
UPI Wrong Transfer : ತಪ್ಪಾಗಿ ಬೇರೆ ಖಾತೆಗೆ ಹಣ ಕಳುಹಿಸಿದ್ರಾ? ವಾಪಸ್ ಪಡೆಯಲು ಹೀಗೆ ಮಾಡಿ
ಡಿಜಿಟಲ್ ಪಾವತಿ ವ್ಯವಸ್ಥೆಯ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಣ ವರ್ಗಾವಣೆ ಹಾಗೂ ವಿವಿಧ ಪಾವತಿಗಳಿಗೆ ಬಹುತೇಕರು UPI ಬಳಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಅಜಾಗರೂಕತೆಯಿಂದ ತಪ್ಪಾದ UPI ಐಡಿ ಅಥವಾ ಖಾತೆಗೆ ಹಣ ವರ್ಗಾವಣೆಯಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಗಾಬರಿಯಾಗದೆ, ಸಾಧ್ಯವಾದಷ್ಟು ಬೇಗ ಕೆಲವು ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ.
UPI ಆ್ಯಪ್ನಲ್ಲೇ ದೂರು ದಾಖಲಿಸಿ
ತಪ್ಪಾಗಿ ಹಣ ವರ್ಗಾವಣೆಯಾಗಿರುವುದು ಗೊತ್ತಾದ ತಕ್ಷಣ ನೀವು ಬಳಸಿರುವ UPI ಆ್ಯಪ್ನಲ್ಲಿ ದೂರು ದಾಖಲಿಸಬಹುದು. Google Pay, PhonePe, Paytm ಅಥವಾ BHIMನಂತಹ ಆ್ಯಪ್ಗಳಲ್ಲಿ ಈ ಸೌಲಭ್ಯ ಲಭ್ಯವಿದೆ.
ಮೊದಲು ಆ್ಯಪ್ ತೆರೆಯಿರಿ. ಬಳಿಕ Transaction Historyಗೆ ತೆರಳಿ ತಪ್ಪಾಗಿ ನಡೆದಿರುವ ವಹಿವಾಟನ್ನು ಆಯ್ಕೆ ಮಾಡಿ.
ಅಲ್ಲಿ ಕಾಣಿಸುವ Report, Help ಅಥವಾ Raise an Issue ಆಯ್ಕೆಯನ್ನು ಕ್ಲಿಕ್ ಮಾಡಿ, ಹಣ ತಪ್ಪಾದ ಖಾತೆಗೆ ವರ್ಗಾವಣೆಯಾಗಿದೆ ಎಂಬುದನ್ನು ನಮೂದಿಸಿ ದೂರು ಸಲ್ಲಿಸಬೇಕು.
READ THIS : NEET PG ಫಲಿತಾಂಶ ಪ್ರಕಟ – ರಿಸಲ್ಟ್ ಪರಿಶೀಲಿಸಲು ಇಲ್ಲಿದೆ ಲಿಂಕ್

ಬ್ಯಾಂಕ್ಗೂ ತಕ್ಷಣ ಮಾಹಿತಿ ನೀಡಿ
ಆ್ಯಪ್ನಲ್ಲಿ ದೂರು ದಾಖಲಿಸಿದ ಬಳಿಕ ನಿಮ್ಮ ಬ್ಯಾಂಕ್ನ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸುವುದು ಸೂಕ್ತ. ಅಗತ್ಯವಿದ್ದರೆ ಬ್ಯಾಂಕ್ ಶಾಖೆಗೆ ತೆರಳಿ ವಹಿವಾಟಿನ ಸಂಪೂರ್ಣ ವಿವರಗಳನ್ನು ಒದಗಿಸಬಹುದು.
ಈ ಸಂದರ್ಭದಲ್ಲಿ ವಹಿವಾಟಿಗೆ ಸಂಬಂಧಿಸಿದ UTR (Unique Transaction Reference) ಸಂಖ್ಯೆ ಬಹಳ ಮುಖ್ಯ. ಅದನ್ನು ಬ್ಯಾಂಕ್ ಅಧಿಕಾರಿಗಳಿಗೆ ನೀಡಿ, ತಪ್ಪಾಗಿ ವರ್ಗಾವಣೆಯಾಗಿರುವ ಹಣವನ್ನು ಹಿಂಪಡೆಯಲು ಅಥವಾ ರಿವರ್ಸಲ್ ಪ್ರಕ್ರಿಯೆ ಆರಂಭಿಸಲು ಮನವಿ ಮಾಡಬಹುದು. ನಿಮ್ಮ ಬ್ಯಾಂಕ್, ಹಣ ಸ್ವೀಕರಿಸಿರುವ ವ್ಯಕ್ತಿಯ ಬ್ಯಾಂಕ್ನ್ನು ಸಂಪರ್ಕಿಸಿ ಹಣ ಮರಳಿ ಪಡೆಯುವ ಪ್ರಕ್ರಿಯೆಯಲ್ಲಿ ನೆರವು ನೀಡಬಹುದು.
ಹಣ ವಾಪಸ್ ಬರುತ್ತದೆ ಎಂಬುದು ಖಚಿತವಲ್ಲ
ತಪ್ಪಾಗಿ ಹಣ ವರ್ಗಾವಣೆಯಾದ ಸಂದರ್ಭದಲ್ಲಿ ವಿಳಂಬ ಮಾಡದೆ ದೂರು ದಾಖಲಿಸುವುದು ಮುಖ್ಯ. ಆದರೆ ಹಣ ಸ್ವಯಂಚಾಲಿತವಾಗಿ ವಾಪಸ್ ಬರುತ್ತದೆ ಎಂಬ ಖಾತರಿ ಇರುವುದಿಲ್ಲ.
ಹಣ ಸ್ವೀಕರಿಸಿರುವ ವ್ಯಕ್ತಿಯ ಸಹಕಾರ ಹಾಗೂ ಸಂಬಂಧಪಟ್ಟ ಬ್ಯಾಂಕ್ಗಳ ರಿವರ್ಸಲ್ ಪ್ರಕ್ರಿಯೆಯ ಮೇಲೂ ಹಣ ಮರಳುವುದು ಅವಲಂಬಿತವಾಗಿರುತ್ತದೆ.

ಆದ್ದರಿಂದ UPI ಮೂಲಕ ಹಣ ಕಳುಹಿಸುವ ಮುನ್ನ ಸ್ವೀಕರಿಸುವವರ ಹೆಸರು, UPI ID ಅಥವಾ ಮೊಬೈಲ್ ಸಂಖ್ಯೆಯನ್ನು ಮತ್ತೊಮ್ಮೆ ಪರಿಶೀಲಿಸಿ ಬಳಿಕ ಪಾವತಿ ಮಾಡುವುದು ಸುರಕ್ಷಿತ.
MUST WATCH : ಸರ್ಕಾರದ ವಿರುದ್ಧ ವಾಟರ್ಮ್ಯಾನ್ಸ್ ಕಿಡಿ – ನೆಲಮಂಗಲ ತಲುಪಿದ ಪಾದಯಾತ್ರೆ




