
ದೀಪಾವಳಿ ಸಂಭ್ರಮದ ನಡುವೆ GOLD RATE ಏರಿಕೆ ಶಾಕ್!
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಚಿನ್ನಾಭರಣ ಖರೀದಿ ಜೋರಾಗಿರುವ ನಡುವೆಯೇ, ಗ್ರಾಹಕರಿಗೆ ಚಿನ್ನದ ಬೆಲೆ ಏರಿಕೆಯ ಶಾಕ್ ಎದುರಾಗಿದೆ.
24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆ
ಹಬ್ಬದ ಹೊಸ್ತಿಲಲ್ಲೇ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು, ಒಂದೇ ದಿನ ಅಪರಂಜಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ದಾಖಲಾಗಿದೆ. ನವೆಂಬರ್ 10ರಂದು 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಏರಿಕೆಯಾಗಿದ್ದು, ಒಂದು ಗ್ರಾಂ ಚಿನ್ನದ ದರದಲ್ಲಿ 103 ರೂಪಾಯಿ ಹೆಚ್ಚಳವಾಗಿದೆ.
READ THIS : ಗೋಲ್ಡ್ ರೇಟ್ನಲ್ಲಿ ಇಂದು ಮತ್ತೆ ಏರಿಕೆ – ರೇಟ್ ಚೆಕ್ ಮಾಡಿ

ಶುದ್ಧ GOLD RATE ಎಷ್ಟಿದೆ?
ಇದರೊಂದಿಗೆ ಒಂದು ಗ್ರಾಂ ಶುದ್ಧ ಚಿನ್ನದ ಬೆಲೆ 14 ಸಾವಿರದ 460 ರೂಪಾಯಿಗೆ ಏರಿಕೆಯಾಗಿದೆ. ಇನ್ನು 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1 ಸಾವಿರದ 30 ರೂಪಾಯಿ ಏರಿಕೆಯಾಗಿದ್ದು, ದರ 1 ಲಕ್ಷ 44 ಸಾವಿರದ 600 ರೂಪಾಯಿಗೆ ತಲುಪಿದೆ.
ಬೆಳ್ಳಿ ಬೆಲೆಯಲ್ಲಿ ಬದಲಾವಣೆಯಿಲ್ಲ
ಒಂದೆಡೆ ಚಿನ್ನದ ಬೆಲೆ ಏರಿಕೆಯಾಗಿದ್ದರೆ, ಇತ್ತ ಬೆಳ್ಳಿ ದರದಲ್ಲಿ ಯಾವುದೇ ಮಹತ್ವದ ಬದಲಾವಣೆ ಕಂಡುಬಂದಿಲ್ಲ. ಪ್ರತಿ ಕೆ.ಜಿ ಬೆಳ್ಳಿ ಬೆಲೆ 2.05 ಲಕ್ಷ ರೂಪಾಯಿ ದಾಖಲಿಸಿದೆ.

MUST WATCH : ಅಣ್ಣಾವ್ರ ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ..? – ಕಿಟಕಿ ಗಾಜುಗಳು ಪುಡಿಪುಡಿ..!




