
Bengaluru : ಹಾಲಿನ ದರ ಏರಿಕೆ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಶಾಕ್: ಶೀಘ್ರದಲ್ಲೇ ಟೀ, ಕಾಫಿ ಬೆಲೆಯೂ ಹೆಚ್ಚಳ?
Bengaluru : ರಾಜ್ಯದಲ್ಲಿ ಹಾಲಿನ ದರ ಏರಿಕೆಯಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ, ಇದರ ಬಿಸಿ ಇದೀಗ ಹೋಟೆಲ್ ಉದ್ಯಮಕ್ಕೂ ತಟ್ಟುವ ಸಾಧ್ಯತೆಯಿದೆ. ಹಾಲಿನ ಬೆಲೆ ಹೆಚ್ಚಾದರೆ ಹೋಟೆಲ್ಗಳು ಹಾಗೂ ತಿಂಡಿ-ತಿನಿಸು ಅಂಗಡಿಗಳಲ್ಲಿ ಟೀ ಮತ್ತು ಕಾಫಿ ದರ ಏರಿಸುವ ಅನಿವಾರ್ಯತೆ ಎದುರಾಗಬಹುದು.
ಗ್ರಾಹಕರಿಗೆ ಮತ್ತೊಂದು ಶಾಕ್!
ಈಗಾಗಲೇ ಹಾಲಿನ ದರ ಪರಿಷ್ಕರಣೆ ಕುರಿತು ಹಾಲು ಒಕ್ಕೂಟಗಳ ಪ್ರಮುಖ ಸಭೆ ನಡೆದಿದ್ದು, ದರ ಏರಿಕೆಗೆ ಸಂಬಂಧಿಸಿದ ಅಧಿಕೃತ ಪ್ರಸ್ತಾವನೆಯನ್ನು ಇಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ. ಸರ್ಕಾರ ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ ಪ್ರತಿ ಲೀಟರ್ ಹಾಲಿನ ಬೆಲೆಯನ್ನು ಎಷ್ಟು ಹೆಚ್ಚಿಸಬೇಕು ಎಂಬುದರ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
READ THIS : ಹಾಲಿನ ಬೆಲೆ ಏರಿಕೆ ಜೊತೆಯೇ ಜನರಿಗೆ ಕಾದಿದೆ ಮತ್ತೊಂದು ‘ದುಬಾರಿ’ ಶಾಕ್!

ಹಾಲಿನ ದರ ಏರಿಕೆಯಾದರೆ ಹೋಟೆಲ್ಗಳ ಉತ್ಪಾದನಾ ವೆಚ್ಚವೂ ಹೆಚ್ಚಾಗಲಿದೆ. ವಿಶೇಷವಾಗಿ ಟೀ, ಕಾಫಿ ಸೇರಿದಂತೆ ಹಾಲು ಬಳಸುವ ಪಾನೀಯಗಳ ಬೆಲೆ ಪರಿಷ್ಕರಣೆ ಅನಿವಾರ್ಯವಾಗಬಹುದು.
Bengaluru – ಟೀ, ಕಾಫಿ ಬೆಲೆಯೂ ಹೆಚ್ಚಳ?
ಸರ್ಕಾರದ ಅಂತಿಮ ನಿರ್ಧಾರದ ಬಳಿಕ, ರಾಜ್ಯದ ಹೋಟೆಲ್ ಮಾಲೀಕರ ಸಂಘವೂ ಸಭೆ ನಡೆಸಿ ಟೀ ಮತ್ತು ಕಾಫಿ ದರ ಹೆಚ್ಚಳ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ದರ ಏರಿಕೆಯಾದಲ್ಲಿ ಪ್ರತಿನಿತ್ಯ ಹೋಟೆಲ್ಗಳಲ್ಲಿ ಟೀ-ಕಾಫಿ ಸೇವಿಸುವ ಗ್ರಾಹಕರ ಮೇಲೂ ಹೆಚ್ಚುವರಿ ಹೊರೆ ಬೀಳಲಿದೆ.

MUST WATCH : ಟ್ಯಾಟೂ ಪ್ರೀತಿ ಹಿಂದೆ ಬ್ಲ್ಯಾಕ್ಮೇಲ್ – ಮಹಿಳೆ ದೂರಿನಿಂದ ಬಿತ್ತು ಎಫ್ಐಆರ್




