Minister ಕ್ಷೇತ್ರದಲ್ಲೇ ಸತ್ತವರ ಅಂತ್ಯಕ್ರಿಯೆಗೂ ಪ್ರಾಣ ಪಣಕ್ಕಿಡಬೇಕಾದ ಸ್ಥಿತಿ.!

ಕಲಬುರ್ಗಿ ಜಿಲ್ಲೆಯ ಸೇಡಂನಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ಪರದಾಡುವಂತಾಗಿದೆ. ಇದೀಗ ಸತ್ತವರ ಅಂತ್ಯಕ್ರಿಯೆ ನಡೆಸಲು ಕೂಡ ಪ್ರಾಣ ಪಣಕ್ಕಿಟ್ಟು ತೆರಳಬೇಕಾದ ದುಸ್ಥಿತಿ ಎದುರಾಗಿದೆ.
Minister ಕ್ಷೇತ್ರದ ಸೇಡಂನಲ್ಲಿ ಶವಸಂಸ್ಕಾರಕ್ಕೂ ಪರದಾಟ.!
ಹೌದು.. ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರ ಸ್ವಕ್ಷೇತ್ರ ಸೇಡಂನಲ್ಲಿ ಶವಸಂಸ್ಕಾರಕ್ಕೆ ತೆರಳುವ ಮಾರ್ಗವೇ ದುಸ್ಥಿತಿಯಲ್ಲಿದೆ ಎನ್ನಲಾಗ್ತಿದೆ. ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಕೊಂಡೊಯ್ಯಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪರದಾಡುವಂತಾಗಿದೆ. ಹದಗೆಟ್ಟ ರಸ್ತೆಯಿಂದಾಗಿ ಶವವನ್ನು ಹೊತ್ತು ಸಾಗಿಸುವುದೇ ಸವಾಲಾಗಿದೆ.
ಇದನ್ನೂ ಓದಿ: ಮಲೆನಾಡಿನ ಜನತೆಗೆ ಮಳೆ ಜೊತೆ ಇದೀಗ ಚಿರತೆ ಆತಂಕ

ಜೀವಂತವಾಗಿದ್ದಾಗ ಮಾತ್ರವಲ್ಲ, ಸತ್ತ ಮೇಲೂ ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರ ಸ್ವಕ್ಷೇತ್ರದಲ್ಲೇ ಅಂತ್ಯಕ್ರಿಯೆಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದಕ್ಕೆ ಜನರು ಅಸಮಾಧಾನ ಹೊರಹಾಕಿದ್ದು, ಕೂಡಲೇ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.
MUST WATCH: DRISHYA MOVIE STYLEನಲ್ಲಿ ಮರ್ಡ* MYSTERY




