
ಆಭರಣ ಗ್ರಾಹಕರಿಗೆ ಶುಭ ಶನಿವಾರ – GOLD RATE ಯಲ್ಲಿ ಇಳಿಕೆ
ಚಿನ್ನದ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಶನಿವಾರ ಕೊಂಚ ನೆಮ್ಮದಿ ಸಿಕ್ಕಿದೆ. ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ಚಿನ್ನದ ದರದಲ್ಲಿ ತುಸು ಇಳಿಕೆ ಕಂಡುಬಂದಿದೆ. ಅಕ್ಟೋಬರ್ 3ರಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹100 ಇಳಿಕೆಯಾಗಿ ₹13,675ಕ್ಕೆ ತಲುಪಿದೆ.
ಇದೇ ವೇಳೆ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹110 ಕಡಿಮೆಯಾಗಿದ್ದು, ₹14,918ಕ್ಕೆ ಇಳಿದಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ
22 ಕ್ಯಾರಟ್ ಚಿನ್ನದ ದರವು 8 ಗ್ರಾಂಗೆ ₹1,09,400, 10 ಗ್ರಾಂಗೆ ₹1,36,750 ಹಾಗೂ 100 ಗ್ರಾಂಗೆ ₹13,67,500ರಷ್ಟಿದೆ. 24 ಕ್ಯಾರಟ್ ಚಿನ್ನದ ದರವು 8 ಗ್ರಾಂಗೆ ₹1,19,344, 10 ಗ್ರಾಂಗೆ ₹1,49,180 ಹಾಗೂ 100 ಗ್ರಾಂಗೆ ₹14,91,800ರಷ್ಟಿದೆ.
READ THIS : ಇಂದು ಮತ್ತೆ ಏರಿಕೆ ಕಂಡ ಚಿನ್ನದ ದರ – ಇಲ್ಲಿದೆ ನೋಡಿ ರೇಟ್

ವಿವಿಧ ನಗರಗಳಲ್ಲಿ GOLD RATE
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | ₹13,675 | ₹14,918 |
| ಮುಂಬೈ | ₹13,675 | ₹14,918 |
| ದೆಹಲಿ | ₹13,690 | ₹14,933 |
| ಕೋಲ್ಕತಾ | ₹13,675 | ₹14,918 |
| ಹೈದರಾಬಾದ್ | ₹13,675 | ₹14,918 |
ಮೇಲಿನ ದರಗಳ ಪ್ರಕಾರ ಚೆನ್ನೈ, ಮುಂಬೈ, ಕೋಲ್ಕತಾ ಹಾಗೂ ಹೈದರಾಬಾದ್ನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹13,675 ಹಾಗೂ 24 ಕ್ಯಾರಟ್ ಚಿನ್ನದ ಬೆಲೆ ₹14,918 ಇದೆ. ದೆಹಲಿಯಲ್ಲಿ ಎರಡೂ ವಿಭಾಗಗಳಲ್ಲಿ ಬೆಲೆ ಸ್ವಲ್ಪ ಹೆಚ್ಚಿದ್ದು, 22 ಕ್ಯಾರಟ್ ಚಿನ್ನಕ್ಕೆ ₹13,690 ಹಾಗೂ 24 ಕ್ಯಾರಟ್ ಚಿನ್ನಕ್ಕೆ ₹14,933 ಇದೆ.

ಬೆಳ್ಳಿ ದರದಲ್ಲಿ ಬದಲಾವಣೆ ಇಲ್ಲ
ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದರೂ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ ಬೆಳ್ಳಿ ಪ್ರತಿ ಗ್ರಾಂಗೆ ₹235ರಷ್ಟಿದೆ. 10 ಗ್ರಾಂ ಬೆಳ್ಳಿಗೆ ₹2,350 ಹಾಗೂ ಒಂದು ಕೆ.ಜಿ. ಬೆಳ್ಳಿಗೆ ₹2,35,000 ಪಾವತಿಸಬೇಕಾಗಿದೆ.
MUST WATCH : ಹಿಂದೂ ಮಹಾ ಗಣಪತಿ ವಿಸರ್ಜನೋತ್ಸವ – ವಿಸರ್ಜನೆಗೆ ಹರಿದು ಬಂದ ಭಕ್ತಸಾಗರ




