
ಮಧ್ಯರಾತ್ರಿ ಪಟಾಕಿ ಸದ್ದಿಗೆ ನಟಿ RAMYA ಸಿಡಿಮಿಡಿ – ಟ್ವೀಟ್ ಮೂಲಕ ಕಿಡಿ
ಬೆಂಗಳೂರಿನಲ್ಲಿ ಮಧ್ಯರಾತ್ರಿ ಪಟಾಕಿ ಸಿಡಿಸಿ, ಜೋರಾಗಿ ಹಾಡು ಹಾಕಿ ಸಂಭ್ರಮಾಚರಣೆ ನಡೆಸಿರುವುದಕ್ಕೆ ಸ್ಯಾಂಡಲ್ವುಡ್ ನಟಿ ರಮ್ಯಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮೂಲಕ ಕಿಡಿ
ರಾತ್ರಿ ಸುಮಾರು 3 ಗಂಟೆಯಾದರೂ ಫನ್ ವರ್ಲ್ಡ್ನಲ್ಲಿ ಪಟಾಕಿ ಸಿಡಿಸಲಾಗಿದ್ದು, ಟ್ವೀಟ್ ಮಾಡುವ ಮೂಲಕ ರಮ್ಯಾ ಆಕ್ರೋಶ ಹೊರಹಾಕಿದ್ದಾರೆ. ಸುತ್ತಮುತ್ತ ಆಸ್ಪತ್ರೆಗಳು, ಹಿರಿಯ ನಾಗರಿಕರು ಹಾಗೂ ಮಕ್ಕಳು ವಾಸಿಸುತ್ತಿರುವಾಗ ಇಂತಹ ಸಂಭ್ರಮಾಚರಣೆ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇನ್ನು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಪಟಾಕಿ ಸಿಡಿಸುವುದಕ್ಕೆ ನಿರ್ಬಂಧವಿದೆ ಎಂದು ನಟಿ ರಮ್ಯಾ ತಮ್ಮ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
READ THIS : ಅಶ್ಲೀಲ ಕಾಮೆಂಟ್ ಕೇಸ್ – ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಲ್ಲ ಎಂದ ರಮ್ಯಾ!
ಜೋರಾಗಿ ಸಾಂಗ್ಸ್ ಹಾಕೋದು ಎಷ್ಟು ಸರಿ?
ವಿಶೇಷ ಸಂದರ್ಭಗಳಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬುದು ನನಗೆ ಅರ್ಥವಾಗುತ್ತೆ. ಆದ್ರೆ ಎಲ್ಲಾ ಸಮಯದಲ್ಲೂ ಅಡ್ಜಸ್ಟ್ ಮಾಡಿಕೊಳ್ಳುವುದು ಖಂಡಿತವಾಗಿಯೂ ಅಲ್ಲ. ಇಲ್ಲಿ ಹತ್ತಿರದಲ್ಲೇ ಆಸ್ಪತ್ರೆಗಳಿದ್ದು, ಸುತ್ತಮುತ್ತ ಹಿರಿಯ ನಾಗರಿಕರು ಹಾಗೂ ಮಕ್ಕಳು ವಾಸಿಸುತ್ತಿದ್ದಾರೆ. ಹೀಗೆ ಮಧ್ಯರಾತ್ರಿ ಪಟಾಕಿ ಸಿಡಿಸೋದು, ಜೋರಾಗಿ ಸಾಂಗ್ಸ್ ಹಾಕೋದು ಎಷ್ಟು ಸರಿ? ಎಂದು RAMYA ಕಿಡಿಕಾರಿದ್ದಾರೆ.
ಇನ್ನು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ರಮ್ಯಾ ಮನವಿ ಮಾಡಿದ್ದಾರೆ.

MUST WATCH : ದಸರಾ ತುಂಬಾ ಚನ್ನಾಗಿ ಆಗಿದೆ… ಅಧಿಕಾರಿಗಳು ಸ್ವಲ್ಪ ಯಾಮಾರಿದ್ದಾರೆ




