
ನವೆಂಬರ್ ತಿಂಗಳಲ್ಲಿ ದೀಪಾವಳಿ, ಕನಕದಾಸ ಜಯಂತಿ ಇತ್ಯಾದಿ ಹಬ್ಬ ಹರಿದಿನ – 15 ದಿನಗಳವರೆಗೆ BANK ರಜೆ
ನವೆಂಬರ್ ತಿಂಗಳಲ್ಲಿ ದೀಪಾವಳಿ, ಬಲಿಪಾಡ್ಯಮಿ, ಕನಕದಾಸ ಜಯಂತಿ ಸೇರಿದಂತೆ ಹಲವು ಹಬ್ಬಗಳ ಹಿನ್ನೆಲೆಯಲ್ಲಿ ಬ್ಯಾಂಕ್ಗಳಿಗೆ ರಜೆ ಇರಲಿದೆ. ದೇಶದ ವಿವಿಧ ರಾಜ್ಯಗಳಲ್ಲಿ ವಾರಾಂತ್ಯದ ರಜೆಗಳನ್ನೂ ಸೇರಿಸಿ ಒಟ್ಟು 15 ದಿನಗಳವರೆಗೆ ಬ್ಯಾಂಕ್ ರಜೆಗಳಿದ್ದು, ಕರ್ನಾಟಕದಲ್ಲಿ 8 ದಿನ ಬ್ಯಾಂಕ್ಗಳು ಬಂದ್ ಇರಲಿವೆ. ಹಾಗಾದ್ರೆ ಯಾವ್ಯಾವ ದಿನ ಬ್ಯಾಂಕ್ಗಳಿಗೆ ರಜೆ ಇದೆ ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ವಿವಿಧ ರಾಜ್ಯಗಳಲ್ಲಿ 15 ದಿನ ಬ್ಯಾಂಕ್ ರಜೆ
ಹೌದು.. ನವೆಂಬರ್ ತಿಂಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಹಬ್ಬಗಳು ಹಾಗೂ ಪ್ರಾದೇಶಿಕ ಆಚರಣೆಗಳ ಹಿನ್ನೆಲೆಯಲ್ಲಿ ಬ್ಯಾಂಕ್ಗಳಿಗೆ ರಜೆ ಇರಲಿದೆ. ನವೆಂಬರ್ 1 ಮತ್ತು 8ರಂದು ಭಾನುವಾರದ ರಜೆ ಇದ್ದು, ನವೆಂಬರ್ 9ರಂದು ದೀಪಾವಳಿ ಹಾಗೂ ಲಕ್ಷ್ಮೀ ಪೂಜೆಯ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಬ್ಯಾಂಕ್ಗಳಿಗೆ ರಜೆ ಇರಲಿದೆ.
ನವೆಂಬರ್ 10ರಂದು ದೀಪಾವಳಿ, ಬಲಿಪಾಡ್ಯಮಿ ಹಾಗೂ ವಿಕ್ರಮ ಸಂವತ್ಸರ ಹೊಸ ವರ್ಷದ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬ್ಯಾಂಕ್ಗಳು ಬಂದ್ ಇರಲಿವೆ.
ನವೆಂಬರ್ 11ರಂದು ಭಾಯ್ ದೂಜ್ ಹಾಗೂ ಚಿತ್ರಗುಪ್ತ ಜಯಂತಿಯ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ಬ್ಯಾಂಕ್ಗಳಿಗೆ ರಜೆ ಇರಲಿದೆ.

