Dhurandhar ದಾಖಲೆ: ಜಗತ್ತಿನಲ್ಲೇ ಅತಿ ಹೆಚ್ಚು ವೀಕ್ಷಿಸಿಲ್ಪಟ್ಟ ಸಿನಿಮಾ

ರಣ್ವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದು, ಇದೀಗ ಒಟಿಟಿ ವೇದಿಕೆಯಲ್ಲೂ ಹೊಸ ಮೈಲಿಗಲ್ಲು ಸಾಧಿಸಿದೆ. ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾದ Dhurandhar ಈ ವರ್ಷ ವಿಶ್ವದಾದ್ಯಂತ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಇಂಗ್ಲಿಷೇತರ (Non-English) ಸಿನಿಮಾವಾಗಿ ಹೊರಹೊಮ್ಮಿದೆ ಎಂದು ನೆಟ್ಫ್ಲಿಕ್ಸ್ ಸಹ-ಸಿಇಒ ಟೆಡ್ ಸರಂಡೋಸ್ ತಿಳಿಸಿದ್ದಾರೆ.

ಜಗತ್ತಿನಲ್ಲೇ ಅತಿ ಹೆಚ್ಚು ವೀಕ್ಷಿಸಿಲ್ಪಟ್ಟ ಸಿನಿಮಾ
ಸಂದರ್ಶನವೊಂದರಲ್ಲಿ ಮಾತನಾಡಿದ ಟೆಡ್ ಸರಂಡೋಸ್, “‘ಧುರಂಧರ್’ ಈ ವರ್ಷ ಜಗತ್ತಿನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ನಾನ್-ಇಂಗ್ಲಿಷ್ ಸಿನಿಮಾ. ಇದು ಹಲವು ಇಂಗ್ಲಿಷ್ ಸಿನಿಮಾಗಳಿಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದ್ದು, ವೀಕ್ಷಕರ ಸಂಖ್ಯೆಯಲ್ಲಿ ಅಮೆರಿಕ ಮತ್ತು ಬ್ರಿಟನ್ ನಂತರದ ಸ್ಥಾನದಲ್ಲಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿ : ಜಿಯೋಹಾಟ್ಸ್ಟಾರ್ನಲ್ಲಿ ‘ Dhurandhar 2 ’ ಹೊಸ ದಾಖಲೆ..!!

ಅಗ್ರಸ್ಥಾನದಲ್ಲಿ ಸಿನಿಮಾ
ವರದಿಗಳ ಪ್ರಕಾರ, 2026ರ ಜನವರಿಯಿಂದ ಜೂನ್ವರೆಗೆ ‘ಧುರಂಧರ್’ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಸುಮಾರು 3.7 ಕೋಟಿ (37 ಮಿಲಿಯನ್) ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೆ, 22 ದೇಶಗಳ ನೆಟ್ಫ್ಲಿಕ್ಸ್ ಟಾಪ್ ಪಟ್ಟಿಯಲ್ಲಿ ಈ ಸಿನಿಮಾ ಅಗ್ರಸ್ಥಾನ ಪಡೆದಿದೆ.

Dhurandhar ಸಿನಿಮಾ ಕಲೆಕ್ಷನ್ ಎಷ್ಟು?
ವಿದೇಶಿ ಮಾರುಕಟ್ಟೆಯಲ್ಲಿ ಭಾರತೀಯ ಸಿನಿಮಾಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ‘ಧುರಂಧರ್’ ಮತ್ತೊಂದು ಉದಾಹರಣೆಯಾಗಿದೆ. ಆದಿತ್ಯ ಧರ್ ನಿರ್ದೇಶನದ ಈ ಫ್ರಾಂಚೈಸಿಯ ಎರಡು ಸಿನಿಮಾಗಳು ವಿಶ್ವಾದ್ಯಂತ ₹3,100 ಕೋಟಿಗೂ ಹೆಚ್ಚು ಗಳಿಕೆ ಮಾಡಿವೆ ಎನ್ನಲಾಗಿದೆ. ಎರಡನೇ ಭಾಗವಾದ ‘ಧುರಂಧರ್: ದಿ ರಿವೆಂಜ್’ ವಿಶ್ವ ಬಾಕ್ಸ್ ಆಫೀಸ್ನಲ್ಲಿ ₹1,800 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ವರದಿಯಾಗಿದೆ.

ಇದನ್ನು ನೋಡಿ : DRISHYA MOVIE STYLEನಲ್ಲಿ ಮರ್ಡ* MYSTERY – 4 ವರ್ಷದ ಬಳಿಕ ಕೊ* ಪಾತಕನಿಗೆ COURT ಶಿಕ್ಷೆ




