Davanagere ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ – ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ.

ಅಲ್ಲಿ ಕೆಲವೇ ನಿಮಿಷಗಳಲ್ಲಿ ರೋಗಿಯೊಬ್ಬರ ಆಪರೇಷನ್ ನಡೆಯಬೇಕಿತ್ತು, ಆದರೆ ಆಪರೇಷನ್ ಥಿಯೇಟರ್ ಕ್ಷಣಾರ್ಧದಲ್ಲೇ ರಣರಂಗವಾಗಿ ಮಾರ್ಪಟ್ಟಿತ್ತು. ಆಕ್ಸಿಜನ್ ಹಾಗೂ ನೈಟ್ರೋಸಿಲ್ ಸಿಲಿಂಡರ್ಗಳ ಭೀಕರ ಸ್ಫೋಟಕ್ಕೆ ಇಡೀ ಆಸ್ಪತ್ರೆಯೇ ನಡುಗಿ ಹೋಗಿತ್ತು. ರೋಗಿಗಳು ಜೀವಭಯದಿಂದ ದಿಕ್ಕಾಪಾಲಾಗಿ ಓಡಿದ್ರು. ಕ್ಷಣಾರ್ಧದಲ್ಲಿ ಇಡೀ ಆಸ್ಪತ್ರೆಯಲ್ಲಿ ದಟ್ಟ ಹೊಗೆ ಆವರಿಸಿತ್ತು. ಸಾವು ಕಣ್ಣ ಮುಂದೆ ಕಾಣ್ತಾ ಇದ್ದರೂ, ವೈದ್ಯಕೀಯ ಸಿಬ್ಬಂದಿಯ ಸಮಯಪ್ರಜ್ಞೆ ನೂರಾರು ಜೀವಗಳನ್ನು ಕಾಪಾಡಿದೆ. ಇತ್ತ ಅಗ್ನಿಶಾಮಕ ದಳದ ಯುದ್ಧೋಪಾದಿ ಕಾರ್ಯಾಚರಣೆ ದೊಡ್ಡ ದುರಂತ ತಪ್ಪಿಸಿದೆ. ಅಷ್ಟಕ್ಕೂ ಈ ಭಯಾನಕ ದುರಂತ ಸಂಭವಿಸಿರೋದು ದಾವಣಗೆರೆಯಲ್ಲಿ.
ದಾವಣಗೆರೆಯಲ್ಲಿ ರಾಜ್ಯವೇ ಬೆಚ್ಚಿ ಬೀಳಿಸುವಂತಹ ಬ್ಲಾಸ್ಟ್
ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಇಡಿ ರಾಜ್ಯವೇ ಬೆಚ್ಚಿ ಬೀಳಿಸುವಂತಹ ಬ್ಲಾಸ್ಟ್ ಹಾಗೂ ಬೆಂಕಿ ಅವಘಡ ಸಂಭವಿಸಿದೆ. ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಗೆ ಹಾಗೂ ಸ್ಪೋಟದ ತೀವ್ರತೆಗೆ ಇಡೀ ದಾವಣಗೆರೆ ನಗರ ಆತಂಕದಲ್ಲಿ ಇತ್ತು. ಇಂದು ಬೆಳಗ್ಗೆ 8:40ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಇ.ಎನ್.ಟಿ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿದ್ದ ಅರಿವಳಿಕೆ ಯಂತ್ರದಲ್ಲಿ ತಾಂತ್ರಿಕ ದೋಷ ಅಥವಾ ಶಾರ್ಟ್ ಸರ್ಕ್ಯೂಟ್ನಿಂದಾಗಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಆವರಿಸಿದ ಕೆಲವೇ ಕ್ಷಣಗಳಲ್ಲಿ, ಕೊಠಡಿಯಲ್ಲಿದ್ದ ಒಂದು ಆಕ್ಸಿಜನ್ ಹಾಗೂ ಇನ್ನೊಂದು ನೈಟ್ರೋಸಿಲ್ ಸಿಲಿಂಡರ್ ಭೀಕರವಾಗಿ ಸ್ಫೋಟಗೊಂಡಿವೆ.

