
ಕರ್ತವ್ಯದ ಮೇಲಿದ್ದಾಗಲೇ Heart Attack – ಮುಖ್ಯ ಶಿಕ್ಷಕ ಸಾವು!=
ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಧಾರವಾಡ ನಗರದ ಮಾಳಮಡ್ಡಿಯಲ್ಲಿ ನಡೆದಿದೆ.
ಆಗಿದ್ದೇನು?
ಮಾಳಮಡ್ಡಿಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಐಐ ಮುಲ್ಲಾನವರ್ (59) ಮೃತ ದುರ್ದೈವಿಯಾಗಿದ್ದಾರೆ. ಶಾಲೆಯಲ್ಲಿ ಕರ್ತವ್ಯದಲ್ಲಿದ್ದ ವೇಳೆ ಅವರಿಗೆ ಏಕಾಏಕಿ Heart Attack ಆಗಿದೆ. ತಕ್ಷಣವೇ ಶಾಲೆಯಲ್ಲಿದ್ದ ಇತರ ಶಿಕ್ಷಕರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
READ THIS : DHO ಕಚೇರಿಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ಆರೋಗ್ಯ ಇಲಾಖೆ ಸೂಪರ್ಡೆಂಟ್

Heart Attack – ಶಿಕ್ಷಕರ ದಿನಾಚರಣೆಯಂದೇ ಅಂತ್ಯಕ್ರಿಯೆ
ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮುಲ್ಲಾನವರ್ ಮೃತಪಟ್ಟಿದ್ದಾರೆ. ಶುಕ್ರವಾರ ಸಂಜೆ ಅವರು ಕೊನೆಯುಸಿರೆಳೆದಿದ್ದಾರೆ. ಸಂಜೆ ಮುಖ್ಯ ಶಿಕ್ಷಕ ಸಾವನ್ನಪ್ಪಿದ ಹಿನ್ನೆಲೆ ಶಿಕ್ಷಕರ ದಿನಾಚರಣೆ ದಿನವೇ ಮುಲ್ಲಾನವರ ಕುಟುಂಬದವರು ಅವರ ಅಂತ್ಯಕ್ರಿಯೆ ಮಾಡಿದ್ದಾರೆ.
MUST WATCH : ದೊರೆ ಅಂತ ಕರಿಬೇಡಿ ಎಂದ DKS – ಡಿಕೆಶಿಗೆ VIJAYENDRA ಫುಲ್ ಕ್ಲಾಸ್..!



