
BOLLYWOOD : ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಕೇಸ್ – ಮತ್ತೆ ನಾಲ್ವರು ಆರೋಪಿಗಳನ್ನ ಬಂಧಿಸಿದ ಪೊಲೀಸರು
ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕಾಗಿ ನಡೆಸುತ್ತಿದ್ದು, ಘಟನೆ ನಡೆದ ಮೊದಲ 15 ಗಂಟೆಗಳಲ್ಲೇ ಮೂವರು ಆರೋಪಿಗಳನ್ನ ಬಂಧಿಸಿದ್ರು.
READ THIS : ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ!

ಗುಂಡಿನ ದಾಳಿ ಕೇಸ್ಗೆ ಬಿಗ್ ಟ್ವಿಸ್ಟ್!
ಇದೀಗ ತನಿಖೆ ಮುಂದುವರೆದಂತೆ ಪ್ರಕರಣದ ಹಿಂದೆ ಬೃಹತ್ ಜಾಲವೇ ಕೆಲಸ ಮಾಡಿರುವುದು ತಿಳಿದು ಬಂದಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ನಾಲ್ವರನ್ನು ಬಂಧಿಸಲಾಗಿದ್ದು, ಅವರಲ್ಲಿ ಇಬ್ಬರು ಯುವತಿಯರು ಸಹ ಸೇರಿದ್ದಾರೆ. ಜೊತೆಗೆ ಒಬ್ಬ ಅಪ್ರಾಪ್ತನೂ ಸಹ ಪ್ರಕರಣದಲ್ಲಿ ಶಾಮೀಲಾಗಿದ್ದಾನೆ ಎನ್ನಲಾಗಿದೆ.

BOLLYWOOD ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ – ನಾಲ್ವರ ಬಂಧನ
ರಾಧಾ, ಬಬಿತಾ, ಸುಮಿತ್ ಮತ್ತು ಕುನಾಲ್ ಎಂಬುವರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ನಾಲ್ವರನ್ನೂ ಮುಂಬೈ ಪೊಲೀಸರ ವಶಕ್ಕೆ ನೀಡಲಾಗಿದೆ. ರಾಧಾ ಮತ್ತು ಬಬಿತಾ ಅವರನ್ನು ದೆಹಲಿಯಲ್ಲಿ ಬಂಧಿಸಿದ್ರೆ, ಇನ್ನಿಬ್ಬರನ್ನು ಹರಿಯಾಣಾದ ಸೋನ್ಪುರದಲ್ಲಿ ಬಂಧಿಸಲಾಗಿದೆ.

MUST WATCH : CANCERಗೆ ವರದಾನ ಆಗಲಿದೆಯಾ ಹಕ್ಕರಕಿ ಸೊಪ್ಪು – ಕ್ಯಾನ್ಸರ್ ಸಂಶೋಧನೆಯಲ್ಲಿ ಹೊಸ ಭರವಸೆ



