BENGALURU : ಬಿಕಾಂ ವಿದ್ಯಾರ್ಥಿಗೆ ಸಹಪಾಠಿಯಿಂದಲೇ ಚಾಕು ಇರಿತ!

ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೀಪಾ ಕಾಂಪ್ಲೆಕ್ಸ್ ಬಳಿ ನಡೆದಿದೆ. ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ಯೋಗೀಶ್ ಮೃತಪಟ್ಟ ವಿದ್ಯಾರ್ಥಿ.
ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ
ಯೋಗೀಶ್ ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದು, ಡಾನ್ಸ್ನಲ್ಲೂ ಆಸಕ್ತಿ ಹೊಂದಿದ್ದ ಎಂದು ತಿಳಿದುಬಂದಿದೆ. ಎಂದಿನಂತೆ ಇಂದು ಕಾಲೇಜಿಗೆ ಬಂದಿದ್ದ ಯೋಗೀಶ್ಗೆ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ಕರೆ ಮಾಡಿ, ಹೊರಗೆ ಬಂದು ಮಾತನಾಡುವಂತೆ ತಿಳಿಸಿದ್ದಾನೆ ಎನ್ನಲಾಗಿದೆ.
ಅದರಂತೆ ಕಾಲೇಜಿನ ಹಿಂಭಾಗದಲ್ಲಿರುವ ಜಿಮ್ವೊಂದರ ಬಳಿ ಯೋಗೀಶ್ ತೆರಳಿದ್ದಾನೆ. ಅಲ್ಲಿ ಏಳೆಂಟು ಮಂದಿ ಆತನೊಂದಿಗೆ ಮಾತನಾಡಲು ಬಂದಿದ್ದರು ಎನ್ನಲಾಗಿದೆ. ಈ ವೇಳೆ ಯೋಗೀಶ್ ಸ್ನೇಹಿತರು ಹಾಗೂ ಮತ್ತೊಂದು ಗುಂಪಿನ ನಡುವೆ ಯಾವುದೋ ವಿಚಾರಕ್ಕೆ ವಾಗ್ವಾದ ಆರಂಭವಾಗಿ, ಬಳಿಕ ಗಲಾಟೆ ನಡೆದಿದೆ.
READ THIS : ಯುವ ವಿದ್ಯಾರ್ಥಿಯಿಂದ ಯುವತಿಗೆ ಚಾಕು ಇರಿತ!

ವಿದ್ಯಾರ್ಥಿಗೆ ಸಹಪಾಠಿಯಿಂದಲೇ ಚಾಕು ಇರಿತ!
ಗಲಾಟೆ ನಡೆಯುತ್ತಿದ್ದ ವೇಳೆ ಗುಂಪಿನಲ್ಲಿದ್ದ ಓರ್ವ ವಿದ್ಯಾರ್ಥಿ ಚಾಕುವಿನಿಂದ ಯೋಗೀಶ್ಗೆ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಎದೆಗೆ ಗಂಭೀರ ಗಾಯಗೊಂಡ ಯೋಗೀಶ್ನನ್ನು ಆತನ ಸ್ನೇಹಿತರು ಬೈಕ್ನಲ್ಲಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಯೋಗೀಶ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.
BENGALURU – ಪೊಲೀಸರು ಭೇಟಿ, ಪರಿಶೀಲನೆ
ಘಟನೆ ಕುರಿತು ಮಾಹಿತಿ ಪಡೆದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ಕಾರಣ ಹಾಗೂ ಭಾಗಿಯಾಗಿರುವವರ ಕುರಿತು ತನಿಖೆ ಮುಂದುವರಿಸಿದ್ದಾರೆ.

MUST WATCH : ಶಿರಾದಲ್ಲಿ ತಡರಾತ್ರಿ ಭರ್ಜರಿ ಮಳೆ ಮನೆಗಳಿಗೆ ನೀರು ನುಗ್ಗಿ ಅವಾಂತರ




