
ಕೊಲೆ ಕೇಸ್ನಲ್ಲಿ ಜೈಲು ಸೇರಿದ್ರು ನಟ DARSHAN ಗಿಲ್ಲ ನೆಮ್ಮದಿ!
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿರೋ ಬೆನ್ನಲ್ಲೇ, ಅವರ ಆಪ್ತರ ನಡುವಿನ ಮತ್ತೊಂದು ವಿವಾದ ಈಗ ಚರ್ಚೆಗೆ ಬಂದಿದೆ.
ವಿಜಯಲಕ್ಷ್ಮೀ, ಧನ್ವೀರ್ ನಡುವೆ ಸಂಘರ್ಷ
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಹಾಗೂ ನಟ ಧನ್ವೀರ್ ನಡುವೆ ಗಲಾಟೆ ನಡೆದಿದ್ದು, ಈ ವಿಚಾರ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಅವರು ನಟ ಧನ್ವೀರ್ ವಿರುದ್ಧ ಬೆಂಗಳೂರಿನ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
READ THIS : ನಟ Darshan ವಿಚಾರವಾಗಿ ಧನ್ವೀರ್ ತಿರುಗೇಟು..!

ಮ್ಯಾನೇಜರ್ ನಾಗರಾಜ್ಗೆ ನಿಂದನೆ ಆರೋಪ
ಧನ್ವೀರ್ ತಮ್ಮನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಅಂತ, ನಾಗರಾಜ್ , ಆಡಿಯೋ ದಾಖಲೆ ಸಮೇತ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಎನ್ಸಿಆರ್ ದಾಖಲಿಸಿದ್ದಾರೆ. ರೇಣುಕಸ್ವಾಮಿ ಪ್ರಕರಣದ ಸಂದರ್ಭದಲ್ಲಿ ದರ್ಶನ್ ಪರವಾಗಿ ನಿಂತು, ಅವರ ನೆರಳಿನಂತೆ ಓಡಾಡಿಕೊಂಡಿದ್ದವರು ಧನ್ವೀರ್.

ಧನ್ವೀರ್ DARSHAN ಕುಟುಂಬದ ಜೊತೆಗೆ ಅಂತರ?
ದರ್ಶನ್ ಅವರ ಕುಟುಂಬಕ್ಕೂ ಧನ್ವೀರ್ ಅತ್ಯಂತ ಆಪ್ತರಾಗಿದ್ದರು. ಇದೀಗ ಧನ್ವೀರ್ ದರ್ಶನ್ ಕುಟುಂಬದ ಜೊತೆಗೆ ಅಂತರ ಕಾಯ್ದುಕೊಂಡಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗ್ತಿದೆ.
MUST WATCH : ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ – ಯಾವ ಯಾವ ಜಿಲ್ಲೆಗೆ ಅಲರ್ಟ್.!




