
Actor Dhanveer : ಈ ಮಿನಿಸ್ಟರ್ ಮಗನ ವಿರುದ್ಧ ನಾಲಿಗೆ ಹರಿಬಿಟ್ಟ ಧನ್ವೀರ್; ದಿನಕರ್ ತೂಗುದೀಪ್ ವಿರುದ್ಧವೂ ಅವಾಚ್ಯ ಶಬ್ದ ಬಳಕೆ! ಆಡಿಯೋದಲ್ಲಿ ಏನಿದೆ?
ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಆಡಿಯೋ ವಿವಾದ ಸದ್ದು ಮಾಡ್ತಿದೆ. ಹೌದು.. ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ನಡುವಿನ ಕಿತ್ತಾಟ ಹೊರಬರ್ತಿದ್ದಂತೆ, ಇದೀಗ ಧನ್ವೀರ್ ಮಾತನಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಆಡಿಯೋದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಹಾಗೂ ದರ್ಶನ್ ಸಹೋದರ ದಿನಕರ್ ತೂಗುದೀಪ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆಡಿಯೋದಲ್ಲಿ ಏನಿದೆ?
ಇನ್ನು Dhanveer ವೈರಲ್ ಆಡಿಯೋದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ, ನಟ ಝೈದ್ ಖಾನ್ ಬಗ್ಗೆ ಆಕ್ಷೇಪಾರ್ಹ ಪದಗಳನ್ನು ಬಳಸಲಾಗಿದ್ದು, ದರ್ಶನ್ ಸಹೋದರ ದಿನಕರ್ ತೂಗುದೀಪ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
READ THIS : ಚಾಲೆಂಜಿಂಗ್ ಸ್ಟಾರ್ಗೆ ಸ್ನೇಹಿತರು, ಶಿಷ್ಯರೇ ಆದ್ರಾ ವಿಲನ್?

ದಿನಕರ್ ತೂಗುದೀಪ್ ವಿರುದ್ಧವೂ ಅವಾಚ್ಯ ಶಬ್ದ ಬಳಕೆ!
ದಿನಕರ್ ತೂಗುದೀಪ ಬಗ್ಗೆಯೂ ಅವಾಚ್ಯ ಶಬ್ದಗಳಿಂದ ಮಾತಾಡಿರೋ ಧನ್ವೀರ್, ಮಿನಿಸ್ಟರ್ ಮಗ ನನ್ **** ಸಮ ಎಂದೆಲ್ಲಾ ಧನ್ವೀರ್ ನಾಲಿಗೆ ಹರಿಬಿಟ್ಟಿದ್ದಾರೆ. ರಾಜಕಾರಣಿಗಳ ಮಕ್ಕಳು, ಅವ್ನ ಮಕ್ಕಳು ಅಂತ **** ತಲೆ ಕೆಡಿಸಿಕೊಳ್ಳಲ್ಲ. ಕೂತಿದ್ದ ಕಡೆಯಿಂದಲೇ ನಮ್ ಅಪ್ಪ ಎಲ್ಲರನ್ನ ಆಟ ಆಡಿಸ್ತಾನೆ. ಆದ್ರೆ ನಾವ್ಯಾರು ಅದನ್ನ ತೋರಿಸಿಕೊಂಡಿಲ್ಲ. ಅಂತಹದ್ರಲ್ಲಿ ಮಿನಿಸ್ಟರ್ ಮಕ್ಕಳು ಅದು-ಇದು ಅಂತ ಮಾತಾಡಿದ್ರೆ ಯಾರಿಗೂ ತಲೆ ಕೆಡಿಸಿಕೊಳ್ಳಲ್ಲ ನಾನು ಎಂದಿದ್ದಾನೆ.
Dhanveer ಆಡಿಯೋ ಫುಲ್ ವೈರಲ್
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಧನ್ವೀರ್ ನಡುವಿನ ವಿವಾದ ಪೊಲೀಸ್ ಠಾಣೆಯ ಮೆಟ್ಟಿಲೇರ್ತಿದ್ದಂತೆ ಧನ್ವೀರ್ ಆಡಿಯೋ ವೈರಲ್ ಆಗ್ತಿದೆ.

MUST WATCH : ಕೊನೆಗೂ ಮೌನ ಮುರಿದ SIDDU – ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ.!




