
BIGG BOSS ಮನೆಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ; ಎಲ್ಲರ ಮುಖವಾಡ ಕಳಚಲು ಬಂದ ಈ ಹೊಸ ಕಿಲಾಡಿಗಳ ಹಿಸ್ಟರಿ ಇಲ್ಲಿದೆ
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ದಿನೇ ದಿನೇ ರಂಗೇರ್ತಿದೆ. ಇದೀಗ ದೊಡ್ಮನೆಗೆ ಮೂವರು ಪ್ರಬಲ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಪ್ರವೇಶ ಪಡೆಯುತ್ತಿದ್ದಾರೆ. ಸುದೀಪ್ ಅವರು ಇಂದಿನ ಭಾನುವಾರದ ಸಂಚಿಕೆಯಲ್ಲಿ ಅವರನ್ನು ಮನೆಯೊಳಗೆ ಕಳುಹಿಸುತ್ತಿದ್ದಾರೆ.
ಇವರೇ ನೋಡಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಸ್ಪರ್ಧಿಗಳು?
ಸದ್ಯ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಸ್ಪರ್ಧಿಗಳ ಗುರುತು ಬಹಿರಂಗವಾಗಿಲ್ಲ. ಆದರೆ ಇದೀಗ ಮೂಲಗಳ ಮಾಹಿತಿ ಪ್ರಕಾರ, ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡುತ್ತಿರುವ ಮೂವರು ಸ್ಪರ್ಧಿಗಳ ಹೆಸರುಗಳು ಬಹಿರಂಗವಾಗಿವೆ.
READ THIS : ಮನೆ ಕೆಲಸ ಮಾಡೋದಕ್ಕೆ ಕಿರಣ್ ಶಾಸ್ತ್ರೀ ತಕರಾರು!

ಯಾರು ಆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು?
ಮೂಲಗಳ ಪ್ರಕಾರ, ಘಾಟಿ ಗಾನವಿ, ನಟ ಪ್ರಶಾಂತ್ ಗೌಡ ಹಾಗೂ ನಟಿ ಸೋನಿಕಾ ಗೌಡ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಪ್ರವೇಶಿಸುತ್ತಿದ್ದಾರೆ ಎನ್ನಲಾಗಿದೆ. ಈ ಮೂವರ ಪ್ರವೇಶದಿಂದ BIGG BOSS ಮನೆಯಲ್ಲಿನ ಆಟದ ಲೆಕ್ಕಾಚಾರ ಮತ್ತಷ್ಟು ಬದಲಾಗುವ ಸಾಧ್ಯತೆ ಇದೆ. ಈಗಾಗಲೇ ಸ್ಪರ್ಧಿಗಳ ನಡುವೆ ಪೈಪೋಟಿ ತೀವ್ರವಾಗಿರುವ ವೇಳೆ ಹೊಸ ಸ್ಪರ್ಧಿಗಳ ಎಂಟ್ರಿ ಕುತೂಹಲ ಹೆಚ್ಚಿಸಿದೆ.
ಘಾಟಿ ಗಾನವಿ
ಕಿರುತೆರೆ ವೀಕ್ಷಕರಿಗೆ ‘ಹಳ್ಳಿ ಪವರ್’ ಕಾರ್ಯಕ್ರಮದ ಮೂಲಕ ಪರಿಚಿತರಾದ ಘಾಟಿ ಗಾನವಿ, ಕಾರ್ಯಕ್ರಮದ ಮೊದಲ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿ ಗಮನ ಸೆಳೆದಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಅವರು ಜನಪ್ರಿಯತೆ ಹೊಂದಿದ್ದಾರೆ.
ನಟ ಪ್ರಶಾಂತ್ ಗೌಡ
‘ಟ್ಯಾಲೆಂಟೆಡ್ ಕಲಾವಿದ ಪ್ರಶಾಂತ್’ ಎಂದೇ ಗುರುತಿಸಿಕೊಂಡಿರುವ ಪ್ರಶಾಂತ್ ಗೌಡ ಅವರು ಕಿರುತೆರೆಯಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ‘ಗಿಚ್ಚಿ ಗಿಲಿಗಿಲಿ’ಯ ಸತತ ಮೂರು ಸೀಸನ್ಗಳಲ್ಲಿ ಕಾಣಿಸಿಕೊಂಡಿರುವ ಅವರು, ‘ಕ್ವಾಟ್ಲೆ ಕಿಚನ್’ ಶೋನ ವಿನ್ನರ್ ಆಗಿದ್ದರು. ‘ಬಾಯ್ಸ್ ವರ್ಸಸ್ ಗರ್ಲ್ಸ್’ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲೂ ಮನರಂಜನೆ ನೀಡಿದ್ದಾರೆ.
ಸೋನಿಕಾ ಗೌಡ
ನಟಿ ಹಾಗೂ ಮಾಡೆಲ್ ಸೋನಿಕಾ ಗೌಡ ಕೂಡ ಈ ಬಾರಿ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸುತ್ತಿದ್ದಾರೆ ಎನ್ನಲಾಗಿದೆ. ‘ಶತಾಯ ಗತಾಯ’, ‘ನಾನೇ ರಾಜ’, ‘ಖುಷಿ ಖುಷಿಯಾಗಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸೋನಿಕಾ, ಮಾಡಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ.

MUST WATCH : ಬೈರಮಂಗಲ ರೈತರ ಮೇಲೆ FIR – ರಸ್ತೆ ತಡೆದಿದ್ದು ತಪ್ಪು ಎಂದ ಸಿಎಂ




