
ಮದುವೆಯಾಗಿ 9 ತಿಂಗಳಲ್ಲೇ ಗೃಹಿಣಿ SUICIDE – ಗಂಡ, ಅತ್ತೆ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ
ಮದುವೆಯಾಗಿ ಕೇವಲ ಒಂಬತ್ತು ತಿಂಗಳಷ್ಟೇ ಕಳೆದಿತ್ತು. ಸುಂದರ ಸಂಸಾರದ ಕನಸು ಕಂಡಿದ್ದ 23 ವರ್ಷದ ಗೃಹಿಣಿಯೊಬ್ಬರು ಗಂಡನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಮಾರು 6 ಗಂಟೆ ವೇಳೆಗೆ ಸಿರಿಶಾ ತ್ಮಹತ್ಯೆ
ಮೃತ ಗೃಹಿಣಿಯನ್ನು 23 ವರ್ಷದ ಸಿರಿಶಾ ಎಂದು ಗುರುತಿಸಲಾಗಿದೆ. ಜಂಬೂಸವಾರಿ ದಿಣ್ಣೆ ಬಳಿಯ ಅಪಾರ್ಟ್ಮೆಂಟ್ನಲ್ಲಿ ಇಂದು ಮುಂಜಾನೆ ಸುಮಾರು 6 ಗಂಟೆ ವೇಳೆಗೆ ಸಿರಿಶಾ SUICIDE ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
READ THIS : ವರದಕ್ಷಿಣೆ ಕಿರುಕುಳ – ಪತಿ ಕುಟುಂಬಸ್ಥರಿಂದಲೇ ಕೊಲೆಯಾದ್ಲಾ ಪತ್ನಿ?

ವರದಕ್ಷಿಣೆಗಾಗಿ ಕಿರುಕುಳ!
ಇನ್ನು ಸಿರಿಶಾ ಸಾವಿನ ಹಿಂದೆ ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬಂದಿದೆ. ಪತಿ ಪ್ರಶಾಂತ್ ಹಾಗೂ ಅತ್ತೆ ರುಕ್ಮಿಣಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ಮಾನಸಿಕವಾಗಿಯೂ ಹಿಂಸೆ ನೀಡುತ್ತಿದ್ದರು. ಇದೇ ಕಾರಣಕ್ಕೆ ಸಿರಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
SUICIDE ಗೆ ಕಾರಣವೇನು?
ಘಟನೆ ಸಂಬಂಧ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆಯಿಂದಷ್ಟೇ ಸಾವಿನ ಹಿಂದಿನ ನೈಜ ಕಾರಣ ತಿಳಿದುಬರಬೇಕಿದೆ.
MUST WATCH : ವಿಜಯಲಕ್ಷ್ಮಿ ಟೆಂಪಲ್ ರನ್..! – ಪತಿ ಬಿಡುಗಡೆಗೆ ವಿಜಯಲಕ್ಷ್ಮಿ ಹರಸಾಹಸ..!