ಉಸಿರುಗಟ್ಟುವ ವಾತಾವರಣ ನಿರ್ಮಾಣ
ಸ್ಫೋಟದ ತೀವ್ರತೆಗೆ ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ ಸುತ್ತಮುತ್ತಲಿನ ಇತರ ಕೊಠಡಿಗಳಿಗೂ ಬೆಂಕಿ ಆವರಿಸಿತ್ತು. ದಟ್ಟವಾದ ಕಪ್ಪು ಹೊಗೆಯಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿ ಧೃತಿಗೆಡದೆ, ಕೊಠಡಿಯಿಂದ ಹೊರಗೆ ಓಡಿ ಬಂದಿದ್ದಾರೆ. ಸಿಲಿಂಡರ್ ಸ್ಫೋಟಗೊಳ್ಳುವ ಮೊದಲೇ ಸಿಬ್ಬಂದಿ ಸುರಕ್ಷಿತವಾಗಿ ಹೊರಬಂದಿದ್ದರಿಂದ ಮತ್ತು ಹತ್ತಿರದ ವಾರ್ಡ್ಗಳಲ್ಲಿದ್ದ ರೋಗಿಗಳನ್ನು ಸ್ಥಳಾಂತರಿಸಲು ಮುಂದಾಗಿದ್ರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ರೋಗಿಗಳು, ವೈದ್ಯರು ದಿಕ್ಕಪಾಲಾಗಿ ಓಡಲು ಆರಂಭಿಸಿದ್ರು.
ಭಾರೀ ಅಗ್ನಿ ಅವಘಡದಿಂದಾಗಿ ರೋಗಿಗಳು ಹಾಗೂ ವೈದ್ಯರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ರೆ, ಕೊಟ್ಯಾಂತರ ರೂಪಾಯಿ ಮೌಲ್ಯದ ಆಸ್ಪತ್ರೆ ಪರಿಕರಗಳು ಸುಟ್ಟು ಕರಕಲಾಗಿವೆ.
ಇದನ್ನು ಓದಿ : ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ..!!

ಅಗ್ನಿದಳದ ಸಿಬ್ಬಂದಿ ಕಾರ್ಯಾಚರಣೆ
ಇನ್ನು ಸ್ಥಳಕ್ಕೆ ಬಂದ ಅಗ್ನಿದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದರು. ಬೆಂಕಿ ಅವಘಡದಿಂದ ರೋಗಿಗಳು ಆಸ್ಪತ್ರೆಯ ಆವರಣದಲ್ಲಿ ಬೆಡ್ ಮೇಲೆ ಮಲಗಿರುವ ದೃಶ್ಯಗಳು ಸಾಮಾನ್ಯಾವಾಗಿದ್ದು, ರೋಗಿಗಳಲ್ಲಿ ಆತಂಕ ಹೆಚ್ಚಾಗಿತ್ತು.
ಬೇಜವಾಬ್ದಾರಿ ತೋರಿದ ಜಿಲ್ಲಾ ಸರ್ಜನ್ ಸಸ್ಪೆಂಡ್!
ಇನ್ನೂ ಆಸ್ಪತ್ರೆಯಲ್ಲಿನ ಅವವ್ಯಸ್ಥೆ ಕುರಿತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ದಿನದಿಂದ ಆಕ್ರೋಶ ಇತ್ತು. ಆಡಳಿತ ವ್ಯವಸ್ಥೆ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ರು. ಎಸ್ ಡಿಪಿಐ ಅಪ್ಸರ್ ಕೊಡ್ಲಿಪೇಟೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ದಿನೇಶ್ ಗುಂಡೂರಾವ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಶಾಸಕ ಸಮರ್ಥ್ ಶಾಮನೂರು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬೇಜವಾಬ್ದಾರಿ ತೋರಿದ ಜಿಲ್ಲಾ ಸರ್ಜನ್ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ್ರು.

Davanagere ಆಸ್ಪತ್ರೆ ಸ್ಪೋಟ ಕುರಿತು ತನಿಖೆ
ಒಟ್ಟಾರೆ ಇವತ್ತಿನ ದಾವಣಗೆರೆ ಬೆಳವಣಿಗೆ ರಾಜ್ಯ ಆರೋಗ್ಯ ಇಲಾಖೆಗೆ ಹಿಡಿದ ಕೈಗನ್ನಡಿ ಆಗಿದೆ, ಇನ್ನಾದರೂ ಸಂಬಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸರ್ಕಾರ ಎಚ್ಚೆತ್ತು, ಅವಸಾನದ ಅಂಚಿನಲ್ಲಿರುವ ಆಸ್ಪತ್ರೆಗೆ ಸರ್ಜರಿ ಮಾಡಲಿ, ಹಾಗೂ ದಾವಣಗೆರೆ ಆಸ್ಪತ್ರೆ ಸ್ಪೋಟ ಕುರಿತು ತನಿಖೆ ಆಗಿ ಸತ್ಯಾಸತ್ಯತೆ ಹೊರಗೆ ಬರಲಿ ಅನ್ನೋದೇ ಆಶಯವಾಗಿದೆ.
ಇದನ್ನು ನೋಡಿ : ಆರನೇ ತರಗತಿ ಪ್ರವೇಶ ಕೌನ್ಸಿಲಿಂಗ್ನಲ್ಲಿ ಅಕ್ರಮ ಆರೋಪ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರ ಆಕ್ರೋಶ




