ಜೇಬಿನಲ್ಲಿದ್ದ Power Bank ಏಕಾಏಕಿ ಸ್ಫೋಟ!.. ಯುವಕನ ಸ್ಥಿತಿ ಅಧೋಗತಿ ಬೆಚ್ಚಿಬಿದ್ದ ಜನ!

ಜೇಬಿನಲ್ಲಿಟ್ಟುಕೊಂಡಿದ್ದ ಪವರ್ ಬ್ಯಾಂಕ್ವೊಂದು ಏಕಾಏಕಿ ಸ್ಫೋಟಗೊಂಡು ವ್ಯಕ್ತಿಯೊಬ್ಬ ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ.
READ THIS : ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಸಿಲಿಂಡರ್ ಸ್ಪೋಟ – ಉಪಕರಣಗಳು ಸುಟ್ಟು ಭಸ್ಮ!
ಯುವಕನ ಸ್ಥಿತಿ ಅಧೋಗತಿ
ಜಮಖಂಡಿ ನಗರದ ಕುಬೇರ ಸಂದಿಯ ನಿವಾಸಿ ಸಿದ್ದು ಸಾಳುಂಕೆ ಗಾಯಗೊಂಡ ವ್ಯಕ್ತಿ. ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಸಿದ್ದು ಸಾಳುಂಕೆ ಅವರಿಗೆ ಸುಟ್ಟ ಗಾಯಗಳಾಗಿವೆ. ಘಟನೆ ಬಳಿಕ ಗಾಯಾಳು ಸಿದ್ದು ಸಾಳುಂಕೆ ಅವರನ್ನು ಜಮಖಂಡಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Power Bank ಸ್ಪೋಟ – ಯುವಕ ಪ್ರಾಣಾಪಾಯದಿಂದ ಪಾರು
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಜೇಬಿನಲ್ಲೇ ಪವರ್ ಬ್ಯಾಂಕ್ ಸ್ಫೋಟಗೊಂಡಿರುವ ಘಟನೆ ಪವರ್ ಬ್ಯಾಂಕ್ ಬಳಕೆದಾರರಲ್ಲಿ ಆತಂಕ ಮೂಡಿಸಿದೆ.
MUST WATCH : ತುಮಕೂರಲ್ಲಿ DC ಕಚೇರಿ ಮುತ್ತಿಗೆಗೆ ಯತ್ನ ಬಿಜೆಪಿಗರು, ಪೊಲೀಸರ ನಡುವೆ ತಳ್ಳಾಟ ನೂಕಾಟ.!