READ THIS : ಸತತ ನಾಲ್ಕು ದಿನ Bank ಸೇವೆ ಬಂದ್! ಯಾಕೆ..?
ನವೆಂಬರ್ 14ರಂದು ಎರಡನೇ ಶನಿವಾರದ ರಜೆ..!
ಇನ್ನು ನವೆಂಬರ್ 13ರಂದು ಮೇಘಾಲಯದಲ್ಲಿ ವಂಗಲ ಉತ್ಸವದ ಹಿನ್ನೆಲೆಯಲ್ಲಿ ಬ್ಯಾಂಕ್ ರಜೆ ಇರಲಿದೆ. ನವೆಂಬರ್ 14ರಂದು ಎರಡನೇ ಶನಿವಾರ ಹಾಗೂ 15ರಂದು ಭಾನುವಾರದ ರಜೆ ಇರಲಿದೆ. ನವೆಂಬರ್ 16ರಂದು ಛಾತ್ ಪೂಜೆಯ ಹಿನ್ನೆಲೆಯಲ್ಲಿ ಬಿಹಾರ ಹಾಗೂ ಜಾರ್ಖಂಡ್ನಲ್ಲಿ ಬ್ಯಾಂಕ್ಗಳಿಗೆ ರಜೆ ಇರಲಿದೆ.
ನವೆಂಬರ್ 20ರಂದು ಉತ್ತರಾಖಂಡ್ನಲ್ಲಿ ಇಗಸ್ ಬಾಗವಲ್ ಆಚರಣೆಯ ಹಿನ್ನೆಲೆಯಲ್ಲಿ ರಜೆ ಇರಲಿದೆ.
ನವೆಂಬರ್ 22ರಂದು ಭಾನುವಾರ, 23ರಂದು ಮೇಘಾಲಯದಲ್ಲಿ ಸೆಂಗ್ ಕುಟ್ ಸ್ನೆಮ್ ಹಾಗೂ 24ರಂದು ಗುರುನಾನಕ್ ಜಯಂತಿ ಮತ್ತು ಕಾರ್ತಿಕ ಪೂರ್ಣಿಮೆಯ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಬ್ಯಾಂಕ್ಗಳಿಗೆ ರಜೆ ಇರಲಿದೆ.

ಕರ್ನಾಟಕದಲ್ಲಿ ಯಾವ್ಯಾವ ದಿನ ಬ್ಯಾಂಕ್ ರಜೆ..?
ಇನ್ನು ಕರ್ನಾಟಕದ ಬ್ಯಾಂಕ್ ರಜೆಗಳ ಪಟ್ಟಿ ನೋಡೋದಾದ್ರೆ, ನವೆಂಬರ್ 1 ಹಾಗೂ 8ರಂದು ಭಾನುವಾರದ ರಜೆ ಇರಲಿದೆ.
ನವೆಂಬರ್ 10ರಂದು ದೀಪಾವಳಿ ಹಾಗೂ ಬಲಿಪಾಡ್ಯಮಿ ಹಿನ್ನೆಲೆಯಲ್ಲಿ ಬ್ಯಾಂಕ್ಗಳು ಬಂದ್ ಇರಲಿವೆ. ನವೆಂಬರ್ 14ರಂದು ಎರಡನೇ ಶನಿವಾರ ಹಾಗೂ 15ರಂದು ಭಾನುವಾರದ ರಜೆ ಇರಲಿದೆ.
ನವೆಂಬರ್ 22ರಂದು ಭಾನುವಾರ, ನವೆಂಬರ್ 27ರಂದು ಕನಕದಾಸ ಜಯಂತಿ ಹಾಗೂ ನವೆಂಬರ್ 29ರಂದು ಭಾನುವಾರದ ರಜೆ ಇರಲಿದೆ. ಹೀಗೆ ನೀಡಿರುವ ಪಟ್ಟಿಯ ಪ್ರಕಾರ ಕರ್ನಾಟಕದಲ್ಲಿ ಒಟ್ಟು ಎಂಟು ದಿನ ಬ್ಯಾಂಕ್ಗಳಿಗೆ ರಜೆ ಇರಲಿದೆ.

ಬ್ಯಾಂಕ್ ಬಂದ್ ಆದ್ರೂ ಆನ್ಲೈನ್ ಸೇವೆ ಲಭ್ಯ..!
ಬ್ಯಾಂಕ್ಗಳಿಗೆ ರಜೆ ಇದ್ದರೂ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಹೆಚ್ಚಿನ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ಲಭ್ಯವಿರಲಿವೆ.
ಯುಪಿಐ, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ಎಟಿಎಂ ಸೇವೆಗಳನ್ನು ಬಳಸಬಹುದು.
ಆದರೆ ಬ್ಯಾಂಕ್ ಶಾಖೆಗೆ ನೇರವಾಗಿ ತೆರಳಿ ಮಾಡಿಸಿಕೊಳ್ಳಬೇಕಾದ ಕೆಲಸಗಳಿದ್ದರೆ ರಜಾದಿನಗಳ ಪಟ್ಟಿಯನ್ನು ಗಮನಿಸಿ ಮುಂಚಿತವಾಗಿಯೇ ಯೋಜನೆ ರೂಪಿಸಿಕೊಳ್ಳುವುದು ಉತ್ತಮ.
MUST WATCH : ಜನ್ರು ನಮಗೆ ಸಂದೇಶ ಕೊಟ್ಟಿದ್ದಾರೆ – ಅದನ್ನ ಸರಿಮಾಡಿಕೊಳ್ತೀವಿ ಎಂದ CM.!




