
ನಟಿ RANYA RAO ಗೆ 89 ಕೋಟಿ ದಂಡ
ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ಗೆ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಹೌದು.. ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಇಲಾಖೆ 399 ಪುಟಗಳ ವಿಸ್ತೃತ ಆದೇಶ ಹೊರಡಿಸಿದ್ದು, ರನ್ಯಾ ರಾವ್ಗೆ ಬರೋಬ್ಬರಿ 89 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.

ಚಿನ್ನ ಸಾಗಾಟ ಮಾಡಿರುವುದು ಸಾಬೀತು
2024ರ ಮಾರ್ಚ್ನಿಂದ 2025ರ ಫೆಬ್ರವರಿವರೆಗಿನ ಅವಧಿಯಲ್ಲಿ ಸುಮಾರು 113 ಕೆಜಿ ಚಿನ್ನದ ಅಕ್ರಮ ಸಾಗಾಟದಲ್ಲಿ ರನ್ಯಾ ರಾವ್ ಪಾತ್ರವಿತ್ತು ಎಂದು ಕಸ್ಟಮ್ಸ್ ಇಲಾಖೆ ನಿರ್ಣಯಿಸಿದೆ. ಸಹ ಆರೋಪಿಗಳ ಜೊತೆ ಸೇರಿ ದುಬೈನಿಂದ ಚಿನ್ನ ಸಾಗಾಟ ನಡೆಸಲಾಗಿತ್ತು ಎಂಬುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ.
READ THIS : ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ – ನಟಿ Ranya Rao ಗೆ ಜಾಮೀನು

89 ಕೋಟಿ ರೂಪಾಯಿ ದಂಡ!
2025ರ ಮಾರ್ಚ್ನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ RANYA RAO ಅವರನ್ನು ಡಿಆರ್ಐ ಅಧಿಕಾರಿಗಳು ಬಂಧಿಸಿದ್ದರು. ಆ ಸಂದರ್ಭದಲ್ಲಿ 14 ಕೆಜಿಗೂ ಹೆಚ್ಚು ವಿದೇಶಿ ಮೂಲದ ಚಿನ್ನ ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಪ್ರಕರಣದ ತನಿಖೆ ವಿಸ್ತರಣೆಯಾಗಿದ್ದು, ಚಿನ್ನದ ಅಕ್ರಮ ಸಾಗಾಟ ಹಾಗೂ ಹಣಕಾಸು ವ್ಯವಹಾರಗಳ ಕುರಿತು ಹಲವು ತನಿಖಾ ಸಂಸ್ಥೆಗಳು ತನಿಖೆ ನಡೆಸಿವೆ.
ಇದೀಗ ಕಸ್ಟಮ್ಸ್ ಇಲಾಖೆಯ ವಿಸ್ತೃತ ಆದೇಶ ಪ್ರಕರಣಕ್ಕೆ ಮತ್ತೊಂದು ಮಹತ್ವದ ತಿರುವು ನೀಡಿದೆ. ರನ್ಯಾ ರಾವ್ಗೆ 89 ಕೋಟಿ ರೂಪಾಯಿ ದಂಡ ವಿಧಿಸಿ ಕಸ್ಟಮ್ಸ್ ಇಲಾಖೆ ಆದೇಶಿಸಿದೆ. ಕಸ್ಟಮ್ಸ್ ಜಂಟಿ ನಿರ್ದೇಶಕ ಸಂದೀಪ್ ಅವರಿಂದ ಈ ಆದೇಶ ಹೊರಡಿಸಲಾಗಿದೆ. ದಂಡದ ಮಾಹಿತಿಯನ್ನು ರನ್ಯಾ ರಾವ್ ಅವರಿಗೆ ಕಸ್ಟಮ್ಸ್ ಇಲಾಖೆ ಕಳುಹಿಸಿದೆ.

MUST WATCH : ಚಿನ್ನದ ಕರಡಿಗೆ ಕೊಟ್ಟಿದ್ರಾ ಅಶೋಕ್ ಖೇಣಿ ಅದೆಲ್ಲಾ ಇಲ್ಲಸಲ್ಲದ ಮಾತಷ್ಟೇ ಎಂದ ಸಿದ್ದಲಿಂಗ ಶ್ರೀ




