
ಡಾ. RAJKUMAR ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ – ಸ್ಫೋಟದ ತೀವ್ರತೆಗೆ ಪುಡಿಪುಡಿಯಾದ ಮನೆಯ ಕಿಟಕಿ ಗಾಜುಗಳು!
ಗಾಜನೂರಿನಲ್ಲಿರುವ ಡಾ. ರಾಜ್ಕುಮಾರ್ ಅವರ ಸಂಬಂಧಿಕರ ಮನೆಯ ಬಳಿ ನಿಗೂಢ ಸ್ಫೋಟ ಸಂಭವಿಸಿದೆ. ತಮಿಳುನಾಡಿನ ಗಾಜನೂರಿನಲ್ಲಿ ಈ ಘಟನೆ ನಡೆದಿದ್ದು, ಸ್ಫೋಟದ ತೀವ್ರತೆಗೆ ಮನೆಯ ಕಿಟಕಿ ಗಾಜುಗಳು ಸಂಪೂರ್ಣವಾಗಿ ಒಡೆದುಹೋಗಿವೆ.
READ THIS : ಮನೆಯಲ್ಲಿ ನಿಗೂಢ ಸ್ಫೋಟ – ZERO TRAFIC ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಗಾಯಾಳುಗಳ ರವಾನೆ

ಕಚ್ಚಾ ಬಾಂಬ್ ದಾಳಿ?
ಕಚ್ಚಾ ಬಾಂಬ್ ದಾಳಿಯಾಗಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದ್ದು, ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ತಮಿಳುನಾಡಿನ ತಾಳವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ.

RAJKUMAR ಸಂಬಂಧಿಕರ ಮನೆಯಲ್ಲಿ ಸ್ಟೋಟ – ಇದು ಉದ್ದೇಶಪೂರ್ವಕ ಕೃತ್ಯವೇ?
ಒಟ್ಟಿನಲ್ಲಿ, ಡಾ. ರಾಜ್ಕುಮಾರ್ ಅವರ ಸಂಬಂಧಿಕರ ಮನೆಯ ಬಳಿ ಸಂಭವಿಸಿರುವ ಈ ನಿಗೂಢ ಸ್ಫೋಟ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ಕಚ್ಚಾ ಬಾಂಬ್ ಸ್ಫೋಟವೇ ಅಥವಾ ಬೇರೆ ಯಾವುದಾದರೂ ಕಾರಣದಿಂದ ಸಂಭವಿಸಿದ ಘಟನೆಯೇ ಎಂಬುದು ಪೊಲೀಸರ ತನಿಖೆಯಿಂದಷ್ಟೇ ಸ್ಪಷ್ಟ ಉತ್ತರ ಸಿಗಬೇಕಿದೆ.
MUST WATCH : ಸಿದ್ದು ಮನೆಗೆ ಡಿಕೆಶಿ ಭೇಟಿ ಕಾವೇರಿ ನಿವಾಸದಲ್ಲಿ ಸಿದ್ದು–ಡಿಕೆಶಿ ಸಭೆ!





