
“ನನ್ನ ಸಾವಿಗೆ ನಾನೇ ಕಾರಣ, ಕುಟುಂಬಕ್ಕೆ ಕಿರುಕುಳ ನೀಡಬೇಡಿ”: ಸರ್ಕಾರದ ಅನುದಾನ ಸಿಗದೆ KRIDL ಎಂಜಿನಿಯರ್ ಮಿಸ್ಸಿಂಗ್!
ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಉಂಟಾದ ಆರ್ಥಿಕ ಸಂಕಷ್ಟ ಹಾಗೂ ಗುತ್ತಿಗೆದಾರರ ಕಿರುಕುಳಕ್ಕೆ ಬೇಸತ್ತು, ಡೆತ್ನೋಟ್ ಮಾದರಿಯ ಸುದೀರ್ಘ ಪತ್ರ ಬರೆದಿದ್ದ KRIDL ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (AEE) ಫರ್ವೀಜ್ ನಾಪತ್ತೆಯಾಗಿರುವ ಘಟನೆ ಗದಗದಲ್ಲಿ ನಡೆದಿದೆ.
ಡೆಟ್ನೋಟ್ನಲ್ಲಿ ಏನಿದೆ?
ಫರ್ವೀಜ್ ಅವರು ಸೆಪ್ಟೆಂಬರ್ 12ರಂದು ಬೆಂಗಳೂರಿನ ಕೆಆರ್ಐಡಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದ್ದು, ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ತೀವ್ರ ಒತ್ತಡಕ್ಕೆ ಒಳಗಾಗಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
READ THIS : ಡೆತ್ ನೋಟ್ ಬರೆದಿಟ್ಟು ಕೆರೆಗೆ ಹಾರಿ ಯುವಕ ಸೂಸೈಡ್!

ಅನುದಾನ ಬಾರದ ಕಾರಣ ಸಬ್-ಗುತ್ತಿಗೆದಾರರು ಪ್ರತಿದಿನ ಮನೆ ಮುಂದೆ ಬಂದು ಗಲಾಟೆ ಮಾಡುತ್ತಿದ್ದರು. ಅಲ್ಲದೆ, ಫೋನ್ ಮೂಲಕವೂ ಕಿರುಕುಳ ನೀಡುತ್ತಿದ್ದರು.
ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ತಮ್ಮ ಸಾವಿಗೆ ತಾವೇ ಹೊಣೆ ಎಂಬ ರೀತಿಯ ಹೇಳಿಕೆಯನ್ನೂ ಪತ್ರದಲ್ಲಿ ದಾಖಲಿಸಿರುವ ಫರ್ವೀಜ್, ತಮ್ಮ ಉಪವಿಭಾಗಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಹಾಗೂ ಬೇರೆ AEEಯನ್ನು ನೇಮಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ತಮ್ಮ ಕುಟುಂಬಸ್ಥರಿಗೆ ಯಾವುದೇ ರೀತಿಯ ಕಿರುಕುಳ ನೀಡದಂತೆ ಮನವಿ ಮಾಡಿಕೊಂಡಿದ್ದಾರೆ.
ಡೆತ್ನೋಟ್ ಬರೆದಿಟ್ಟು ಮಿಸ್ಸಿಂಗ್!
ಸೆಪ್ಟೆಂಬರ್ 12ರಂದು ಪತ್ರ ಬರೆದಿದ್ದ ಫರ್ವೀಜ್, ಸೆಪ್ಟೆಂಬರ್ 13ರಂದು ಬೆಂಗಳೂರಿನಲ್ಲಿ ಸಭೆ ಇದೆ ಎಂದು ಹೇಳಿ ಮನೆಯಿಂದ ಹೊರಟಿದ್ದರು. ಆದರೆ ಬಳಿಕ ಮನೆಗೆ ವಾಪಸ್ ಆಗದೆ ನಾಪತ್ತೆಯಾಗಿದ್ದಾರೆ. ಪತ್ನಿ, ಮಗಳು, ತಂದೆ-ತಾಯಿ ಹಾಗೂ ಸಹೋದರರನ್ನು ಅಗಲಿರುವ ಫರ್ವೀಜ್ ಅವರ ಬಗ್ಗೆ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಅವರನ್ನು ಶೀಘ್ರವಾಗಿ ಪತ್ತೆಹಚ್ಚುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ನಾಪತ್ತೆ ಪ್ರಕರಣ ದಾಖಲು
ಈ ಸಂಬಂಧ ಸೆಪ್ಟೆಂಬರ್ 16ರಂದು ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಫರ್ವೀಜ್ ಅವರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.
MUST WATCH : ದಸರಾ ಮನರಂಜನೆಗೆ ಸೀಮಿತವಾಗದಿರಲಿ – ಪ್ರತಿಭೆ ಗುರ್ತಿಸೋ ವೇದಿಕೆಯಾಗಲಿ ಎಂದ HALAPPA




