
TUMAKURU : ಜಂಬೂಸವಾರಿ ವೇಳೆ ಪಟಾಕಿ ಸಿಡಿಸಿದವರ ವಿರುದ್ಧ ಕೇಸ್!
ತುಮಕೂರು ದಸರಾ ಜಂಬೂಸವಾರಿ ವೇಳೆ ಪಟಾಕಿ ಸಿಡಿಸಿದವರ ವಿರುದ್ಧ ತುಮಕೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
READ THIS : ದಸರಾ ಆನೆಗಳ ಜೊತೆ ಈ ಶಾಸಕರ ಮಕ್ಕಳ ಸ್ಪೆಷಲ್ ಫೋಟೋಶೂಟ್!
ಪಟಾಕಿ ಸದ್ದಿಗೆ ಬೆದರಿದ ಅಂಬಾರಿ ಹೊತ್ತ ಲಕ್ಷ್ಮಣ ಆನೆ
ಹೌದು.. ಭದ್ರಮ್ಮ ಛತ್ರದ ಬಳಿ ಜಂಬೂಸವಾರಿ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಪಟಾಕಿ ಸಿಡಿಸಲಾಗಿತ್ತು. ಇನ್ನು ಪಟಾಕಿಯ ಭಾರೀ ಸದ್ದಿಗೆ ಅಂಬಾರಿ ಹೊತ್ತಿದ್ದ ಲಕ್ಷ್ಮಣ ಆನೆ ಬೆದರಿದ್ದು, ಮೆರವಣಿಗೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

TUMAKURU – ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಸಿಬ್ಬಂದಿ ಎಸ್.ಆರ್. ರಘು ನೀಡಿದ ದೂರಿನ ಮೇರೆಗೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಪಟಾಕಿ ಸಿಡಿಸಿದವರು ಯಾರು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.
MUST WATCH : ಚಿರತೆ ತಪ್ಪಿಸಿಕೊಂಡಿದ್ದಕ್ಕೆ ಗಲಾಟೆ – 15 ಜನರ ವಿರುದ್ಧ FIR ದಾಖಲು.!





