Bengaluru | ಅನಾರೋಗ್ಯ ಅಂತಾ ಔಷಧಿ ತೆಗೆದುಕೊಳ್ಳೋ ಮುನ್ನ ಹುಷಾರ್..! ಮೇಲೆ ಪ್ರತಿಷ್ಠಿತ ಕಂಪನಿ ಲೇಬಲ್,ಒಳಗೆ ನಕಲಿ ಔಷಧ..!

Bengaluru : ಕಡಿಮೆ ಬೆಲೆಯ ಔಷಧಿಗಳಿಗೆ ದುಬಾರಿ ಕಂಪನಿಗಳ ಲೇಬಲ್ ಅಂಟಿಸಿ ಕೋಟ್ಯಾಂತರ ರೂಪಾಯಿ ವಂಚನೆ ನಡೆಸುತ್ತಿದ್ದ ಭಾರೀ ನಕಲಿ ಔಷಧ ಜಾಲವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ಸಿ.ಕೆ. ತಾಂಡ್ಯ ಸಮೀಪದ ಫಾರ್ಮ್ ಹೌಸ್ನಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಮರು ಪ್ಯಾಕಿಂಗ್ ಘಟಕದ ಮೇಲೆ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ದಾಳಿ ನಡೆಸಿದ್ದು, ಸುಮಾರು 6 ಕೋಟಿ ರೂಪಾಯಿ ಮೌಲ್ಯದ ನಕಲಿ ಔಷಧಿ, ಲೇಬಲ್ ಹಾಗೂ ಇತರೆ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.
ನಕಲಿ ಔಷಧಿಗಳನ್ನು ಮರು ಪ್ಯಾಕಿಂಗ್
ಇದು ಸಾಮಾನ್ಯ ಫಾರ್ಮ್ ಹೌಸ್ ಅಲ್ಲ. ಬಹುರಾಷ್ಟ್ರೀಯ ಕಂಪನಿಗಳ ಹೆಸರಿನಲ್ಲಿ ನಕಲಿ ಔಷಧಿಗಳನ್ನು ಮರು ಪ್ಯಾಕಿಂಗ್ ಮಾಡಿ ಮಾರಾಟ ಮಾಡುತ್ತಿದ್ದ ಅಕ್ರಮ ಜಾಲದ ಅಡ್ಡೆ.
ಹೌದು,ಬೆಂಗಳೂರು ದಕ್ಷಿಣ ತಾಲೂಕಿನ ಸಿ.ಕೆ. ತಾಂಡ್ಯ ಬಳಿಯ ಫಾರ್ಮ್ ಹೌಸ್ನಲ್ಲಿ ಕಳೆದ ಒಂದು ವರ್ಷದಿಂದ ಈ ದಂಧೆ ನಡೆಯುತ್ತಿತ್ತು ಎಂಬುದು ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರಸಿದ್ಧ ಕಂಪನಿಗಳ ನಕಲಿ ಲೇಬಲ್ ಅಂಟಿಸಿ ಮಾರಾಟ
ಪ್ರಶಾಂತ್ ಎಂಬಾತ ಈ ಜಾಲದ ಪ್ರಮುಖ ರೂವಾರಿಯಾಗಿದ್ದಾನೆ ಎನ್ನಲಾಗುತ್ತಿದೆ. ತೆಲಂಗಾಣ ಹಾಗೂ ಹಿಮಾಚಲ ಪ್ರದೇಶಗಳಿಂದ ಕಡಿಮೆ ಬೆಲೆಯ ಔಷಧಿಗಳನ್ನು ತರಿಸಿಕೊಂಡು, ಅವುಗಳಿಗೆ ಪ್ರಸಿದ್ಧ ಕಂಪನಿಗಳ ನಕಲಿ ಲೇಬಲ್ ಅಂಟಿಸಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಕಳಿಸುತ್ತಿದ್ದರು ಅನ್ನೋ ಆರೋಪ ಕೇಳಿಬಂದಿದೆ.
READ THIS : ರಾಜ್ಯದ Govt ಆಸ್ಪತ್ರೆಗಳಲ್ಲಿ ಔಷಧಿ ಕೊರತೆ.!
ಕಂಪನಿಗಳ ಲೇಬಲ್ಗಳನ್ನು ಬಳಸಿ ಈ ವಂಚನೆ
ಕೇವಲ 600 ರೂಪಾಯಿ ಮೌಲ್ಯದ ಔಷಧಿಗೆ 6 ಸಾವಿರ ರೂಪಾಯಿ ಬೆಲೆಯ ಔಷಧಿಯ ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿತ್ತು. Pizzer, Xavitaz ಸೇರಿದಂತೆ ಹಲವು ಕಂಪನಿಗಳ ಹೆಸರಿನ ಲೇಬಲ್ಗಳನ್ನು ಬಳಸಿ ಈ ವಂಚನೆ ನಡೆಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

30ಕ್ಕೂ ಹೆಚ್ಚು ಅಧಿಕಾರಿಗಳು ಕಾರ್ಯಾಚರಣೆ
ಸ್ಥಳೀಯ ಬೀಟ್ ಪೊಲೀಸರಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ ರಾಮನಗರ ಎಸ್ಪಿ ಶ್ರೀನಿವಾಸ್ ಗೌಡ ಹಾಗೂ ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ದಾಳಿಯ ವೇಳೆ ನಕಲಿ ಔಷಧಿಗಳು, ಅವಧಿ ಮೀರಿದ ಔಷಧಿಗಳು, ಖಾಲಿ ಬಾಟಲ್ಗಳು, ಸಾವಿರಾರು ಲೇಬಲ್ಗಳು ಸೇರಿದಂತೆ ಅಪಾರ ಪ್ರಮಾಣದ ಸಾಮಗ್ರಿಗಳು ಪತ್ತೆಯಾಗಿವೆ.
ಆರೋಗ್ಯ ಕ್ಷೇತ್ರದಲ್ಲೇ ಭಾರೀ ಆತಂಕ
ಯಾವುದೇ ಪರವಾನಗಿ ಇಲ್ಲದೆ ಈ ಮರು ಪ್ಯಾಕಿಂಗ್ ಘಟಕ ಕಾರ್ಯನಿರ್ವಹಿಸುತ್ತಿತ್ತು. ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಈ ಜಾಲದ ವಿರುದ್ಧ ಇದೀಗ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ವಶಪಡಿಸಿಕೊಂಡ ಔಷಧಿಗಳ ಗುಣಮಟ್ಟ ಹಾಗೂ ಅವುಗಳ ಮೂಲದ ಕುರಿತು ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ. ಜನರ ಜೀವದೊಂದಿಗೆ ಆಟವಾಡುತ್ತಿದ್ದ ನಕಲಿ ಔಷಧಿ ಜಾಲದ ಮೇಲೆ ನಡೆದ ಈ ಕಾರ್ಯಾಚರಣೆ ಆರೋಗ್ಯ ಕ್ಷೇತ್ರದಲ್ಲೇ ಭಾರೀ ಆತಂಕ ಹುಟ್ಟಿಸಿದೆ. ಇನ್ನಷ್ಟು ಆರೋಪಿಗಳ ಸಂಪರ್ಕ ಹಾಗೂ ಈ ಜಾಲದ ವ್ಯಾಪ್ತಿ ಎಷ್ಟಿದೆ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

MUST WATCH : ಕಳೆದ 2 ತಿಂಗಳಿಂದ ಬಹಳ ಒದ್ದಾಡಿದ್ರು – B.C.NAGESH ನೆನೆದು BSY ಕಂಬನಿ




