
ಫಾರ್ಮ್ಹೌಸ್ ಕೆಲಸಗಾರರಿಗೆ ಬಲವಂತವಾಗಿ ಮದ್ಯ ಕುಡಿಸಿ ಹಿಂಸೆ – ನಟ DHANVEER ದು ಎನ್ನಲಾದ ವಿಡಿಯೊಗಳು ವೈರಲ್!
ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಧನ್ವೀರ್ ನಡುವಿನ ವಿವಾದ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಈ ನಡುವೆ ಧನ್ವೀರ್ ಅವರದ್ದು ಎನ್ನಲಾದ ಕೆಲವು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ನಡುವೆ ಮೈಸೂರಿನ ಫಾರ್ಮ್ಹೌಸ್ವೊಂದರಲ್ಲಿ ಕೆಲಸಗಾರರೊಂದಿಗೆ ನಟ ಧನ್ವೀರ್ ಅನುಚಿತವಾಗಿ ವರ್ತಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಫಾರ್ಮ್ಹೌಸ್ ಕೆಲಸಗಾರರಿಗೆ ಮದ್ಯ ಕುಡಿಸಿ ಹಿಂಸೆ
ಹೌದು.. ಧನ್ವೀರ್ ಅವರದ್ದು ಎನ್ನಲಾದ ಕೆಲವು ವಿಡಿಯೋಗಳು ಇದೀಗ ಸೋಶಿಯಲ್ ಮಿಡಿಯಾಗಳಲ್ಲಿ ಹರಿದಾಡುತ್ತಿದ್ದು, ಈ ವಿಡಿಯೊಗಳು ಫಾರ್ಮ್ಹೌಸ್ವೊಂದರಲ್ಲಿ ಚಿತ್ರೀಕರಿಸಲ್ಪಟ್ಟಿವೆ ಎನ್ನಲಾಗಿದ್ದು, ವಿಡಿಯೋಗಳಲ್ಲಿ ಕೆಲಸಗಾರರೊಂದಿಗೆ ಧನ್ವೀರ್ ಅನುಚಿತವಾಗಿ ವರ್ತಿಸುವ ದೃಶ್ಯಗಳಿವೆ ಎಂದು ವರದಿಯಾಗಿದೆ.
READ THIS : ನಟ ಧನ್ವೀರ್ಗೆ ಡೈಲಾಗ್ನಿಂದಲೇ ಕೌಂಟರ್ ಕೊಟ್ಟ ಡಿ ಕಂಪನಿ

ಯುವಕನೊಬ್ಬನ ಬಟ್ಟೆ ಬಿಚ್ಚಿಸಿ DHANVEER ಹುಚ್ಚಾಟ
ಕೆಲ ಹುಡುಗರಿಗೆ ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ಮದ್ಯ ಸೇವಿಸುವುದಿಲ್ಲ ಎಂದು ಹೇಳಿದ ಯುವಕರಿಗೆ ಧನ್ವೀರ್ ಬೈಯುವ ವಿಡಿಯೋ ಕೂಡ ವೈರಲ್ ಆಗಿದೆ. ಅಲ್ದೇ ಯುವಕನೊಬ್ಬನ ಬಟ್ಟೆ ಬಿಚ್ಚಿಸಿ ಧನ್ವೀರ್ ಹುಚ್ಚಾಟ ಮೆರೆದಿದ್ದು, ಇದು ಯಾವಾಗಿನ ವಿಡಿಯೋ, ವಿಡಿಯೋ ವೈರಲ್ ಮಾಡಿದವ್ರು ಯಾರು ಎಂಬುದು ತಿಳಿಯಬೇಕಿದೆ.
ಧನ್ವೀರ್ ಪ್ರತಿಕ್ರಿಯೆ ಏನು?
ಇನ್ನು ವೈರಲ್ ವಿಡಿಯೊ ಬಗ್ಗೆ ನಟ ಧನ್ವೀರ್ ಪ್ರತಿಕ್ರಿಯೆ ನೀಡಿಲ್ಲ. ಈ ಆರೋಪಗಳ ಬಗ್ಗೆ ಧನ್ವೀರ್ ಏನು ಸ್ಪಷ್ಟನೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

MUST WATCH : 4 ಫಲಿತಾಂಶಗಳು ನಿರಾಸೆ ಮೂಡಿಸಿವೆ… ಚುನಾವಣೆಯಲ್ಲಿ ಸೋತಿರುವುದು ವಿಪರ್ಯಾಸ KN RAJANNA



