BENGALURU : ಪರಪ್ಪನ ಅಗ್ರಹಾರದಲ್ಲಿ ಮತ್ತೆ ಮೊಬೈಲ್, ಸಿಮ್ ಪತ್ತೆ – ಆರೋಪಿಗಳ ವಿರುದ್ಧ FIR

ರಾಜ್ಯದ ಅತಿ ಭದ್ರತಾ ಕಾರಾಗೃಹಗಳಲ್ಲಿ ಒಂದಾದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೆ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಜೈಲಿನೊಳಗೆ ಒಂದು ಮೊಬೈಲ್ ಫೋನ್ ಹಾಗೂ ಮೂರು ಸಿಮ್ಕಾರ್ಡ್ಗಳು ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಎಫ್ಐಆರ್ ದಾಖಲಾಗಿದೆ.
1 ಫೋನ್, 3 ಸಿಮ್ ಕಾರ್ಡ್ ಪತ್ತೆ!
ಜೈಲಿನೊಳಗೆ ಮೊಬೈಲ್ ಹಾಗೂ ಸಿಮ್ಕಾರ್ಡ್ಗಳು ಹೇಗೆ ಪ್ರವೇಶಿಸಿದವು ಅನ್ನೋ ಪ್ರಶ್ನೆ ಇದೀಗ ಎದುರಾಗಿದೆ. ನಿಷೇಧಿತ ವಸ್ತುಗಳನ್ನು ಒಳಗೆ ತರಲು ಯಾರಾದರೂ ಸಹಾಯ ಮಾಡಿದ್ರಾ..? ಸಿಬ್ಬಂದಿ ಅಥವಾ ಅಧಿಕಾರಿಗಳ ಲೋಪ ಇದೆಯಾ..? ಅನ್ನೋ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
READ THIS : ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮೋಜು–ಮಸ್ತಿ 4 ಕೈದಿಗಳ ವಿರುದ್ಧ FIR ದಾಖಲು!

BENGALURU – ಜೈಲು ಅಧಿಕಾರಿಗಳಿಂದ ದೂರು
ಇನ್ನು ಜೈಲಿನೊಳಗೆ ಮೊಬೈಲ್ ಬಳಸುತ್ತಿದ್ದ ಆರೋಪಿತರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ. ಜೈಲು ಅಧಿಕಾರಿ ಕೊಟ್ರೇಶ್ ನೀಡಿದ ದೂರಿನ ಆಧಾರದ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಜೈಲಿನೊಳಗೆ ಮೊಬೈಲ್ ಸೇರಿದಂತೆ ನಿಷೇಧಿತ ವಸ್ತುಗಳ ಬಳಕೆ ಹಾಗೂ ಅವುಗಳ ಪ್ರವೇಶದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಾರಾಗೃಹದಲ್ಲಿ ರಾಜಾತಿಥ್ಯ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ಪ್ರಕರಣ ಬೆಳಕಿಗೆ ಬರ್ತಾನೆ ಇದೆ. ಉಗ್ರರಿಗೆ ಸೌಲಭ್ಯ ಕಲ್ಪಿಸಿರುವ ಆರೋಪದ ಹಿನ್ನೆಲೆ ಜೈಲು ಆಡಳಿತದ ಕಾರ್ಯ ವೈಖರಿ ಮತ್ತೊಮ್ಮೆ ಪ್ರಶ್ನಾರ್ಥಕವಾಗಿದೆ.
MUST WATCH : ದುಡ್ಡು ಕೊಟ್ರೆ ಮಾತ್ರ ರೇಷನ್ ಕಾರ್ಡ್ – ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ




