
DK ಸರ್ಕಾರದ ವಿರುದ್ಧ ರಾಜಮಾತೆ ಪ್ರಮೋದಾದೇವಿ ಅಸಮಾಧಾನ – ನಾಡಹಬ್ಬ ದಸರಾ ಆಯೋಜನೆ ಬಗ್ಗೆ ಕೆಂಡಾಮಂಡಲ
ಈ ಬಾರಿಯ ನಾಡಹಬ್ಬ ದಸರಾ ಆಯೋಜನೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಭಾರಿ ಸುದ್ದಿಯಾಗುತ್ತಿದೆ. ಈಗ ಈ ವಿಷಯವಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮೌನ ಮುರಿದಿದ್ದಾರೆ.
ನಾಲ್ಕು ಪುಟಗಳ ಸುದೀರ್ಘ ಪತ್ರ
ಸಿಎಂ ಡಿಕೆಶಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತೀವ್ರ ಅಸಮಾಧಾನ ಹೊರಹಾಕಿರುವ ಪ್ರಮೋದದೇವಿ ಒಡೆಯರ್, ಈ ಬಗ್ಗೆ ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ದಸರಾ ಆಯೋಜನೆಯಲ್ಲಿ ಲೋಪಗಳಾಗಿರುವುದನ್ನು ಖಂಡಿಸಿರುವ ರಾಜಮಾತೆ, ವಿವಿಧ ಇಲಾಖೆಗಳ ಅಧಿಕಾರಿಗಳ ನಡೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪೊಲೀಸ್ ಇಲಾಖೆ ವಿರುದ್ಧವೂ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪ್ರಮೋದಾದೇವಿ, ವಜ್ರಮುಷ್ಠಿ ಕಾಳಗದ ವೇಳೆಯಲ್ಲೂ ಪೊಲೀಸರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಿ
ಈ ಬಾರಿ ಜಟ್ಟಿ ಕಾಳಗ ನಿಲ್ಲಲು ಪೊಲೀಸ್ ಇಲಾಖೆ ಮತ್ತು ಜಟ್ಟಿ ಸಮುದಾಯದ ನಡುವಿನ ಸಮನ್ವಯ ಕೊರತೆಯೇ ಕಾರಣ ಎಂದು ಹೇಳಿದ್ದಾರೆ.
1970, 1980, 2020ರಲ್ಲಿಯೂ ಜಟ್ಟಿ ಕಾಳಗ ನಿಂತಿತ್ತು. ದಸರಾ ಆಚರಣೆಯ ಭಾಗವಾಗಿ ವಜ್ರಮುಷ್ಠಿ ಕಾಳಗ ನಡೆಸುತ್ತಿಲ್ಲ, ವಜ್ರಮುಷ್ಠಿ ಕಾಳಗಕ್ಕೆ ಧಾರ್ಮಿಕ ಮಹತ್ವ ಇಲ್ಲ ಎಂದು ರಾಜಮಾತೆ ಸ್ಪಷ್ಟನೆ ನೀಡಿದ್ದಾರೆ. ವಿಜಯಯಾತ್ರೆಯು ನಿಗದಿತ ಮುಹೂರ್ತದಂತೆ ನಡೆದಿದೆ.
ಸಮನ್ವಯ ಕೊರತೆಗೆ ಕಾರಣರಾದ ಪೊಲೀಸ್ ಸಿಬ್ಬಂದಿ ವಿರುದ್ಧ ಮೇಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಿ ಎಂದು ಅವರು ಆಗ್ರಹಿಸಿದ್ದಾರೆ.
READ THIS : ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಬಿಗ್ ರಿಲೀಫ್!

ಚಿನ್ನದ ಅಂಬಾರಿ ವಿಷಯದಲ್ಲಿ ಪೊಲೀಸರ ನಿರ್ಲಕ್ಷ್ಯಕ್ಕೆ ಕಿಡಿ
ಇದೇ ವೇಳೇ ಚಿನ್ನದ ಅಂಬಾರಿ ವಿಷಯದಲ್ಲಿ ಪೊಲೀಸರ ನಿರ್ಲಕ್ಷ್ಯಕ್ಕೆ ಕಿಡಿಕಾರಿರುವ ರಾಜಮಾತೆ ಪ್ರಮೋದಾದೇವಿ ಒಡೆಯರ್, ಪೊಲೀಸ್ ಆಯುಕ್ತರು ನೀಡಿದ ಭರವಸೆ ಮೇರೆಗೆ ಅಂಬಾರಿ ನೀಡಲಾಗಿತ್ತು. ಆಯುಕ್ತರು ನೀಡಿದ್ದ ಭರವಸೆ ಉಳಿಸಿಕೊಂಡಿಲ್ಲ, ಅಂಬಾರಿ ಸುತ್ತಮುತ್ತ ಅನಧಿಕೃತ ವ್ಯಕ್ತಿಗಳು ಓಡಾಡುತ್ತಿದ್ದರು. ಅಂಬಾರಿ ನಮ್ಮ ಖಾಸಗಿ ಆಸ್ತಿಯೇ ಹೊರತು ಸರ್ಕಾರದ ಆಸ್ತಿ ಅಲ್ಲ, ಅಂಬಾರಿ ಬಳಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರಿದ್ದರು. ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಅಂಬಾರಿ ಬಳಿ ಇದ್ದರು, ಅಂಬಾರಿ ಭದ್ರತೆಗೆ ಧಕ್ಕೆ ಉಂಟು ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ
ಪೊಲೀಸ್ ಇಲಾಖೆ ವಿರುದ್ಧವೂ ಅಸಮಾಧಾನ ಹೊರಹಾಕಿರುವ ರಾಜಮಾತೆ ಪ್ರಮೋದಾದೇವಿ, ನಮ್ಮ ಅತಿಥಿಗಳಿಗಾಗಿ ಇರಿಸಿದ್ದ ಖಾಸಗಿ ಸ್ಥಳ ಅತಿಕ್ರಮಣ ಮಾಡಿಕೊಂಡಿದ್ದರು.
ಅನಧಿಕೃತ ತಡೆ ಹಾಕಿ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಮಾಡಿದರು ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ವಿರುದ್ಧ ನೇರ ಆರೋಪ ಮಾಡಿದ ರಾಜಮಾತೆ, ನಮ್ಮ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ.
ಸರ್ಕಾರಿ ದಸರಾಗೆ ಯಾವುದೇ ಮಹತ್ವ ಇಲ್ಲ, ನವರಾತ್ರಿ ಆಚರಣೆಯಲ್ಲಿ ನಮ್ಮ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

MUST WATCH : ಸಿದ್ದುಗೆ ʻVIDEO LADY ʼ ಕ್ಲೀನ್ಚಿಟ್ – ವಿಡಿಯೋ ಲೇಡಿಯ ಸ್ಫೋಟಕ ಹೇಳಿಕೆ

