Gubbi : ನವಜಾತ ಶಿಶುವಿನ ಅರ್ಧಂಬರ್ಧ ಮೃತದೇಹ ಪತ್ತೆ – ಮೃತದೇಹ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು.!

Gubbi ತಾಲೂಕಿನ ದೊಡ್ಡಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎನ್. ಹೊಸಹಳ್ಳಿ ಗ್ರಾಮದಲ್ಲಿ ನವಜಾತ ಶಿಶುವಿನ ಅರೆಬರೆ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ನಾಯಿಯೊಂದು ಹೊತ್ತು ತಂದ ನವಜಾತ ಶಿಶುವಿನ ಶ*
ಇಂದು ಮಧ್ಯಾಹ್ನ ನಾಯಿಯೊಂದು ನವಜಾತ ಶಿಶುವಿನ ಮೃತದೇಹವನ್ನು ಗ್ರಾಮದೊಳಗೆ ಹೊತ್ತು ತಂದಿದ್ದು, ಇದನ್ನು ನೋಡಿದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಇನ್ನು ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಶಿರಾ ಉಪವಿಭಾಗದ ಡಿವೈಎಸ್ಪಿ ಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೇಳೂರು ಪೊಲೀಸ್ ಠಾಣೆ ಅಧಿಕಾರಿಗಳು ಕೂಡ ಸ್ಥಳಕ್ಕೆ ತೆರಳಿ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
READ THIS : ಮಣ್ಣಿನಡಿ ಮುಚ್ಚಿಟ್ಟಿದ್ದ ನವಜಾತ ಶಿಶು ಶವ ಪತ್ತೆ.!

ಮಗುವಿನ ಸಾವಿಗೆ ಕಾರಣವೇನು
ಘಟನೆಯ ಗಂಭೀರತೆಯನ್ನು ಪರಿಗಣಿಸಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನವಜಾತ ಶಿಶುವಿನ ಮೃತದೇಹ ಇಲ್ಲಿಗೆ ಹೇಗೆ ಬಂತು, ಮಗುವಿನ ಸಾವಿಗೆ ಕಾರಣವೇನು ಹಾಗೂ ಮೃತದೇಹವನ್ನು ಯಾರು ಬಿಟ್ಟು ಹೋಗಿದ್ದಾರೆ ಎಂಬ ಹಲವು ಅನುಮಾನಗಳು ಇದೀಗ ಮೂಡಿವೆ.
ಮೃತ ಶಿಶುವಿನ ಗುರುತು ಹಾಗೂ ಘಟನೆಯ ಸಂಪೂರ್ಣ ಮಾಹಿತಿ ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

MUST WATCH : ಮೀನು ಹಿಡಿಯಲು ಹೋಗಿ ದುರಂತ – ಮೂವರು ಯುವಕರು ನಾಪತ್ತೆ.!




