Malenadu ಜನರಿಗೆ ಹೆಚ್ಚಾಯ್ತು ಚಿರತೆ ಕಾಟ.!

Malenadu ಜನರಿಗೆ ಇದೀಗ ಮಳೆ ಜೊತೆಗೆ ಚಿರತೆಗಳ ಆತಂಕ ಹೆಚ್ಚಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಬಿಳಿಗಾರು ಸಮೀಪ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಮಧ್ಯರಾತ್ರಿ ಮನೆಯೊಂದರ ಮುಂದೆ ಇದ್ದ ಸಾಕು ನಾಯಿಯನ್ನು ಹೊತ್ತೊಯ್ದಿದೆ.
ಹೆಚ್ಚಾಯ್ತು Malenadu ಜನರಿಗೆ ಚಿರತೆ ಕಾಟ.!
ಮಧ್ಯರಾತ್ರಿ ವೇಳೆ ಮನೆ ಸಮೀಪ ಬಂದ ಚಿರತೆ, ಅಲ್ಲಿದ್ದ ಸಾಕು ನಾಯಿಯ ಮೇಲೆ ದಾಳಿ ನಡೆಸಿ ಅದನ್ನು ಹೊತ್ತೊಯ್ದಿದೆ. ಚಿರತೆ ನಾಯಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಹೊರಟಿದ್ದ ಕಾರು ಭೀಕರ Accident

ಮಧ್ಯರಾತ್ರಿ ಮನೆ ಮುಂದೆ ಬಂದು ನಾಯಿ ಹೊತ್ತೊಯ್ದ ಚಿರತೆ.!
ಘಟನೆ ಬೆನ್ನಲ್ಲೇ ಬಿಳಿಗಾರು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಪದೇಪದೇ ಚಿರತೆಗಳು ನಾಡಿಗೆ ಬರುತ್ತಿರುವುದರಿಂದ ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಚಿರತೆ ಸೆರೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
MUST WATCH : ಸಿನಿಮಾ ಸ್ಟೈಲಲ್ಲಿ ದರೋಡೆಗೆ ಯತ್ನ – ಚಿನ್ನದಂಗಡಿ ಮಾಲೀಕನ ಮೇಲೆ FIRING.!




