
TUMAKURU : ಹಿಂದೂ ಮಹಾ ಗಣಪತಿ ವಿಸರ್ಜನೋತ್ಸವ – ವಿಸರ್ಜನೆಗೆ ಹರಿದು ಬಂದ ಭಕ್ತಸಾಗರ
ತುಮಕೂರು ನಗರದಲ್ಲಿ ಇಂದು ಹಿಂದೂ ಮಹಾಗಣಪತಿ ಶೋಭಾಯಾತ್ರೆಯ ಸಂಭ್ರಮ ಮನೆ ಮಾಡಿದೆ. ನಗರದ ಟೌನ್ಹಾಲ್ ಸಮೀಪದ ನಾಗರಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿಯ ಅದ್ಧೂರಿ ಶೋಭಾಯಾತ್ರೆಗೆ ಚಾಲನೆ ದೊರೆತಿದ್ದು, 18 ಅಡಿ ಎತ್ತರದ ಬೃಹತ್ ಗಣಪತಿ ಮೂರ್ತಿಯ ಭವ್ಯ ಮೆರವಣಿಗೆ ನಡೆಯುತ್ತಿದೆ.
ಶೋಭಾಯಾತ್ರೆಗೆ ವಿವಿಧ ಮಠಾಧೀಶರಿಂದ ಅದ್ಧೂರಿ ಚಾಲನೆ
ಇನ್ನು ವಿವಿಧ ಮಠಾಧೀಶರ ಸಮ್ಮುಖದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಚಾಲನೆ ನೀಡಲಾಗಿದೆ. ಗಣಪತಿ ಮೂರ್ತಿಯ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗಿಯಾಗಿದ್ದು, ವಾದ್ಯಮೇಳ ಹಾಗೂ ಸಾಂಸ್ಕೃತಿಕ ಕಲಾ ಪ್ರದರ್ಶನಗಳೊಂದಿಗೆ ಶೋಭಾಯಾತ್ರೆ ಸಾಗುತ್ತಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಅದ್ದೂರಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ
ನಾಗರಕಟ್ಟೆಯಿಂದ ಆರಂಭವಾಗಿರುವ ಶೋಭಾಯಾತ್ರೆ ಲಕ್ಕಪ್ಪ ಸರ್ಕಲ್, ಮಂಡಿಪೇಟೆ, ಸ್ವತಂತ್ರ ಚೌಕ, ಬಿಜಿಎಸ್ ಸರ್ಕಲ್ ಹಾಗೂ ಎಂಜಿ ರಸ್ತೆ ಮಾರ್ಗವಾಗಿ ಆಂಜನೇಯ ಸ್ವಾಮಿ ಸ್ಟ್ಯಾಚುವರೆಗೆ ಸಾಗಲಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಯ ಸಂಭ್ರಮ ಕಳೆಗಟ್ಟಿದೆ.
READ THIS : ನಾಗವಲ್ಲಿಯಲ್ಲಿ ಅದ್ದೂರಿ ಗಣಪತಿ ವಿಸರ್ಜನೋತ್ಸವ

TUMAKURU – ಶೋಭಾಯಾತ್ರೆಯಲ್ಲಿ ಭಾಗಿಯಾಗಲಿರೋ ಗಣ್ಯರು
ಇನ್ನು ಶೋಭಾಯಾತ್ರೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಕೆ.ಎಸ್. ಈಶ್ವರಪ್ಪ ಹಾಗೂ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಶೋಭಾಯಾತ್ರೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.
ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಾಗುವ ಶೋಭಾಯಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ.

MUST WATCH : ವೇದಾವತಿ ನೀರಿಗೆ ಮತ್ತೆ ಅಡ್ಡಿ – ಕಾಲುವೆ ದುರಸ್ತಿಗೆ ರೈತರ ಪಟ್ಟು.!




