
Bagalkot : ಪರಪ್ಪನ ಅಗ್ರಹಾರ ಜೈಲಿನ ವಾರ್ಡರ್ನಿಂದ ಹಲ್ಲೆ – ಡಾಬಾ ಮಾಲೀಕ ಸಾವು
ಪರಪ್ಪನ ಅಗ್ರಹಾರ ಜೈಲಿನ ಹೆಡ್ ವಾರ್ಡರ್ ನಡೆಸಿದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಡಾಬಾ ಮಾಲೀಕರೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮೃತರನ್ನು ಮೆಹಬೂಬಸಾಬ್ ಪಟ್ಟೆವಾಲೆ (58) ಎಂದು ಗುರುತಿಸಲಾಗಿದೆ.
ಆಗಿದ್ದೇನು?
ಸೆಪ್ಟೆಂಬರ್ 17ರ ರಾತ್ರಿ ರಜೆ ಮೇಲೆ ಊರಿಗೆ ಬಂದಿದ್ದ ಜೈಲು ಹೆಡ್ ವಾರ್ಡರ್ ಅಡಿವೆಪ್ಪ, ಗದ್ದನಕೇರಿ ಕ್ರಾಸ್ ಬಳಿಯ ಮೆಹಬೂಬಸಾಬ್ ಅವರ ಡಾಬಾಗೆ ತೆರಳಿದ್ದರು. ಊಟ ಕೇಳಿದ ವೇಳೆ ಊಟ ಖಾಲಿಯಾಗಿದೆ ಎಂದು ಮೆಹಬೂಬಸಾಬ್ ತಿಳಿಸಿದ್ದರು. ಇದರಿಂದ ಮಾತಿಗೆ ಮಾತು ಬೆಳೆದು ಜಗಳ ನಡೆದಿದ್ದು, ಅಡಿವೆಪ್ಪ ಅವರು ಡಾಬಾ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
READ THIS : ಪರಪ್ಪನ ಅಗ್ರಹಾರ ಜೈಲಿನ ಕೈದಿಗಳಿಗೂ ಬಂತು ಬಯೋಮೆಟ್ರಿಕ್

Bagalkot – ಚಿಕಿತ್ಸೆ ಫಲಿಸದೇ ಡಾಬಾ ಮಾಲೀಕ ಸಾವು
ಹಲ್ಲೆಯ ವೇಳೆ ಮೆಹಬೂಬಸಾಬ್ ನೆಲಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಇನ್ನು ಇದೇ ಗಲಾಟೆಯಲ್ಲಿ ಹೆಡ್ ವಾರ್ಡರ್ ಅಡಿವೆಪ್ಪ ಅವರ ತಲೆಗೂ ಗಾಯಗಳಾಗಿದ್ದವು ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಲಾದಗಿ ಠಾಣೆ ಪೊಲೀಸರು ಅಡಿವೆಪ್ಪ ಅವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
MUST WATCH : ಇದು ಬಿಕಾರಿ ಸರ್ಕಾರ, ಪಾಪರ್ ಆಗಿದೆ – ಸರ್ಕಾರದ ವಿರುದ್ದ ಅಶೋಕ್ ವಾಗ್ದಾಳಿ




