
TUMAKURU : ಮೈಸೂರು ಮಾದರಿಯ ಜಂಬೂಸವಾರಿ – ಅಂಬಾರಿ ಹೊತ್ತು ಸಾಗಲಿದ್ದಾನೆ ಲಕ್ಷ್ಮಣ
ಕಲ್ಪತರು ನಾಡು ತುಮಕೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ಹೌದು.. ಮೈಸೂರು ದಸರಾ ಮಾದರಿಯಲ್ಲೇ ತುಮಕೂರಿನಲ್ಲೂ ಅದ್ಧೂರಿ ಜಂಬೂಸವಾರಿ ಮೆರವಣಿಗೆಗೆ ಸಿದ್ಧತೆ ನಡೆದಿದೆ. ಮೂರು ಆನೆಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜಂಬೂಸವಾರಿ ಸಾಗಲಿದ್ದು, ಗ್ರಾಮದೇವತೆಗಳು ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಲಿವೆ.
READ THIS : ತುಮಕೂರು ದಸರಾ ಹೆಲಿರೈಡ್ಗೆ ನೀರಸ ಪ್ರತಿಕ್ರಿಯೆ! ಕಾರಣವೇನು?

ಅಂಬಾರಿ ಹೊತ್ತು ಸಾಗಲಿರುವ ಲಕ್ಷ್ಮಣ
ಇನ್ನು ಈ ಬಾರಿ ಹಾರಂಗಿಯ ದುಬಾರೆ ಆನೆ ಶಿಬಿರದಿಂದ ಆಗಮಿಸಿರುವ ಲಕ್ಷ್ಮಣ ಆನೆ ಅಂಬಾರಿ ಹೊತ್ತು ಸಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ತುಮಕೂರಿನ ಟೌನ್ ಹಾಲ್ ಮುಂಭಾಗ ಜಂಬೂಸವಾರಿ ಮೆರವಣಿಗೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಲಿದ್ದಾರೆ.

TUMAKURU ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿರುವ ಜಂಬೂಸವಾರಿ
ತುಮಕೂರಿನ ಕರಿಬಸವೇಶ್ವರ ದೇವಸ್ಥಾನದ ಲಕ್ಷ್ಮಿ ಆನೆ ಹಾಗೂ ತಿಪಟೂರಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಲಕ್ಷ್ಮಿ ಆನೆ ಸೇರಿದಂತೆ ಒಟ್ಟು ಮೂರು ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದು, ಜಂಬೂಸವಾರಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ.
MUST WATCH : ಟೈಗರ್ ಶ್ರಾಫ್ ಮೇಲೆ ಫೈರಿಂಗ್ ಕೇಸ್ ಯುವತಿಯರು ಸೇರಿ ನಾಲ್ವರು ಅರೆಸ್ಟ್




