ಚರ್ಚೆಗೆ ಕಾರಣವಾಗಿದೆ.
READ THIS : ಇವರೇ ನೋಡಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಸ್ಪರ್ಧಿಗಳು?

ತಂಡ ಗೆಲ್ಲಿಸಿದ ಗಾನವಿಗೆ ಸಿಕ್ಕಿದ್ದು ‘ಕಳಪೆ’
ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಪ್ರವೇಶಿಸಿರುವ ಗಾನವಿ, ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.
ಟಾಸ್ಕ್ನಲ್ಲಿ ಭಾರವನ್ನು ಎತ್ತಿ ಹಿಡಿಯುವ ಜವಾಬ್ದಾರಿ ಗಾನವಿಗೆ ನೀಡಲಾಗಿದ್ದು, ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದರು ಎನ್ನಲಾಗಿದೆ.
ಆದರೂ ಟಾಸ್ಕ್ ಬಳಿಕ ಗಾನವಿಗೆ ಮನೆಯವರಿಂದ ‘ಕಳಪೆ’ ನೀಡಲಾಗಿದೆ. ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಗಾನವಿಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ ಎಂಬ ಚರ್ಚೆ ವೀಕ್ಷಕರ ವಲಯದಲ್ಲಿ ನಡೆಯುತ್ತಿದೆ.

ಗಾನವಿ ವಿರುದ್ಧ ಮನೆಯವರ ಟೀಕೆ
ಟಾಸ್ಕ್ ಬಳಿಕ ಸೌಂದರ್ಯಾ ಶೆಟ್ಟಿ ಸೇರಿದಂತೆ ಕೆಲ ಸ್ಪರ್ಧಿಗಳು ಗಾನವಿಯ ಆಟದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬಳಿಕ ತಂಡದ ಬಹುತೇಕ ಸದಸ್ಯರು ಗಾನವಿಯ ವಿರುದ್ಧ ನಿಂತಂತೆ ಕಂಡುಬಂದಿದ್ದು, ಈ ವಿಚಾರವೂ ಚರ್ಚೆಗೆ ಕಾರಣವಾಗಿದೆ.
ತಮ್ಮ ತಂಡವನ್ನು ಗೆಲ್ಲಿಸುವಲ್ಲಿ ಉತ್ತಮವಾಗಿ ಆಡಿದ ಬಳಿಕವೂ ಗಾನವಿಗೆ ‘ಕಳಪೆ’ ನೀಡಿರುವುದು ಸರಿಯೇ ಎಂಬ ಪ್ರಶ್ನೆಯನ್ನು ಕೆಲ ವೀಕ್ಷಕರು ಸೋಶಿಯಲ್ ಮಿಡಿಯಾಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
MUST WATCH : ತುಮಕೂರಿಗೆ ಬಿ.ವೈ ವಿಜಯೇಂದ್ರ ಭೇಟಿ ಆಶ್ರಮದ ಮಕ್ಕಳೊಂದಿಗೆ ಮಾತುಕತೆ





