
BENGALURU : ನಿವಾಸಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್..! ಅನಧಿಕೃತ ಕಟ್ಟಡ ಸಕ್ರಮ ಶುಲ್ಕದಲ್ಲಿ ಶೇ.50 ರಿಯಾಯಿತಿ!
ಸಿಲಿಕಾನ್ ಸಿಟಿ ಬೆಂಗಳೂರಿನ ಸಾವಿರಾರು ನಿವಾಸಿಗಳಿಗೆ ರಾಜ್ಯ ಸರ್ಕಾರ ಮತ್ತು ಬಿಡಿಎ ಗುಡ್ ನ್ಯೂಸ್ ನೀಡಿದೆ. ಅನಧಿಕೃತ ನಿವೇಶನ ಮತ್ತು ಕಟ್ಟಡಗಳ ಸಕ್ರಮ ಶುಲ್ಕದಲ್ಲಿ ಬರೋಬ್ಬರಿ ಶೇಕಡಾ 50ರಷ್ಟು ವಿನಾಯಿತಿ ಘೋಷಿಸಲಾಗಿದೆ.
ಕಟ್ಟಡ ಸಕ್ರಮ ಶುಲ್ಕದಲ್ಲಿ ಶೇ.50 ವಿನಾಯಿತಿ
ಇದರ ಜೊತೆಗೆ ಬಿಡಿಎ ಕಾಯ್ದೆಯ ಅನ್ವಯ ಪ್ರಾಧಿಕಾರದ ಭೂಸ್ವಾಧೀನಕ್ಕೊಳಪಟ್ಟ ಜಮೀನಿನಲ್ಲಿ, ಸುಗ್ರೀವಾಜ್ಞೆ ದಿನಾಂಕಕ್ಕಿಂತ 12 ವರ್ಷಗಳ ಹಿಂದೆ ಅಂದರೆ 2008ಕ್ಕೂ ಮುನ್ನ ನಿರ್ಮಿಸಲಾದ ಮನೆ ಮತ್ತು ಕಟ್ಟಡಗಳನ್ನು ಮರುಮಂಜೂರಾತಿ ವ್ಯಾಪ್ತಿಯಲ್ಲಿ ಸಕ್ರಮಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
READ THIS : ಶಿಥಿಲಾವಸ್ಥೆ ಕಟ್ಟಡಗಳ ಮಾಲೀಕರುಗಳಿಗೆ GBA ನೋಟೀಸ್!

BENGALURU – ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ
ಇದಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮೂಲ ಕ್ರಯಪತ್ರ, ಫಾರ್ಮ್-15 ಋಣಭಾರ ಪ್ರಮಾಣಪತ್ರ, ಕಂದಾಯ ರಸೀದಿ, ಖಾತಾ ನಕಲು, ಮಂಜೂರಾದ ಕಟ್ಟಡದ ನಕ್ಷೆ, ನೀರು ಮತ್ತು ವಿದ್ಯುತ್ ಬಿಲ್ ಹಾಗೂ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕಾಗುತ್ತದೆ.
ಒಟ್ಟಿನಲ್ಲಿ, ಸಕ್ರಮ ಶುಲ್ಕದಲ್ಲಿ ಶೇಕಡಾ 50ರಷ್ಟು ವಿನಾಯಿತಿ ಹಾಗೂ ಆನ್ಲೈನ್ ಅರ್ಜಿ ಸಲ್ಲಿಕೆ ವ್ಯವಸ್ಥೆಯಿಂದ ಅರ್ಹ ಕಟ್ಟಡ ಮಾಲೀಕರಿಗೆ ಅನುಕೂಲವಾಗುವ ನಿರೀಕ್ಷೆಯಿದೆ. ಆದರೆ ಸಕ್ರಮದ ಅವಕಾಶ ಪಡೆಯಲು ಸರ್ಕಾರ ಮತ್ತು ಬಿಡಿಎ ನಿಗದಿಪಡಿಸಿರುವ ಅರ್ಹತಾ ಷರತ್ತುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

MUST WATCH : ಬಾಲಕೃಷ್ಣಗೆ ಓಪನ್ ವಾರ್ನಿಂಗ್! ರಾಜಣ್ಣ ಪರ ಗುಡುಗಿದ ಕಾಂಗ್ರೆಸ್ ನಾಯಕರು!




