
MLC ELECTION : ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕಮಲ ಕಮಾಲ್
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಸೋಲು ಕಂಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ಗೆ ಭರ್ಜರಿ ಜಯ
ಎಂಟು ಸುತ್ತಿನ ಮತ ಎಣಿಕೆಯ ಅಂತ್ಯಕ್ಕೆ ಕೆ.ಎಂ. ಸುರೇಶ್ ಅವರಿಗೆ 55,277 ಮತಗಳು ಲಭಿಸಿದರೆ, ಶಶಿ ಹುಲಿಕುಂಟೆಮಠ್ ಅವರಿಗೆ 36,945 ಮತಗಳು ಬಂದಿವೆ. ಅಂತಿಮವಾಗಿ 23,ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಕೆ.ಎಂ. ಸುರೇಶ್ ಗೆಲುವು ಸಾಧಿಸಿದ್ದಾರೆ.

READ THIS : ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಬಿಗ್ ರಿಲೀಫ್!
ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಶಶೀಲ್ ಜಿ. ನಮೋಶಿಗೆ ಗೆಲುವು
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಶಶೀಲ್ ಜಿ. ನಮೋಶಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರನ್ನು 3,297 ಮತಗಳ ಅಂತರದಿಂದ ಸೋಲಿಸಿರುವ ನಮೋಶಿ, ಐದನೇ ಬಾರಿ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. ಶಶೀಲ್ ಜಿ. ನಮೋಶಿ ಅವರಿಗೆ 15,596 ಮತಗಳು ಲಭಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರಿಗೆ 12,299 ಮತಗಳು ಬಂದಿವೆ.
ಬಿಜೆಪಿ ಅಭ್ಯರ್ಥಿ ಮತ್ತೊಮ್ಮೆ ಗೆಲುವು
ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲೇ ನಮೋಶಿ ಗೆಲುವಿನ ಕೋಟಾ ತಲುಪಿದ್ದಾರೆ.ಕ್ಷೇತ್ರದಲ್ಲಿ ಒಟ್ಟು 34,784 ಮತದಾರರಿದ್ದು, 30,253 ಮತಗಳು ಚಲಾವಣೆಯಾಗಿವೆ. ಇವುಗಳಲ್ಲಿ 28,380 ಮತಗಳು ಸಿಂಧುವಾಗಿದ್ದು, 1,873 ಮತಗಳು ತಿರಸ್ಕೃತಗೊಂಡಿವೆ. ಈ ಫಲಿತಾಂಶದೊಂದಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮತ್ತೊಮ್ಮೆ ಗೆಲುವು ದಾಖಲಿಸಿದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಯಾರಿಗೆ ಗೆಲುವು?
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಎನ್ಡಿಎ ಅಭ್ಯರ್ಥಿ ಎಪಿ ರಂಗನಾಥ್ ಅವರು 10,810 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪುಟ್ಟಣ್ಣನವರಿಂದ 9902 ಮತಪಡೆದಿದ್ದಾರೆ. 908 ಮತಗಳ ಅಂತರದಲ್ಲಿ ಎಪಿ ರಂಗನಾಥ್ ಚುನಾಯಿತರಾಗಿದ್ದಾರೆ.
MUST WATCH : ನಡು ರಸ್ತೆಯಲ್ಲೇ ವಕೀಲನಿಗೆ ಚಾಕು ಇರಿತ – ದ್ವೇಷಕ್ಕೆ ಚಾಕು ಇರಿದ ದುರುಳರು
ಪಶ್ಚಿಮ ಪದವೀಧರ ಕ್ಷೇತ್ರ
ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಎಸ್ ವಿ ಸಂಕನೂರ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ನ ಮೋಹನ್ ಲಿಂಬಿಕಾಯಿ ಸೋಲುಂಡಿದ್ದಾರೆ.




