
DHARWAD : ರೈತನ ಮೇಲೆ ಕರಡಿ ದಾಳಿ – ಆಸ್ಪತ್ರೆಗೆ ದಾಖಲು!
ಹೊಲಕ್ಕೆ ಹೋದ ರೈತನ ಮೇಲೆ ಕರಡಿಗಳು ಏಕಾಏಕಿ ದಾಳಿ ನಡೆಸಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ನಡೆದಿದೆ. ಹೌದು.. ಗ್ರಾಮದ ಶಂಕರಪ್ಪ ಆಗಸರ್ ಎಂಬ ರೈತ ಕರಡಿ ದಾಳಿಯಿಂದ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಘಟನೆಯಿಂದಾಗಿ ಗ್ರಾಮಸ್ಥರು ಹಾಗೂ ರೈತರಲ್ಲಿ ಆತಂಕ ಮನೆ ಮಾಡಿದೆ.
READ THIS : Challakere ಬಸ್ ನಿಲ್ದಾಣ ಬಳಿ ಕರಡಿ ಪ್ರತ್ಯಕ್ಷ CCTV ಯಲ್ಲಿ ಸೆರೆ..!!

ಹೊಲಗಳಿಗೆ ತೆರಳಲು ಹಿಂದೇಟು ಹಾಕುತ್ತಿರುವ ರೈತರು
ಶಂಕರಪ್ಪ ಆಗಸರ್ ಅವರ ಕಬ್ಬಿನ ಹೊಲಕ್ಕೆ ಕರಡಿಗಳು ನುಗ್ಗಿದ್ದು, ಈ ವೇಳೆ ರೈತನ ಮೇಲೆ ದಾಳಿ ನಡೆಸಿವೆ. ಇನ್ನು ಕಬ್ಬಿನ ಹೊಲದ ಭಾಗದಲ್ಲಿ ಕರಡಿಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕೃಷಿ ಕೆಲಸಕ್ಕೆ ಹೊಲಗಳಿಗೆ ತೆರಳಲು ರೈತರು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

DHARWAD – ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹ
ಇನ್ನು ಕಲಘಟಗಿಯಲ್ಲಿ ಕರಡಿಗಳ ಹಾವಳಿ ಹೆಚ್ಚಾಗ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕರಡಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಜೊತೆಗೆ ರೈತರು ಹಾಗೂ ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

MUST WATCH : ಶಿವಕುಮಾರ ಶ್ರೀ ಧರಿಸಿದ್ದ ಚಿನ್ನದ ಕರಡಿಗ – ಹುಲಿಕುಂಟೆ ಸೋಮಣ್ಣ ನೀಡಿದ್ದು ಎಂದ ಶ್ರೀಗಳು




