
Bigg Boss Kannada 13: ಮನೆ ಕೆಲಸ ಮಾಡೋದಕ್ಕೆ ಕಿರಣ್ ಶಾಸ್ತ್ರೀ ತಕರಾರು!
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ‘ಎಮರ್ಜೆನ್ಸಿ ಎಕ್ಸಿಟ್’ ಎಂಬ ಪದ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದೆ. ‘ಕಳಪೆ’ ಪಡೆದು ಜೈಲಿಗೆ ತೆರಳಿದ್ದರೂ ಎಲಿಮಿನೇಷನ್ ಟೆನ್ಶನ್ನಿಂದ ಕಿರಣ್ ಶಾಸ್ತ್ರಿ ಬಚಾವಾಗಿದ್ದಾರೆ. ಆದರೆ, ಇದೀಗ ಮನೆಯೊಳಗೆ ಅವರ ನಡವಳಿಕೆ ಮತ್ತು ಆಟದ ತಂತ್ರಗಳ ಬಗ್ಗೆ ಮತ್ತೆ ಆಕ್ರೋಶ ವ್ಯಕ್ತವಾಗುತ್ತಿದೆ.
ಮನೆ ಕೆಲಸ ಮಾಡೋದಕ್ಕೆ ತಕರಾರು!
ಬಹುತೇಕ ಸ್ಪರ್ಧಿಗಳು ಕಿರಣ್ ಶಾಸ್ತ್ರಿ ಅವರಿಗೆ ‘ಕಳಪೆ’ ಪಟ್ಟ ನೀಡಿರುವ ಬೆನ್ನಲ್ಲೇ, ಮನೆ ಕೆಲಸದ ವಿಚಾರದಲ್ಲೂ ಕಿರಣ್ ತಕರಾರು ಮಾಡಿಕೊಂಡಿರುವುದು ಮನೆಯ ವಾತಾವರಣವನ್ನು ಬಿಸಿ ಮಾಡಿದೆ.
READ THIS : ತಾಂಡವ್ ಅನಿರೀಕ್ಷಿತ ನಿರ್ಗಮನಕ್ಕೆ ಇಡೀ ಮನೆ ಕಣ್ಣೀರು!

ಒಂದು ಕೆಲಸವಾದ್ರೂ ಅಚ್ಚುಕಟ್ಟಾಗಿ ಮಾಡು
ಸೌತೆಕಾಯಿ ಕಟ್ ಮಾಡಿ ಕೊಡುವಂತೆ ಧನುಷ್ ಕಿರಣ್ ಅವರಿಗೆ ಹೇಳುತ್ತಾರೆ. ಆದರೆ, ಕಿರಣ್ ಅವರು ತರಕಾರಿ ಕತ್ತರಿಸುವ ಬದಲು ಬೇರೆ ರೀತಿಯಲ್ಲಿ ಕೆಲಸ ಮಾಡಿಕೊಡುವುದಾಗಿ ಹೇಳಿ ಜವಾಬ್ದಾರಿಯಿಂದ ಹಿಂದೆ ಸರಿಯಲು ಯತ್ನಿಸುತ್ತಾರೆ. ಇದಕ್ಕೆ ಮಂಜು ಆಕ್ಷೇಪ ವ್ಯಕ್ತಪಡಿಸುತ್ತಾರೆ.
‘ನಿನಗೆ ಇರೋದು ಒಂದೇ ಕೆಲಸ, ಅದಾದರೂ ಅಚ್ಚುಕಟ್ಟಾಗಿ ಮಾಡು’ ಎಂದು ಮಂಜು ಕಿರಣ್ಗೆ ತಾಕೀತು ಮಾಡುತ್ತಾರೆ. ಆದರೆ, ಕಿರಣ್ ಅವರು ತರಕಾರಿ ಕಟ್ ಮಾಡುವುದಿಲ್ಲ ಎಂದು ಪಟ್ಟು ಹಿಡಿಯುತ್ತಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಮಂಜು ಇದ್ದವರು ಕ್ಷಮೆ ಕೇಳಬೇಕಾ? ಎಂದಿದ್ದಾರೆ. ಒಟ್ಟಾರೆಯಾಗಿ ಕಿರಣ್ ಕಾಟ ಮನೆಯಲ್ಲಿ ಜೋರಾಗಿದೆ.

MUST WATCH : ಹಿಂದೂ ಮಹಾಗಣಪತಿ ಬಂಟಿಂಗ್ಸ್ ತೆರವು – ಪಾಲಿಕೆ ವಿರುದ್ಧ ಹಿಂದೂ ಸಂಘಟನೆಗಳ ಕಿಡಿ




