ರಾಜ್ಯದ ಯಜಮಾನಿಯರಿಗೆ ಗುಡ್ ನ್ಯೂಸ್ : 32ನೇ ಕಂತಿನ Gruha Lakshmi ಹಣ ಖಾತೆಗೆ ಜಮೆ!

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ಯೋಜನೆಯ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಹಣ ಜಮೆಯಾಗಲು ಆರಂಭವಾಗಿದ್ದು, ಈಗಾಗಲೇ ಹಲವು ಫಲಾನುಭವಿಗಳ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾವಣೆಯಾಗುತ್ತಿದೆ.
32ನೇ ಕಂತಿನ ‘ಗೃಹಲಕ್ಷ್ಮಿ’ ಹಣ ಖಾತೆಗೆ ಜಮೆ!
ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಪೂರ್ಣಗೊಂಡಿರುವ ಹಾಗೂ ಅಗತ್ಯ ಪ್ರಕ್ರಿಯೆಗಳನ್ನು ಮುಗಿಸಿರುವ ಅರ್ಹ ಮಹಿಳೆಯರಿಗೆ ಮೊದಲ ಆದ್ಯತೆಯಾಗಿ ಹಣ ಜಮೆಯಾಗುತ್ತಿದೆ. ಉಳಿದ ಅರ್ಹ ಫಲಾನುಭವಿಗಳ ಖಾತೆಗಳಿಗೂ ಶೀಘ್ರದಲ್ಲೇ ಹಣ ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ : Gruhalakshmi ಯೋಜನೆಗೆ ಮರು ಅರ್ಜಿ ಸಲ್ಲಿಕೆಗೆ ಫಲಾನುಭವಿಗಳ ಆಕ್ರೋಶ..!!

ಹಣ ವರ್ಗಾವಣೆಯಲ್ಲಿ ವಿಳಂಬ ಯಾಕೆ?
ಇನ್ನೂ ಕೆಲ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗದಿದ್ದರೆ ಆತಂಕಪಡುವ ಅಗತ್ಯವಿಲ್ಲ. ತಾಂತ್ರಿಕ ಕಾರಣಗಳು ಅಥವಾ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದ ಹಣ ವರ್ಗಾವಣೆಯಲ್ಲಿ ವಿಳಂಬವಾಗಿರಬಹುದು. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದಿರುವುದು, ಇ-ಕೆವೈಸಿ (e-KYC) ಪೂರ್ಣಗೊಳ್ಳದಿರುವುದು ಅಥವಾ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿರುವುದು ಪ್ರಮುಖ ಕಾರಣಗಳಾಗಿವೆ.
ಈ ರೀತಿಯ ಸಮಸ್ಯೆಗಳನ್ನು ಹೊಂದಿರುವ ಫಲಾನುಭವಿಗಳು ತಮ್ಮ ಹತ್ತಿರದ ಬ್ಯಾಂಕ್ ಶಾಖೆ ಅಥವಾ ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಅರ್ಹತೆ ಹೊಂದಿರುವ ಫಲಾನುಭವಿ ಖಾತೆಗೂ ಹಂತ ಹಂತವಾಗಿ ಹಣ
ಫಲಾನುಭವಿಗಳು ತಮ್ಮ ಮೊಬೈಲ್ಗೆ ಬರುವ ಬ್ಯಾಂಕ್ ಎಸ್ಎಂಎಸ್ (SMS), ಬ್ಯಾಂಕ್ ಪಾಸ್ಬುಕ್ ಎಂಟ್ರಿ ಅಥವಾ ಡಿಬಿಟಿ (DBT) ಕರ್ನಾಟಕ ಆ್ಯಪ್ ಮೂಲಕ ಹಣ ಬಂದಿರುವ ವಿವರಗಳನ್ನು ಸುಲಭವಾಗಿ ಪರಿಶೀಲಿಸಬಹುದು. ಆಧಾರ್ ಮತ್ತು ಬ್ಯಾಂಕ್ ಖಾತೆ ಸಕ್ರಿಯವಾಗಿದ್ದು, ನಿಯಮಾನುಸಾರ ಅರ್ಹತೆ ಹೊಂದಿರುವ ಪ್ರತಿಯೊಬ್ಬ ಫಲಾನುಭವಿಯ ಖಾತೆಗೂ ಹಂತ ಹಂತವಾಗಿ ಹಣ ತಲುಪಲಿದೆ.
ಇದನ್ನು ನೋಡಿ : ಪೇಮೆಂಟ್ ಕೊಟ್ಟು ಮಂತ್ರಿಯಾಗೋ ಸಂಸ್ಕೃತಿ ನಮ್ಮದಲ್ಲ ಅದು BJPಯದ್ದು ಎಂದ ZAMEER





